ಕ್ಯಾಲಿಫೋರ್ನಿಯಾದಲ್ಲಿ ಟಗರು ಹವಾ, ಕಾರಿನ ನಂಬರ್ ಪ್ಲೇಟ್‌ಗೆ ಮನಸೋತ ಧನಂಜಯ್!

First Published | Sep 27, 2023, 3:49 PM IST

ಡಾಲಿ ಧನಂಜಯ್, ಟಗರು, ನಟ ರಾಕ್ಷಸ ಸೇರಿದಂತೆ ಹಲವು ಹೆಸರುಗಳಿಂದ ಜನಪ್ರಿಯವಾಗಿರುವ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಇದೀಗ ಅಮೆರಿಕದಲ್ಲಿ ಕಾರಿನ ನಂಬರ್ ಪ್ಲೇಟ್‌ಗ ಮನಸೋತಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲೂ ಟಗರು ಹವಾ ಜೋರಾಗಿದೆ.
 

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಭಿನ್ನ ಪಾತ್ರಗಳ ಮೂಲಕ ಎಲ್ಲರ ಮನಗೆದಿದ್ದಾರೆ. ಡಾಲಿ ಕರಿಯರ್‌ಗೆ ಹೊಸ ತಿರುವು ನೀಡಿದ ಚಿತ್ರ ಟಗರು. ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಅಭಿನಯದ ಈ ಸಿನಿಮಾ ಕನ್ನಡದ ಚಿತ್ರರಂಗದಲ್ಲೂ ಕೆಲ ದಾಖಲೆ ಬರೆದಿದಿದೆ.

ಈ ಚಿತ್ರದ ಯಶಸ್ಸಿನ ಬಳಿಕ ಡಾಲಿ ಧನಂಜಯ್ ಹೆಸರಿಗೆ ಟಗರು ಕೂಡ ಸೇರಿಕೊಂಡಿತ್ತು. ಈ ಟಗರ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೂರದ ಅಮೆರಿಕದಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ.

Tap to resize

ಡಾಲಿ ಧನಂಜಯ್ ಶೂಟಿಂಗ್ ನಿಮಿತ್ತ ಅಮೆರಿಕ ಪ್ರವಾಸದಲ್ಲಿದ್ದಾರೆ. ಈ ವೇಳೆ ಡಾಲಿ ಧನಂಜಯ್‌ಗೆ ಆಡಿ ಟಗರು ಸಾರಥಿಯಾಗಿದೆ. ಹೌದು, ಧನಂಜಯ್ ಆಡಿ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಈ ಕಾರಿನ ನಂಬರ್ ಪ್ಲೇಟ್ ಕ್ಯಾಲಿಫೋರ್ನಿಯಾ ಟಗರು.
 

ಆಡಿ ಕಾರಿನ ಪ್ರಯಾಣದ ಬಳಿಕ ಡಾಲಿ ಧನಂಜಯ್ ಕಾರಿನ ಮುಂದೆ ಫೋಟೋ ತೆಗೆಸಿಕೊಂಡಿದ್ದಾರೆ. ಟಗರ್ ನಂಬರ್ ಪ್ಲೇಟ್ ಕಾರು ಇದೀಗ ಹೊಸ ಸಂಚಲನ ಸೃಷ್ಟಿಸಿದೆ.
 

ಡಾಲಿ ಧನಂಜಯ್‌ ಕಾರು ಪ್ರಯಾಣ ಇಷ್ಟಪಡುತ್ತಾರೆ. ಚಿತ್ರರಂಗದಲ್ಲಿ ಯಶಸ್ಸು ಸಾಧಿಸುತ್ತಿದ್ದಂತೆ ಡಾಲಿ ಧನಂಜಯ್ ಕೆಂಪು ಬಣ್ಣದ ರೇಂಜ್ ರೋವರ್ ಕಾರು ಖರಿದಿಸಿದ್ದರು.

ಧನಂಜಯ್ ಅಭಿನಯದ ಹೊಯ್ಸಳ ಚಿತ್ರ ಭಾರಿ ಯಶಸ್ಸು ಕಂಡಿತ್ತು. ಈ ವೇಳೆ ಹೊಯ್ಸಳ ಚಿತ್ರ ನಿರ್ಮಾಪಕರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬರೋಬ್ಬರಿ 1.5 ಕೋಟಿ ರೂ ಮೌಲ್ಯದ ಟೋಯೋಯಾ ವೆಲ್‌ಫೈರ್ ಕಾರು ಉಡುಗೊರೆಯಾಗಿ ನೀಡಿದ್ದರು.

ಧನಂಜಯ್ ಬಳಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಕಾರಗಳಿವೆ. ಆದರೆ ಧನಂಜಯ್ ಈಗಲೂ ತಮ್ಮ ಅಪ್ಪ ಕೊಡಿಸಿದ ಟಿವಿಎಸ್ XL ಸೂಪರ್ ಮೊಪೆಡ್ ಸ್ಕೂಟರ್ ಇಟ್ಟುಕೊಂಡಿದ್ದಾರೆ.

Latest Videos

click me!