ಜಾಗ್ವಾರ್ to BMW; ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ!

First Published | Dec 6, 2020, 2:29 PM IST

ಸ್ಯಾಂಡಲ್‌ವುಡ್ ಸ್ಟಾರ್ ನಟ, ಹಿಂದಿ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲೂ ಅಪಾರ ಜನಮನ್ನಣೆಗಳಿಸಿರುವ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಕಿಚ್ಚ ಸುದೀಪ್ ಬಳಿ ಎಷ್ಟು ಕಾರುಗಳಿವೆ? ಅಭಿಮಾನಿಗಳಲ್ಲಿರುವ ಈ ಕುತೂಹಲ ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಸುದೀಪ್ ಕೆಲ ಸಂದರ್ಭಗಳಲ್ಲಿ ತಮ್ಮ ದುಬಾರಿ ಕಾರುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಬಳಿ ಇರುವ ದುಬಾರಿ ಕಾರುಗಳ ಕುರಿತ ವಿವರ ಇಲ್ಲಿದೆ.
 

ಕಿಚ್ಚ ಸುದೀಪ್ ಮಲ್ಟಿಟ್ಯಾಲೆಂಟೆಡ್ ನಟ. ನಿರ್ದೇಶಕ, ಸ್ಕ್ರೀನ್‌ರೈಟರ್, ನಿರ್ಮಾಪಕ, ಟಿವಿ ನಿರೂಪಕ, ಅದ್ಭುತ ಕ್ರಿಕೆಟಿಗ ಹೀಗೆ ಸುದೀಪ್ ಪ್ರತಿಭಾ ಕೌಶಲ್ಯದ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ.
ಕನ್ನಡದ ಅಭಿನಯ ಚಕ್ರವರ್ತಿ ಅನ್ನೋ ಬಿರುದು ಪಡೆದಿರುವ ಸುದೀಪ್, ಹಿಂದಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ಅಭಿಮಾನಿಗಳ ಮನ ಗೆದ್ದಿದ್ದಾರೆ.
Tap to resize

ನಟನೆ, ಆದಾಯ, ಲೈಫ್‌ಸ್ಟೈಲ್, ಮಾನವೀಯತೆ, ಸಾಮಾಜಿಕ ಕಳಕಳಿ ಸೇರಿದಂತೆ ಪ್ರತಿ ವಿಚಾರದಲ್ಲೂ ಸುದೀಪ್ ಶ್ರೀಮಂತ. ಇನ್ನು ಸುದೀಪ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ.
ಜಾಗ್ವಾರ್, ರೇಂಜ್ ರೋವರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಸುದೀಪ್ ಬಳಿ ಇವೆ. ಇನ್ನು ಬೈಕ್ ಕ್ರೇಝ್ ಕೂಡ ಸುದೀಪ್‌ಗೆ ತುಸು ಹೆಚ್ಚೇ ಇದೆ.
ಸುದೀಪ್ ರೇಂಜ್ ರೋವರ್ ವೋಗ್ಯ ಕಾರು ಹೊಂದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿರುವ ಹೊಚ್ಚ ಹೊಸ ರೇಂಜ್ ರೋವರ್ ವೋಗ್ಯ 3.0 ಕಾರಿನ ಎಕ್ಸ್ ಶೋ ರೂಂ ಬೆಲೆ 2.11 ಕೋಟಿ ರೂಪಾಯಿ
63.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಿಂದ ಆರಂಭಗೊಳ್ಳುವ ಜೀಪ್ ರಾಂಗ್ಲರ್ ವಾಹನವನ್ನೂ ಸುದೀಪ್ ಹೊಂದಿದ್ದಾರೆ. ರಾಂಗ್ಲರ್ ಜೀಪ್ ಜೊತೆ ಸುದೀಪ್ ಕೆಲ ಬಾರಿ ಕಾಣಿಸಿಕೊಂಡಿದ್ದಾರೆ.
ಜೀಪ್ ರಾಂಗ್ಲರ್ ಮಾತ್ರವಲ್ಲ, ಅದೇ ಕಂಪನಿಯ ಜೀಪ್ ಕಂಪಾಸ್ ಕೂಡ ಹೊಂದಿದ್ದಾರೆ. ಕಪ್ಪು ಬಣ್ಣದ ಜೀಪ್ ಕಂಪಾಸ್ ಸುದೀಪ್ ಬಳಿ ಇದೆ.
ಇತ್ತೀಚೆಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸುದೀಪ್‌ಗೆ BMW M5 ಕಾರು ಗಿಫ್ಟ್ ನೀಡಿದ್ದರು. 1.5 ಕೋಟಿ ಮೌಲ್ಯದ ಈ ಕಾರನ್ನು ಸಲ್ಮಾನ್ ಖಾನ್ ಸ್ವತಃ ಸುದೀಪ್ ಮನೆಗೆ ತೆರಳಿ ನೀಡಿದ್ದರು.
ಸಿಲ್ವರ್ ಬಣ್ಣದ ಜಾಗ್ವರ್ XJL ಸೆಡಾನ್ ಕಾರು ಕೂಡ ಸುದೀಪ್ ಬಳಿ ಇದೆ. 1 ಕೋಟಿ ರೂಪಾಯಿ ಮೌಲ್ಯದ ಈ ಕಾರಿನಲ್ಲಿ ಸುದೀಪ್ ನಗರದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.
ಕೆಂಪು ಬಣ್ಣದ ವೋಲ್ವೋ XC90 ಕಾರನ್ನು ಸುದೀಪ್ ಖರೀದಿಸಿದ್ದಾರೆ. ಈ ಕಾರಿನ ಆರಂಭಿಕ ಬೆಲೆ 81 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ.
ಕಾರುಗಳ ಜೊತೆಗೆ ಸುದೀಪ್ ಬಳಿ BMW ಸೇರಿದಂತೆ ಮೂರು ದುಬಾರಿ ಬೈಕ್‌ಗಳಿವೆ. ಇಷ್ಟೇ ಅಲ್ಲ ಇದರ ಜೊತೆಗೆ ಒಂದು ಸೈಕಲ್ ಕೂಡ ಇದೆ.

Latest Videos

click me!