ರೆನಾಲ್ಟ್ ಕಿಗರ್ SUV ಕಾರು ಬಿಡುಗಡೆ ದಿನಾಂಕ ಫಿಕ್ಸ್; ಆಕರ್ಷಕ ಕಾರಿನಿಂದ ಹೆಚ್ತಾಯ್ತು ಪೈಪೋಟಿ !

First Published | Jan 5, 2021, 9:27 PM IST

ಭಾರತದಲ್ಲಿ ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಪ್ರತಿ ಕಂಪನಿ ಸಬ್ ಕಾಂಪಾಕ್ಟ್ SUV ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಕಿಯಾ ಸೊನೆಟ್ ಸೇರಿದಂತೆ ಹಲವು ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಈ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರೆನಾಲ್ಟ್ ಇಂಡಿಯಾ ಕಿಗರ್ ಕಾರು ಬಿಡುಗಡೆ ಮಾಡುತ್ತಿದೆ. ಲಾಂಚ್ ಡೇಟ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಭಾರತದ ಕಾರು ಮಾರುಕಟ್ಟೆಯಲ್ಲಿ SUV ಕಾರುಗಳ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಸಬ್ ಕಾಂಪಾಕ್ಟ್ SUV ಕಾರುಗಳ ಬೇಡಿಕೆ ಜೊತೆಗೆ ಪೈಪೋಟಿ ಹೆಚ್ಚಾಗಿದೆ.
undefined
ರೆನಾಲ್ಟ್ ಇಂಡಿಯಾ ಇದೀಗ ತನ್ನ ಬಹುನಿರೀಕ್ಷಿತ ಕಿಗರ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಇದೇ ತಿಂಗಳು, ಅಂದರೆ ಜನವರಿ 28ರಂದು ಕಿಗರ್ ಕಾರು ಜಾಗತಿಕ ಮಾರುಕಟ್ಟೆ ಪ್ರವೇಶಿಸಲಿದೆ.
undefined

Latest Videos


ರೆನಾಲ್ಟ್ ಟ್ರೈಬರ್ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನೂತನ ಕಿಗರ್ ಕಾರು ಉತ್ಪಾದನೆಯಾಗಿದೆ. ವಿಶೇಷ ಅಂದರೆ ಫ್ರಾನ್ಸ್ ಕಾರ್ಪೋರೇಟ್ ಡಿಸೈನ್ ಹಾಗೂ ರೆನಾಲ್ಟ್ ಇಂಡಿಯಾ ಈ ಕಾರಿನ ಡಿಸೈನ್ ಮಾಡಿದೆ. ಹೀಗಾಗಿ ಅತ್ಯಾಕರ್ಷ ಕಾರು ಎಲ್ಲರ ಗಮನಸೆಳೆಯುತ್ತಿದೆ.
undefined
ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಕಿಯಾ ಸೊನೆಟ್, ನಿಸಾನ್ ಮ್ಯಾಗ್ನೈಟ್ ಸೇರಿದಂತೆ ಭಾರತದಲ್ಲಿರುವ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಇದೀಗ ರೆನಾಲ್ಟ್ ಕಿಗರ್ ಬಿಡುಗಡೆಯಾಗುತ್ತಿದೆ.
undefined
ಭಾರತದಲ್ಲಿ ರೆನಾಲ್ಟ್ ಡಸ್ಟರ್, ಕ್ವಿಡ್ ಹಾಗೂ ಟ್ರೈಬರ್ ಕಾರುಗಳು ಲಭ್ಯವಿದೆ. ಇದೀಗ 4ನೇ ಕಾರಾಗಿ ಕಿಗರ್ ಸೇರಿಕೊಳ್ಳುತ್ತಿದೆ. ಈ ಮೂಲಕ ಭಾರತದ ಆಟೋಮೊಬೈಲ್ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ರೆನಾಲ್ಟ್ ಮುಂದಾಗಿದೆ.
undefined
ರೆನಾಲ್ಟ್ ಇಂಡಿಯಾ ಬಿಡುಗಡೆ ಮಾಡುತ್ತಿರು ಕಿಗರ್ ಟರ್ಬೋ ಎಂಜಿನ್ ಹೊಂದಿದೆ. ಆರಾಮದಾಯಕ ಡ್ರೈವ್, ಹೆಚ್ಚಿನ ಕಾರ್ಯಕ್ಷಮತೆ, ಪರಿಣಾಮಕಾರಿ ಎಂಜಿನ್ ಆಯ್ಕೆ ಹೊಂದಿದೆ.
undefined
ಸ್ಪೋರ್ಟೀವ್ ಲುಕ್ ಹೊಂದಿರುವ ಕಿಗರ್, 210mm ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ.19 ಇಂಜಿನ್ ಆಲೋಯ್ ವೀಲ್ಹ್, ಹಿಂಭಾಗದಲ್ಲಿ ಸ್ಕಿಡ್ ಪ್ಲೇಟ್‌ಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
undefined
LED ಹೆಡ್‌ಲೈಟ್ಸ್, LED ಟೈಲ್ ಲ್ಯಾಂಪ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗರಿಷ್ಠ ಫೀಚರ್ಸ್ ಹೊಂದಿದೆ. ಕಾರಿನ ಬೆಲೆ ಶೀಘ್ರದಲ್ಲೇ ಬಹಿರಂಗವಾಗಲಿದೆ.
undefined
click me!