ನಿಸಾನ್ ಮ್ಯಾಗ್ನೈಟ್ ಕಾರು ಭಾರತದ ಸಬ್ ಕಾಂಪಾಕ್ಟ್ SUV ಕಾರುಗಳಲ್ಲಿ ಹೊಸ ಸಂಚಲನ ಮೂಡಿಸಿದೆ ಕಾರು. ಕಾರಣ ಬಿಡುಗಡೆಯಾದ ಬೆನ್ನಲ್ಲೇ ಆಕರ್ಷಕ ಆಫರ್ ಮೂಲಕ ಕಾರು ಮಾರಾಟಕ್ಕೆ ಲಭ್ಯವಾಗಿತ್ತು.
ಡಿಸೆಂಬರ್ ತಿಂಗಳಲ್ಲಿ ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಯಾಗಿದೆ. ಇದರ ಆರಂಭಿಕ 4.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಮೂಲಕ ಮಾರುಕಟ್ಟೆ ಪ್ರವೇಶ ಪಡೆದಿದೆ.
ಇದೀಗ ಹೊಸ ವರ್ಷದ ಆರಂಭದಲ್ಲೇ ನೂತನ ನಿಸಾನ್ ಮ್ಯಾಗ್ನೈಟ್ ಕಾರಿನ ಸೇಫ್ಟಿ ಸ್ಟಾರ್ ಬಹಿರಂಗವಾಗಿದೆ. ನಿಸಾನ್ ಮ್ಯಾಗ್ನೈಟ್ 4 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಉತ್ತಮ ಸುರಕ್ಷತೆ ಒದಗಿಸಬಲ್ಲ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಟಾಟಾ ನೆಕ್ಸಾನ್ ಹಾಗೂ ಮಹೀಂಗ್ರ XUV300 ಕಾರು ಗರಿಷ್ಠ ಸೇಫ್ಟಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಇದೀಗ ನಿಸಾನ್ ಮ್ಯಾಗ್ನೈಟ್ 4 ಸ್ಟಾರ್ ಪಡೆಯುವ ಮೂಲಕ ಉತ್ತಮ ಸೇಫ್ಟಿ ಹೊಂದಿದ ಕಾರಾಗಿ ಹೊರಹೊಮ್ಮಿದೆ.
ಏಷ್ಯನ್ ಎಎನ್‌ಸಿಎಪಿ( ASEAN NCAP ) ನಡೆಸಿದ ಸುರಕ್ಷತಾ ಫಲಿತಾಂಶದಲ್ಲಿ 4 ಸ್ಟಾರ್ ಪಡೆಯುವಲ್ಲಿ ಮ್ಯಾಗ್ನೈಟ್ ಯಶಸ್ವಿಯಾಗಿದೆ. ವಯಸ್ಕರ ಹಾಗೂ ಮಕ್ಕಳ ಪ್ರಯಾಣದಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.
ಬಿಡುಗಡೆಯಾದ ಕೆಲೆವೇ ದಿನಗಳಲ್ಲಿ 15,000 ಬುಕಿಂಗ್ ಪಡೆದ ನಿಸಾನ್ ಮ್ಯಾಗ್ನೈಟ್ ಹೊಸ ದಾಖಲೆ ಬರೆದಿದೆ. ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಬುಕಿಂಗ್ ದಾಖಲೆ ಬರೆದಿದೆ.
1.0 ಲೀಟರ್ ಎಂಜಿನ್ ಹೊಂದಿರುವ ನಿಸಾನ್ ಮ್ಯಾಗ್ನೈಟ್, ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ CVT ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.
ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಮಾರುತಿ ಬ್ರಿಜಾ, ಹ್ಯುಂಡೈ ವೆನ್ಯೂ ಸೇರಿದಂತೆ ಸಬ್‌ಕಾಂಪಾಕ್ಟ್ SUVಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಮ್ಯಾಗ್ನೈಟ್ ಕಾರು ಬಿಡುಗಡೆಯಾಗಿದೆ.