ಥಾರ್ ಮರುಭೂಮಿಯಿಂದ ಸ್ಪೂರ್ತಿ ಪಡೆದ ಮಹೀಂದ್ರ ಥಾರ್ ಅರ್ಥ್ ಎಡಿಶನ್ ಕಾರು ಬಿಡುಗಡೆ!

First Published | Feb 28, 2024, 6:55 PM IST

ಥಾರ್ ಮರುಭೂಮಿಯಿಂದ ಪ್ರೇರಿತಗೊಂಡು ರಚಿಸಿದ ವಿಶೇಷ ಎಡಿಷನ್ ಕಾರು ಮಹೀಂದ್ರ ಥಾರ್ ಅರ್ಡ್ ಬಿಡುಗಡೆಯಾಗಿದೆ. ಡೆಸರ್ಟ್ ಫ್ಯೂರಿ ಬಣ್ಣದಿಂದ ಕೂಡಿರುವ ಈ ಕಾರು ಅತ್ಯಂತ ಆಕರ್ಷವಾಗಿದೆ. ಹೆಚ್ಚುವರಿ ಫೀಚರ್ಸ್, ಅತ್ಯಾಕರ್ಷಕ ಬೆಲೆಯಲ್ಲಿ ಈ ಕಾರು ಲಭ್ಯವಿದೆ. 

ಮಹೀಂದ್ರಾ ಥಾರ್ ಅರ್ಥ್ ಎಡಿಷನ್  ಬಿಡುಗಡೆಯಾಗಿದೆ. ಥಾರ್ ಮರುಭೂಮಿಯ ಸ್ಫೂರ್ತಿ ಪಡೆದು ಸ್ಪೆಷೆಲ್ ಎಡಿಶನ್ ಥಾರ್ ಅರ್ಥ್ ವಿನ್ಯಾಸಗೊಳಿಸಲಾಗಿದೆ. ಇದರ ಸಾಮರ್ಥ್ಯವು ಥಾರ್ ಮರುಭೂಮಿಯಲ್ಲೂ ತಿರುಗಾಡಲು ಅನುವು ಮಾಡಿಕೊಡುತ್ತದೆ. ಮರುಭೂಮಿಯಿಂದ ಪ್ರೇರಿತವಾದ ಬಣ್ಣ ಮತ್ತು ವಿನ್ಯಾಸದೊಂದಿಗೆ ಪರಿಸರದೊಂದಿಗೆ ಹೊಂದಿಕೊಳ್ಳುವ ಈ ಥಾರ್ ಅಡ್ವೆಂಚರ್ ಸಂಕೇತಿಸುತ್ತದೆ.
 

ಥಾರ್ ಅರ್ಥ್ ಎಡಿಷನ್ ಮಹೀಂದ್ರಾ ಥಾರ್‌ನ ಸಾಹಸ ಮತ್ತು ಅನ್ವೇಷಣೆಯ ಪರಂಪರೆಯನ್ನು ಆಧರಿಸಿದ್ದು, ಥಾರ್ ಉತ್ಸಾಹಿಗಳ ಸಮುದಾಯವನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. ವಿಶಿಷ್ಟವಾದ ಸ್ಯಾಟಿನ್ ಮ್ಯಾಟ್ 'ಡೆಸರ್ಟ್ ಫ್ಯೂರಿ' ಬಣ್ಣದ ಮೂಲಕ ಈ ಅಪೂರ್ವ ಎಸ್‌ಯುವಿಯ ವಿಶೇಷ ಎಡಿಷನ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಅದು 'ಥಾರ್ ಲೈಫ್' ಮೂಲಕ ಹೊಸ ಸಾಹಸ ಅನ್ವೇಷಣೆಗೆ ತೊಡಗಿಕೊಳ್ಳಲು ಪ್ರೇರೇಪಿಸುವಂತಿದೆ.

Tap to resize

ಥಾರ್ ಅರ್ಥ್ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ಮ್ಯಾನ್ಯುಯೆಲ್ ಕಾರಿಗೆ 15.40 ಲಕ್ಷ ರೂ, ಆಟೋಮ್ಯಾಟಿಕ್ ಕಾರಿಗೆ 16.99 ಲಕ್ಷ ರೂಪಾಯಿ ಹಾಗೂ ಡೀಸೆಲ್ ಮ್ಯಾನ್ಯುಯೆಲ್ ಕಾರಿಗೆ 16.15 ಲಕ್ಷ ರೂಪಾಯಿ ಹಾಗೂ ಡೀಸೆಲ್ ಆಟೋಮ್ಯಾಟಿಕ್ ಕಾರಿಗೆ 17.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ )ಬೆಲೆ ನಿಗದಿಪಡಿಸಾಗಿದೆ.

ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್‌ ವರ್ಷನ್ ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಆವೃತ್ತಿಗಳಲ್ಲಿ ಲಭ್ಯವಿದೆ. ಅರ್ಥ್ ಆವೃತ್ತಿಯು ಎಲ್ಎಕ್ಸ್ ಹಾರ್ಡ್ ಟಾಪ್ ವೇರಿಯಂಟ್ ನಲ್ಲಿ ವಿಶೇಷವಾದ 4x4 ಅನುಭವವನ್ನು ನೀಡುತ್ತದೆ.

ಡೆಸರ್ಟ್ ಫ್ಯೂರಿ ಸ್ಯಾಟಿನ್ ಮ್ಯಾಟ್ ಫಿನಿಶ್ ನ ಈ ಥಾರ್ ಎಡಿಷನ್ ಮರುಭೂಮಿಯ ಮರಳು ಮತ್ತು ಅದರ ವಿನ್ಯಾಸವನ್ನು ನೆನಪಿಸುತ್ತದೆ. ಸೊಗಸಾದ ವಿನ್ಯಾಸವು ಮರಳಿನ ಕಣಗಳನ್ನು ತೋರಿಸುವಂತಿದೆ. ಬಾಗಿಲುಗಳು ಮತ್ತು ರೇರ್ ಫೆಂಡರ್‌ನಲ್ಲಿನ ಡಿಕಾಲ್‌ಗಳು, ಸಿಲ್ವರ್ ಅಲಾಯ್ ಗಳು ಮತ್ತು ಮ್ಯಾಟ್ ಕಪ್ಪು ಬ್ಯಾಡ್ಜ್‌ ಗಳು ಅದರ ಅನನ್ಯತೆಯನ್ನು ಹೆಚ್ಚಿಸಿವೆ. ಬಿ-ಪಿಲ್ಲರ್‌ಗಳ ಮೇಲೆ ಇರುವ ಅರ್ಥ್ ಎಡಿಷನ್ ನ ಬ್ಯಾಡ್ಜ್ ವಿಶೇಷವಾಗಿ ಕಾಣಿಸುತ್ತದೆ.

ಒಳಾಂಗಣವು ಸೊಗಸಾಗಿದ್ದು, ಕಪ್ಪು ಬಣ್ಣದ ಬೇಸ್ ಮತ್ತು ಲೈಟ್‌ಬೀಜ್‌ಅಕ್ಸೆಂಟ್‌ಗಳ ಮರಳಿನ ಸ್ವಭಾವವನ್ನು ಸಂಕೇತಿಸುತ್ತದೆ. ಥಾರ್ ಅರ್ಥ್ ಎಡಿಷನ್ ಹೆಡ್‌ರೆಸ್ಟ್‌ ಗಳ ಮೇಲೆ ಡ್ಯೂನ್ ವಿನ್ಯಾಸಗಳನ್ನು ಹೊಂದಿರುವ ಬೀಜ್ ಲೆಥೆರೆಟ್ ಸೀಟುಗಳನ್ನು ಹೊಂದಿದೆ. 

ಏಸಿ ವೆಂಟ್‌ಗಳು, ಸ್ಟೀರಿಂಗ್ ವೀಲ್, ಸೆಂಟರ್ ಕನ್ಸೋಲ್ ಆಕ್ಸೆಂಟ್ ಮತ್ತು ಡೋರ್‌ಗಳಲ್ಲಿ ಥಾರ್ ಬ್ರ್ಯಾಂಡಿಂಗ್‌ ಇದೆ. ಪ್ರತಿಯೊಂದು ಥಾರ್ ಅರ್ಥ್ ಎಡಿಷನ್ ಎಸ್ ಯು ವಿಗಳು ಸರಣಿ ಸಂಖ್ಯೆ 1 ರಿಂದ ಪ್ರಾರಂಭವಾಗುವ ವಿಶಿಷ್ಟ ಸಂಖ್ಯೆಯ ಅಲಂಕಾರಿಕ ವಿಐಎನ್ ಪ್ಲೇಟ್‌ನೊಂದಿಗೆ ಬರುತ್ತವೆ.

ಥಾರ್ ಅರ್ಥ್ ಎಡಿಷನ್ ಮಹೀಂದ್ರಾದ ಶ್ರೇಷ್ಠತೆಯ ಸಂಪ್ರದಾಯವನ್ನು ಮುಂದುವರೆಸಿದೆ. ಗ್ರಾಹಕರಿಗೆ ಅಸಾಧಾರಣ ಅನುಭವಗಳನ್ನು ತಲುಪಿಸುವ ಬ್ರ್ಯಾಂಡ್‌ನ ಬದ್ಧತೆಯ ಸಂಕೇತವಾಗಿದೆ. ಇದು ಥಾರ್‌ನ ಅಗಾಧ ಯಶಸ್ಸನ್ನು ಮುಂದುವರೆಸಲಿದ್ದು, ಸಾಹಸಿಗರು ಮತ್ತು ಉತ್ಸಾಹಿಗಳಿಗೆ ಆದ್ಯತೆಯ ಎಸ್ ಯು ವಿ ಆಯ್ಕೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.

Latest Videos

click me!