ರೆಟ್ರೋ ಲುಕ್, ಸಿಟ್ರೊಯೆನ್ ಸಿ2 ಕಾನ್ಸೆಪ್ಟ್ ಕಾರು ಅನಾವರಣ, ಆಕರ್ಷಕ ವಿನ್ಯಾಸ ಕಾರಿನ ಬೆಲೆ ಎಷ್ಟು?

Published : Oct 14, 2026, 06:38 PM IST

ಸಿಟ್ರೊಯೆನ್ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸುತ್ತಿದೆ. ಇದೀಗ ಸಿಟ್ರೊಯೆನ್ ಜಾಗತಿಕ ಮಟ್ಟದಲ್ಲಿ ಸಿ2 ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಹೊಸ ಕಾರಿನ ಬೆಲೆ ಎಷ್ಟು? ಆಕರ್ಷಕ ಬಣ್ಣ, ಹೊಸತನಗಳ ಕಾರಿನಲ್ಲಿ ಹಲವು ವಿಶೇಷತೆಗಳಿವೆ.

PREV
15
ಸಿಟ್ರೊಯೆನ್ ಸಿ2 ಕಾರು

ಸಿಟ್ರೊಯೆನ್ ಆಟೋಮೊಬೈಲ್ ಭಾರತದಲ್ಲಿ ನಿಧಾನವಾಗಿ ಮಾರುಕಟ್ಟೆ ವಿಸ್ತರಿಸುತ್ತಿದೆ. ಎಸ್‌ಯುವಿ ಕಾರುಗಳ ಮೂಲಕ ಭಾರಿ ಸಂಚಲನ ಮೂಡಿಸಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಸಿಟ್ರೊಯೆನ್ ಸಿ2 ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಪ್ಯಾರಿಸ್ ಮೋಟಾರ್ ಶೋನಲ್ಲಿ ಈ ಕಾರು ಅನಾವರಣ ಮಾಡಲಾಗಿದೆ. ಆಕರ್ಷಕ ಬಣ್ಣ, ಅತ್ಯಾಕರ್ಷಕ ರೆಟ್ರೋ ವಿನ್ಯಾಸ ಎಲ್ಲರ ಗಮನಸೆಳೆದಿದೆ.

25
ಕಾರಿನ ಬ್ಯಾಟರಿ, ಮೈಲೇಜ್ ಎಷ್ಟು

ಸಿಟ್ರೊಯೆನ್ ಸಿ2 ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರು. 2028ರಲ್ಲಿ ಈ ಕಾರು ಬಿಡುಗಡೆಯಾಗಲಿದೆ. ಈ ಕಾರಿನ ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಪ್ಯಾಕ್, ಪವರ್, ತಂತ್ರಜ್ಞಾನ ಸೇರಿದಂತೆ ಇತರ ಮಾಹಿತಿಗಳನ್ನು ಕಂಪನಿ ಬಹಿರಂಗಪಡಿಸಿಲ್ಲ. ಕಾರಿನ ಮೈಲೇಜ್ ಸೇರಿದಂತೆ ಎಲ್ಲಾ ಮಾಹಿತಿಗಳು ಶೀಘ್ರದಲ್ಲೇ ಬಹಿರಂಗವಾಗಲಿದೆ ಎಂದು ಕಂಪನಿ ಹೇಳಿದೆ.

35
ರೆಟ್ರೋ ಶೈಲಿಯ ಕಾರು

80 ಹಾಗೂ 90ರ ದಶಕದಲ್ಲಿದ್ದ ಕಾರಿನ ಶೈಲಿಯಲ್ಲಿ ಹೊಸ ವಿನ್ಯಾಸದ ಮೂಲಕ ಕಾರು ಅನಾವರಣ ಮಾಡಲಾಗಿದೆ. ರೌಂಡ್ ಶೇಪ್ ಹೆಡ್‌ಲೈಟ್, ವೋಕ್ಸ್‌ವ್ಯಾಗನ್ ಬೀಟಲ್ ಮಾದರಿ ಹೋಲುವಂತೆ ಕೆಲ ವಿನ್ಯಾಸಗಳು ಅತ್ಯಂತ ಆಕರ್ಷವಾಗಿದೆ. ಕಾರಿನ ಚಕ್ರಗಳಲ್ಲೂ ವಿಶೇಷತೆ ಇದೆ. ಅತ್ಯಂತ ಆಕರ್ಷಕ ಹಾಗೂ ರೆಟ್ರೋ ಶೈಲಿಯಲ್ಲಿ ನೀಡಲಾಗಿದೆ.

45
ಇದು ಸಣ್ಣ ಕಾರು, ಬೆಲೆ ಕಡಿಮೆ?

ಸಿಟ್ರೊಯೆಟನ್ ಸಿ2 ಸಣ್ಣ ಕಾರು. ಕಾರಣ ಕಾರು 3.76 ಮೀಟರ್ ಉದ್ದ ಹೊಂದಿದೆ. 18 ಇಂಚಿನ ಸ್ಟೀಲ್ ವ್ಹೀಲ್ ಈ ಕಾರಿನ ಅಂದ ಹೆಚ್ಚಿದೆ. ಮೂಲಗಳ ಪ್ರಕಾರ ಇದರ ಬೆಲೆ 15000 ಯೂರೋ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ರೂಪಾಯಿಗಳಲ್ಲಿ 15 ರಿಂದ 16 ಲಕ್ಷ ರೂಪಾಯಿ ಆಗಲಿದೆ. ಸದ್ಯ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

55
ಭಾರತದಲ್ಲಿ ಬಿಡುಗಡೆಯಾಗುತ್ತಾ

ಸಿಟ್ರೊಯೆನ್ ಸಿ2 ಕಾನ್ಸೆಪ್ಟ್ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಾ ಅನ್ನೋದಕ್ಕೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಸದ್ಯ ಭಾರತದಲ್ಲಿ ಸಿಟ್ರೋಯೆನ್ ಮಾರುಕಟ್ಟೆ ವಿಸ್ತರಿಸುತ್ತಿದೆ. ಆದರೆ ಸಣ್ಣ ಕಾರು, 15 ರಿಂದ 16 ಲಕ್ಷ ರೂಪಾಯಿ ಎಂದರೆ ಭಾರತದಲ್ಲಿ ಭಾರಿ ಸಂಚಲನ ಮೂಡಿಸುವ ಸಾಧ್ಯತೆ ಕಡಿಮೆ. ಆದರೆ ಆಕರ್ಷಕ ಬೆಲೆಯೊಂದಿಗೆ ಕಾರು ಭಾರತಕ್ಕೂ ಕಾಲಿಡುವ ದಿನ ದೂರವಿಲ್ಲ.

Read more Photos on
click me!

Recommended Stories