ಭಾರತದಲ್ಲಿ ₹5 ಲಕ್ಷಕ್ಕೆ ಸಿಗುವ ಚೀಪೆಸ್ಟ್ ಎಲೆಕ್ಟ್ರಿಕ್ ಕಾರಿನ ಬೆಲೆ ಪಾಕಿಸ್ತಾನದಲ್ಲಿ ₹35 ಲಕ್ಷ!

Published : May 19, 2025, 05:36 PM IST

ಭಾರತದಲ್ಲಿ ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್‌ನಷ್ಟು ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರೊಂದು ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದೆ. ಇದು ಆ ದೇಶದ ಅತ್ಯಂತ ಅಗ್ಗದ ಇವಿ ಕಾರ್ ಅಂತೆ. ಭಾರತದಲ್ಲಿ ಸಾಮಾನ್ಯವಾಗಿ 4ರಿಂದ 5 ಲಕ್ಷ ರೂ.ಗೆ ಸಿಗುವ ಕಾರು ಪಾಕಿಸ್ತಾನದಲ್ಲಿ 35 ಲಕ್ಷ ರೂ. ಇದೆ ಎಂದು ತಿಳಿದುಬಂದಿದೆ.

PREV
16
ಭಾರತದಲ್ಲಿ ₹5 ಲಕ್ಷಕ್ಕೆ ಸಿಗುವ ಚೀಪೆಸ್ಟ್ ಎಲೆಕ್ಟ್ರಿಕ್ ಕಾರಿನ ಬೆಲೆ ಪಾಕಿಸ್ತಾನದಲ್ಲಿ ₹35 ಲಕ್ಷ!

ಭಾರತದಲ್ಲಿ ಅಗ್ಗದ ಕಾರು ಅಂದರೆ 4-5 ಲಕ್ಷ ರೂಪಾಯಿಗೆ ಸಿಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಅಗ್ಗದ ಕಾರಿನ ಬೆಲೆಯೇ 25-35 ಲಕ್ಷ ರೂ. ಆಗಿದೆ. ಚೀನಾದ ಕಂಪನಿಯೊಂದು ಪಾಕಿಸ್ತಾನದಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಇದೇ ಪಾಕಿಸ್ತಾನದ ಅತ್ಯಂತ ಅಗ್ಗದ ಇವಿ ಕಾರು. ಇದರ ಬೆಲೆ ಎಷ್ಟು ಕೇಳಿದರೆ ನೀವು ಶಾಕ್ ಆಗ್ತೀರಿ.

26

ಪಾಕಿಸ್ತಾನದಲ್ಲಿ ಅಗ್ಗದ ಎಲೆಕ್ಟ್ರಿಕ್ ಕಾರಿನ ಬೆಲೆ 35 ಲಕ್ಷ ರೂಪಾಯಿ ಆಗಿದೆ. ಚೀನಾದ ಇನ್ವೆರೆಕ್ಸ್ ಕಂಪನಿ ಇನ್ವೆರೆಕ್ಸ್ ಕ್ಸಿಯೊ ಇವಿ ಕಾರನ್ನು ಬಿಡುಗಡೆ ಮಾಡಿದೆ. ಫುಲ್ ಚಾರ್ಜ್‌ನಲ್ಲಿ 140 ಕಿ.ಮೀ. ಮಾತ್ರ ಹೋಗುತ್ತದೆ. ಭಾರತದ ಸ್ಕೂಟರ್‌ಗಳೇ ಇದಕ್ಕಿಂತ ಹೆಚ್ಚು ಮೈಲೇಜ್ ಕೊಡುತ್ತವೆ.

36
ಆಲ್ಟೊ ೮೦೦

ಆಲ್ಟೋ 800 ಕಾರು: ಪಾಕಿಸ್ತಾನದಲ್ಲಿ ವಾಹನಗಳ ಬೆಲೆ ತುಂಬಾ ದುಬಾರಿ. ಆಲ್ಟೊ ಕಾರಿನ ಬೆಲೆಯೇ 13 ರಿಂದ 14 ಲಕ್ಷ ರೂ. ಇದೆ. ಭಾರತದಲ್ಲಿ ಇದೇ ಕಾರು 3-4 ಲಕ್ಷ ರೂ.ಗೆ ಸಿಗುತ್ತದೆ. ಪಾಕಿಸ್ತಾನದ ಕರೆನ್ಸಿ ಮೌಲ್ಯ ಕಡಿಮೆ ಇರುವುದೇ ಇದಕ್ಕೆ ಕಾರಣ.

46

ಪಾಕಿಸ್ತಾನ ಆಟೋಮೊಬೈಲ್: ಇನ್ವೆರೆಕ್ಸ್ ಕ್ಸಿಯೊ 4-ಡೋರ್ ಎಲೆಕ್ಟ್ರಿಕ್ ಕಾರು. ಮೂರು ವೇರಿಯಂಟ್‌ಗಳಲ್ಲಿ ಲಭ್ಯ. ಬೇಸಿಕ್ ಮಾಡೆಲ್ ಬೆಲೆ 35 ಲಕ್ಷ ರೂ. ಇದೆ. ಟಾಪ್ ಮಾಡೆಲ್ ಬೆಲೆ 57 ಲಕ್ಷ ರೂ. ಆಗಿದೆ. ಚೀನಾದಲ್ಲಿ ತಯಾರಾದ ಈ ಕಾರನ್ನು ಲಿಂಗ್‌ಬಾಕ್ಸ್ ಇವಿ ಎಂದು ಕರೆಯುತ್ತಾರೆ.

56

ಇನ್ವೆರೆಕ್ಸ್ ಕ್ಸಿಯೊ ಇವಿ: ಕ್ಸಿಯೊ 140, ಕ್ಸಿಯೊ 220, ಕ್ಸಿಯೊ 320 - ಈ ಮೂರು ವೇರಿಯಂಟ್‌ಗಳಲ್ಲಿ ಲಭ್ಯ. ಬೆಲೆ ಕ್ರಮವಾಗಿ 35 ಲಕ್ಷ, 42 ಲಕ್ಷ ಹಾಗೂ 57 ಲಕ್ಷ ರೂ. ಆಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಆಯಾ ಕಾರಿನ ಸಾಮರ್ಥ್ಯದ ಮೇಲೆ 140 ರಿಂದ 320 ಕಿ.ಮೀ. ವರೆಗೆ ಹೋಗುತ್ತದೆ. ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.

66

ಇನ್ವೆರೆಕ್ಸ್ ಕ್ಸಿಯೊ ಇವಿ: 3,584 ಎಂಎಂ ಉದ್ದ, 1475 ಎಂಎಂ ಅಗಲ ಇರುವ ಚಿಕ್ಕ ಕಾರು ಇದು. 10.1 ಇಂಚಿನ ಟಚ್‌ಸ್ಕ್ರೀನ್, ರಿವರ್ಸ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಮುಂತಾದ ವೈಶಿಷ್ಟ್ಯಗಳಿವೆ.

Read more Photos on
click me!

Recommended Stories