ಇಶಾ ಅಂಬಾನಿ ಬಳಿ ಇದೆ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್ ಕಲ್ಲಿನಾನ್, ಇದು ಭಾರತದ ಮೊದಲ ಮ್ಯಾಜಿಕ್ ಕಾರು!

First Published | Aug 22, 2023, 3:36 PM IST

ಅಂಬಾನಿ ಕುಟುಂಬದ ಬಳಿ ಇರುವ ಎಲ್ಲಾ ಕಾರುಗಳು ಐಷಾರಾಮಿ ಕಾರುಗಳೇ. ಎಲ್ಲವೂ ಕೋಟಿ ಕೋಟಿ ರೂಪಾಯಿ ಕಾರುಗಳು. ಆದರೆ ಒಟ್ಟು ಎಷ್ಟು ಕಾರಿದೆ ಅನ್ನೋದು ಲೆಕ್ಕಕ್ಕೆ ಸಿಕ್ಕಿಲ್ಲ. ಇದೀಗ ಅಂಬಾನಿ ಕುಟುಂಬದ ಕುಡಿ ಇಶಾ ಅಂಬಾನಿ ಬಳಿ ಭಾರತದ ಮೊದಲ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿದೆ. ಈ ಕಾರಿನ ಬೆಲೆ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಶ್ರೀಮಂತ ಉದ್ಯಮಿ  ಮುಕೇಶ್ ಅಂಬಾನಿ ಕುಟುಂಬದ ಎಲ್ಲರೂ ಐಷಾರಾಮಿ ಕಾರುಗಳನ್ನೇ ಬಳಸುತ್ತಾರೆ. ರೇಂಜ್ ರೋವರ್, ರೋಲ್ಸ್ ರಾಯ್ಸ್, ಮರ್ಸಿಡೀಸ್ ಬೆಂಜ್ ಸೇರಿದಂತೆ ಹೈಕ್ಲಾಸ್ ಕಾರುಗಳೇ ಇವರ ಸಾರಥಿ. 

mukesh ambani

ಅಂಬಾನಿ ಮನೆ ಆ್ಯಂಟಿಲಿಯಾದಲ್ಲಿ ಐಷಾರಾಮಿ ಕಾರುಗಳ ಪಾರ್ಕಿಂಗ್‌ಗೆ ಒಂದು ಸಂಪೂರ್ಣ ಮಹಡಿ ಮೀಸಲಿಡಲಾಗಿದೆ. ಈ ಪಾರ್ಕಿಂಗ್ ಸ್ಥಳದಲ್ಲಿ ಕೋಟಿ ಕೋಟಿ ರೂಪಾಯಿ ಬೆಲೆಯ ಐಷಾರಾಮಿ ಕಾರುಗಳೇ ತುಂಬಿದೆ. 

Tap to resize

ಈ ಕಾರುಗಳ ನಡುವೆ ಅಂಬಾನಿ ಕುಟುಂಬದ ಕುಡಿ ಇಶಾ ಅಂಬಾನಿ ಬಳಿ ಮ್ಯಾಜಿಕ್ ಕಾರು ಇದೆ. ಇದು ರೋಲ್ಸ್ ರಾಯ್ಸ್ ಕಲ್ಲಿನಾನ್. ಭಾರತದ ಕೆಲವು ಉದ್ಯಮಿಗಳು, ರಾಜಕಾರಣಿಗಳ ಬಳಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿದೆ. ಆದರೆ ಇಶಾ ಅಂಬಾನಿ ಕಾರು ಎಲ್ಲಕ್ಕಿಂತ ವಿಶೇಷ
 

ಇಶಾ ಅಂಬಾನಿ ಬಳಿ ಇರುವ ಕಲ್ಲಿನಾನ್ ಕಾರು ಬಣ್ಣ ಬದಲಿಸುವ ಕಾರಾಗಿದೆ. ದೂರದಿಂದ ನೋಡಿದಾಗ ವೊಯ್ಲೆಟ್ ಬಣ್ಣದಲ್ಲಿ ಕಂಗೊಳಿಸುತ್ತದೆ. ಹತ್ತಿರ ಬಂದ ಹಾಗೆ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಮತ್ತೆ ಇದು ವೊಯ್ಲೆಟ್ ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ.

ಈ ಕಾರನ್ನು ಒಂದೊಂದು ಭಾಗದಿಂದ ನೋಡಿದರೆ ಒಂದೊಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷ ತಂತ್ರಜ್ಞಾನ ಈ ಕಾರಿನಲ್ಲಿದೆ. ಹೀಗಾಗಿ ಈ ಕಾರಿನ ಬೆಲೆಯೂ ಅಧಿಕವಾಗಿದೆ.
 

ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನ ಬೆಲೆ 10 ಕೋಟಿ ರೂಪಾಯಿ. ಇದು ಅತ್ಯಂತ ದುಬಾರಿ ಕಾರಾಗಿದೆ. ಇಶಾ ಅಂಬಾನಿ ಇತ್ತೀಚೆಗೆ ಇದೇ ಕಾರಿನಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
 

ಇಶಾ ಅಂಬಾನಿ ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರಿನಲ್ಲಿ ಪ್ರಯಾಣಿಸಿದರೆ ಇಶಾ ಅಂಬಾನಿ ಹಾಗೂ ಅಂಬಾನಿ ಕುಟುಂಬಕ್ಕೆ ಭದ್ರತೆ ಒದಗಿಸುವ ಪಡೆಗಳು ಕೂಡ ಕೋಟಿ ಕೋಟಿ ರೂಪಾಯಿ ಕಾರಿನಲ್ಲಿ ತೆರಳುತ್ತದೆ. 
 

ಅಂಬಾನಿ ಕುಟಂಬಂಕ್ಕೆ ಭದ್ರತೆ ನೀಡುವ ಪೊಲೀಸರು ಹಾಗೂ ಭದ್ರತಾ ಪಡೆಗಳು ಮರ್ಸಿಡಿಸ್ ಬೆಂಜ್ G63 AMG, ರೇಂಜ್ ರೋವರ್ ಕಾರು ಬೆಂಗಾವಲು ವಾಹನವಾಗಿ ಬಳಕೆ ಮಾಡಲಾಗುತ್ತದೆ.

Latest Videos

click me!