ಸಚಿನ್ 'ಮಾರುತಿ 800' to ಕಂಗನಾ 'BMW':ಸೆಲೆಬ್ರೆಟಿಗಳ ಮೊದಲ ಕಾರು ಯಾವುದು?

First Published | Dec 6, 2020, 6:59 PM IST

ಪ್ರತಿಯೊಬ್ಬರಿಗೆ ಮೊದಲ ಕಾರು, ಮೊದಲ ಬೈಕ್, ಮೊದಲ ಫೋನ್ ಮೇಲೆ ಪ್ರೀತಿ ಹೆಚ್ಚು. ಇಷ್ಟೇ ಅಲ್ಲ ಅದೆಷ್ಟೇ ವರ್ಷಗಳು ಉರುಳಿದರೂ, ಅದೆಷ್ಟೋ ಹೊಸ ವಾಹನ ಮನೆ ಸೇರಿಕೊಂಡರು ಮೊದಲ ವಾಹನ, ಮೊದಲ ಫೋನ್ ನೆನಪುಗಳು ಹಚ್ಚ ಹಸುರಾಗಿರುತ್ತದೆ. ಹೀಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಬಾಲಿವುಡ್ ಸೆಲೆಬ್ರೆಟಿಗಳ ಮೊದಲ ಕಾರು ಯಾವುದು? ಈ ಕುರಿತು ಮಾಹಿತಿ ಇಲ್ಲಿದೆ.

BMW ಇಂಡಿಯಾದ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗಸಚಿನ್ ತೆಂಡುಲ್ಕರ್ ಬಳಿ ಹಲವು BMW ಕಾರುಗಳಿವೆ. ಆದರೆ ಸಚಿನ್ ಮೊದಲು ಖರೀದಿಸದ ಕಾರು ಮಾರುತಿ 800.
ಮಾರುತಿ 800 ಬಳಿಕ ಸಚಿನ್, ಚಾಂಪಿಯನ್ ರೇಸರ್ ಮೈಕಲ್ ಶುಮಾಕರ್ ನೀಡಿದ ಫೆರಾರಿ ಸೇರಿದಂತೆ ಹಲವು ಕಾರುಗಳ ಮಾಲೀಕರಾಗಿದ್ದಾರೆ. ಆದರೆ ಸಚಿನ್ ತಮ್ಮ ಮೊದಲ ಮಾರುತಿ 800 ಕಾರನ್ನು ಹುಡುಕಿಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.
Tap to resize

ಬಾಲಿವುಡ್ ನಟಿ, ಅಜಯ್ ದೇವಗನ್ ಪತ್ನಿ ಕಾಜೋಲ್ ಬಳಿ BMW, ಆಡಿ ಸೇರಿದಂತೆ ದುಬಾರಿ ಕಾರುಗಳಿವೆ. ಆದರೆ ಕಾಜೋಲ್ ಮೊದಲು ಖರೀದಿಸಿದ ಕಾರು ಮಾರುತಿ ಸುಜುಕಿ 1000.( ಬಳಿಕ ಇದೇ ಕಾರು ಮಾರುತಿ ಎಸ್ಟೀಮ್ ಕಾರಾಗಿ ಬಿಡುಗಡೆಯಾಗಿತ್ತು)
ಬಾಲಿವುಡ್ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಮೊದಲು ಖರೀದಿಸಿದ ಕಾರು ಆಡಿ ಕ್ಯೂ 7 ಕಾರು. ಸದ್ಯ ದೀಪಿಕಾ ಬಳಿಕ ಮರ್ಸಿಡೀಸ್ ಮೇಬ್ಯಾಚ್, ಆಡಿ A8L ಸೇರಿದಂತೆ ಹಲವು ದುಬಾರಿ ಕಾರುಗಳಿವೆ.
ಅಲಿಯಾ ಭಟ್‌ಗೆ ಕಾರು ಹೊಸದಲ್ಲ. ಕಾರಣ ನಿರ್ದೇಶಕ ಮಹೇಶ್ ಭಟ್ ಬಳಿ ದುಬಾರಿ ಕಾರುಗಳಿತ್ತು. ಆಲಿಯಾ ತನ್ನ ಸಿನಿಮಾ ಆದಾಯದಿಂದ ಮೊದಲು ಖರೀದಿಸದ ಕಾರು ಆಡಿ ಕ್ಯೂ 7.
ಸದ್ಯ ಸಾಮಾಜಿಕ ಮಾದ್ಯಮದ ಮೂಲ ಭಾರಿ ಸದ್ದು ಮಾಡುತ್ತಿರುವ ಕಂಗನಾ ರನಾವತ್, ಮೊದಲು ಖರೀದಿಸದ ಕಾರು BMW 7 ಸೀರಿಸ್ ಬಿಳಿ ಬಣ್ಣದ ಕಾರು.
ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಖರೀದಿಸಿದ ಮೊದಲ ಬಾಲಿವುಡ್ ನಟಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರಿಯಾಂಕ ಚೋಪ್ರಾ , ಮೊದಲು ಖರೀದಿಸದ ಕಾರು ಮರ್ಸಿಡೀಸ್ ಬೆಂಝ್ ಎಸ್ ಕ್ಲಾಸ್
ಬಾಲಿವುಡ್ ಸ್ವೀಟ್ ಹಾರ್ಟ್ ಎಂದೇ ಗುರಿತಿಸಿಕೊಂಡಿರುವ ಕತ್ರೀನಾ ಕೈಫ್ ಮೊದಲು ಖರೀದಿಸಿದ ಕಾರು ಆಡಿ ಕ್ಯೂ 7 ಕಾರು. ಇತ್ತೀಚೆಗೆ ಸಲ್ಮಾನ್ ಖಾನ್ ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

Latest Videos

click me!