ಬೆಂಗಳೂರಿನ ಯಲಹಂಕದಲ್ಲಿರುವ ಪ್ರವೈಗ್ ಡೈನಾಮಿಕ್ಸ್ ಸ್ಟಾರ್ಟ್ ಅಪ್ ಕಂಪನಿ ಇದೀಗ ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ.
undefined
Extinction MK1 ಪ್ರಿಮಿಯಂ ಎಲೆಕ್ಟ್ರಿಕ್ ಕಾರು ಇದಾಗಿದೆ. ಈಗಾಗಲೇ ಪ್ರವೈಗ್ ಭಾರತದ ಟೆಸ್ಲಾ ಕಾರು ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ.
undefined
ಪ್ರವೈಗ್ ಡೈನಾಮಿಕ್ಸ್ ಕಂಪನಿಯ Extinction MK1 ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 500 ಕಿ.ಮೀ ಮೈಲೇಜ್ ನೀಡಲಿದೆ.
undefined
ಭಾರತದಲ್ಲಿ 500 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಸದ್ಯಕಿಲ್ಲ. ಹೀಗಾಗಿ ಗರಿಷ್ಠ ಮೈಲೇಜ್ ನೀಡಬಲ್ಲ ಕಾರು ಅನ್ನೋ ಮತ್ತೊಂದು ಹಿರಿಮೆಗೂ ಪ್ರವೈಗ್ ಪಾತ್ರವಾಗಿದೆ.
undefined
ಅಮೆರಿಕದ ಟೆಸ್ಲಾ ಮಾಡೆಲ್ 3 ಕಾರು ಒಂದು ಬಾರಿ ಚಾರ್ಜ್‌ಗೆ 507 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಇನ್ನು ವೋಕ್ಸ್‌ವ್ಯಾಗನ್ ID.3 ಕಾರು 500 ಕಿ.ಮೀ ಮೈಲೇಜ್ ನೀಡಲಿದೆ. ಈ ಎರಡು ಕಾರು ಭಾರತದಲ್ಲಿಲ್ಲ.
undefined
ಭಾರತದಲ್ಲಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ 452 ಕಿ.ಮೀ, ಎಂಜಿ ZX 340 ಕಿ.ಮೀ ಮೈಲೇಜ್. ಟಾಟಾ ನೆಕ್ಸಾನ್ 312 ಕಿ.ಮೀ ಮೈಲೇಜ್ ಹೊಂದಿದೆ.
undefined
ಪ್ರವೈಗ್ Extinction MK1 ಎಲೆಕ್ಟ್ರಿಕ್ ಕಾರಿನ ಮತ್ತೊಂದು ವಿಶೇಷತೆ ಎಂದರೆ ಕೇವಲ 30 ನಿಮಿಷದಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇದು ಅತ್ಯಾಧುನಿಕ ತಂತ್ರಜ್ಞಾನವಾಗಿದೆ.
undefined
ಭಾರತದಲ್ಲಿರುವ ಯಾವುದೇ ಎಲೆಕ್ಟ್ರಿಕ್ ಶೇಕಡಾ 80 ರಷ್ಟು ಚಾರ್ಜ್ ಮಾಡಲು ಕನಿಷ್ಠ 1 ಗಂಟೆ ಸಮಯ ಅತ್ಯವಶ್ಯಕಾಗಿದೆ. ಆದರೆ ಪ್ರವೈಗ್ ಡೈನಾಮಿಕ್ಸ್ ಕಂಪನಿಯ Extinction MK1 ಕೇವಲ 30 ನಿಮಿಷದಲ್ಲಿ ಚಾರ್ಜ್ ಆಗಲಿದೆ.
undefined
200 hp ಪವರ್ ಹೊಂದಿದ್ದು, ಗರಿಷ್ಠ ವೇಗ 196 ಕಿ.ಮೀ ಪ್ರತಿಗಂಟೆಗೆ. 5.4 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ ತಲುಪಲಿದೆ.2021ರ ಆರಂಭದಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ.
undefined