ಈ ಕಾರಿನ ಬೆಲೆ 211 ಕೋಟಿ ರೂಪಾಯಿ, ಮೊದಲು ಬುಕ್ ಮಾಡಿದವರಿಗೆ ಮಾತ್ರ ಲಾ ರೋಸ್ ನೊಯಿರ್ ಭಾಗ್ಯ!

First Published | Aug 22, 2023, 4:29 PM IST

ರೋಲ್ಸ್ ರಾಯ್ಸ್ ಹೊಸ ಕಾರು ಬಿಡುಗಡೆ ಮಾಡಿದೆ. ಇದರ ಬೆಲೆ ಕೇಳಿದ ಮೇಲೆ ಖರೀದಿಗೆ ಮನಸ್ಸು ಮಾಡುವುದಾದರೆ, ತಕ್ಷಣವೇ ಮಾಡಬೇಕು. ಕಾರಣ ಇದು ಲಿಮಿಟೆಡ್ ಎಡಿಶನ್ ಕಾರು. ಇದರ ಹೆಸರು ರೋಲ್ಸ್ ರಾಯ್ಸ್ ಲಾ ರೋಸ್ ನೋಯಿರ್. ಇನ್ನು ಬೆಲೆ  211 ಕೋಟಿ ರೂಪಾಯಿ. ಅಂತಾದ್ದೇನಿದೆ ಈ ಕಾರಿನಲ್ಲಿ?

ಭಾರತದಲ್ಲಿ ದುಬಾರಿ ಕಾರುಗಳಿಗೇನು ಕಡಿಮೆ ಇಲ್ಲ. ಕೋಟಿ ಕೋಟಿ ರೂಪಾಯಿ ಕಾರುಗಳಲ್ಲಿ ಪ್ರತಿ ನಿತ್ಯ ಓಡಾಡುವ ಹಲವು ಶ್ರೀಮಂತರಿದ್ದಾರೆ. 10 ಕೋಟಿ ರೂಪಾಯಿ ಕಾರು, ಮಾಡಿಫಿಕೇಶನ್ ಮಾಡಿಸಿದ 15 ಕೋಟಿ ರೂಪಾಯಿ ಕಾರುಗಳು ರಸ್ತೆಗಳಲ್ಲಿ ಕಾಣಸಿಗುವುದು ಸಾಮಾನ್ಯ. 

ದುಬಾರಿ ಕಾರುಗಳ ಪೈಕಿ ಬ್ರಿಟಿಷ್ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು ಕೂಡ ಭಾರತದಲ್ಲಿದೆ. ಇದರ ಬೆಲೆ ಸರಿಸುಮಾರು 10 ಕೋಟಿ ರೂಪಾಯಿ. ಆದರೆ ಇದೀಗ ಎಲ್ಲಾ ದಾಖಲೆ ಪುಡಿಮಾಡಿದ ಕಾರು ಬಿಡುಗಡೆಯಾಗಿದೆ. ಇದು ರೋಲ್ಸ್ ರಾಯ್ಸ್ ಲಾ ರೋಸ್ ನೊಯಿರ್.
 

Latest Videos


ಹೊಚ್ಚ ಹೊಸ ರೋಲ್ಸ್ ರಾಯ್ಸ್ ಲಾ ರೋಸ್ ನೊಯಿರ್ ಕಾರು ಲಿಮಿಟೆಡ್ ಎಡಿಶನ್ ಕಾರು. ಅಂದರೆ ಇದು ಕೇವಲ ನಾಲ್ಕು ಕಾರುಗಳು ಮಾತ್ರ ಲಭ್ಯ. ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಮಾತ್ರ ಈ ಕಾರು ಸಿಗಲಿದೆ.

ಇದು ಮಾಸ್ಟರ್‌ಪೀಸ್ ಬಿಲ್ಟ್ ಕಾರು. ಹೀಗಾಗಿ ಇದರ ಬೆಲೆ ಬರೋಬ್ಬರಿ 211 ಕೋಟಿ ರೂಪಾಯಿ. ಈ ಕಾರು ಬುಕ್ ಮಾಡಿದವರಿಗೆ ಕಾರಿನ ಡಮ್ಮಿ ಕೀ ಹಿಡಿದು ಫೋಸ್ ಕೊಟ್ಟು ಡೆಲಿವರಿ ಪಡೆಯುವುದಲ್ಲ. ರೋಲ್ಸ್ ರಾಯ್ಸ್ ಮಾಲೀಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಿದೆ.

ಫ್ರಾನ್ಸ್ ಮೂಲಕ ಬಕಾರಾ ರೋಸ್ ಹೂವಿನಿಂದ ಸ್ಪೂರ್ತಿ ಪಡೆದು ಈ ಕಾರು ವಿನ್ಯಾಸ ಮಾಡಲಾಗಿದೆ. ಇನ್ನು ಕಾರು ಹಲವು ಬಣ್ಣಗಳಲ್ಲಿ ಕಂಗೊಳಲಿಸಲಿದೆ. ಮುಂಭಾಗದಿಂದ ನೋಡಿದರೆ ಒಂದು ಬಣ್ಣ, ಹಿಂಭಾಗದಿಂದ ನೋಡಿದರೆ ಮತ್ತೊಂದು ಬಣ್ಣದಲ್ಲಿ ಕಾಣಲಿದೆ.
 

ಈ ಕಾರಿನ ಹಿಂದೆ ಬರೋಬ್ಬರಿ 2 ವರ್ಷದ ಶ್ರಮವಿದೆ. ಪ್ರತಿಯೊಂದು ಅಂಶಗಳನ್ನು ಚರ್ಚಿಸಿ, ಅಭಿವೃದ್ಧಿ ಮಾಡಿ ಪರಿಶೀಲಿಸಿ, ಪರೀಕ್ಷಿಸಿ ತಯಾರಿಸಲಾಗಿದೆ. ಟ್ವಿನ್ ಟರ್ಬೋ ಚಾರ್ಜ್ 6.75 ಲೀಟರ್ ಎಂಜಿನ್ ಹೊಂದಿದೆ. 
 

601ಹೆಚ್‌ಪಿ ಪವರ್ ಹಾಗೂ 840 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಈ ಕಾರಿಗಿದೆ. ಲಾ ರೋಸ್ ನೊಯಿರ್ ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 250 ಕಿ.ಮೀ.
 

ರಿವೋವೇಬಲ್ ರೂಫ್, ಎಲೆಕ್ಟ್ರಾಕ್ರೋಮಿಕ್ ಗ್ರಾಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್ ಈ ಕಾರಿನಲ್ಲಿದೆ.
 

click me!