ಪೆಟ್ರೋಲ್ ಡೀಸೆಲ್ ಬೆಲೆ ದಿನಂದ ದಿನಕ್ಕೆ ಏರಿಕೆಯಾಗುತ್ತಿದೆ. ವಾಹನ ನಿರ್ವಹಣೆ ದುಬಾರಿಯಾಗುತ್ತಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಕೈಗೆಟುಕುವ ದರದಲ್ಲಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್ ಮಾಡುತ್ತಿದೆ. ಈ ಕುರಿತು ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇತ್ತ ಇಂಧನ ಮಿತ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಾಹನ ನಿರ್ವಹಣೆ, ಸಾರಿಗೆ ವೆಚ್ಚಗಳು ದುಬಾರಿಯಾಗುತ್ತಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಬಾರಿಯ ಪರಿಸರ ದಿನಾಚರಣೆಗೆ ಮಾರುತಿ ಸುಜುಕಿಯಿಂದ ಫ್ಲೆಕ್ಸ್ ಫ್ಯೂಯೆಲ್ ಕಾರು ಬಿಡುಗಡೆಯಾಗುತ್ತಿದೆ ಎಂದಿದ್ದಾರೆ.
25
ಮಾರುತಿ ಫ್ಲೆಕ್ಸ್ ಫ್ಯೂಯೆಲ್ ಕಾರು
ಜೂನ್ 5 ರಂದು ದೆಹಲಿಯಲ್ಲಿ ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್ ಮಾಡುತ್ತಿದೆ. ಎಥೆನಾಲ್ ಹಾಗೂ ಪೆಟ್ರೋಲ್ ಮಿಶ್ರಿತ ಇಂಧನದಲ್ಲಿ ಓಡುವ ಕಾರು ಇದಾಗಿದೆ. ಭಾರತ ಆಟೋ ಎಕ್ಸ್‌ಫೋದಲ್ಲಿ ಈಗಾಗಲೇ ಮಾರುತಿ ಸುಜುಕಿ ಫ್ರಾಂಕ್ಸ್ ಹಾಗೂ ವ್ಯಾಗನ್ಆರ್ ಫ್ಲೆಕ್ಸ್ ಫ್ಯೂಯೆಲ್ ಕಾರು ಪ್ರದರ್ಶನ ಮಾಡಿತ್ತು. ಇದೀಗ ಜೂನ್ 5 ರಂದು ಯಾವ ಕಾರು ಲಾಂಚ್ ಆಗುತ್ತಿದೆ ಅನ್ನೋ ಕುತೂಹಲ ಮನೆಮಾಡಿದೆ.
35
ಕ್ರಾಂತಿ ಸೃಷ್ಟಿಸಲು ಸಜ್ಜಾದ ಮಾರುತಿ
ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯೆಲ್ ಕುರಿತು ಈಗಾಗಲೇ ಹಲವು ಪರೀಕ್ಷೆಗಳನ್ನು ನಡೆಸುತ್ತಿದೆ. ಜೂನ್ 5ರಂದು ಬಿಡುಗಡೆಯಾಗಲಿರುವ ಫ್ಲೆಕ್ಸ್ ಫ್ಯೂಯೆಲ್ ಕಾರು ಭಾರತದಲ್ಲಿ ಹೊಸ ಕ್ರಾಂತಿ ಸೃಷ್ಟಿಸುವ ಸಾಧ್ಯತೆ ಇದೆ. ಇದರಿಂದ ಭಾರತ ಇಂಧನ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ.
ಸದ್ಯ ಭಾರತದಲ್ಲಿ ಪೆಟ್ರೋಲ್ ಹಾಗೂ ಎಥೆನಾಲ್ ಮಿಶ್ರಣ ಪ್ರಮಾಣ ಇ20. ಈಗಾಗಲೇ ಇ25, ಇ27, ಇ30 ಮಿಶ್ರಣ ಪ್ರಮಾಣದ ಇಂಧನ ಲಭ್ಯವಿದೆ. ಇದನ್ನು ಹಂತ ಹಂತವಾಗಿ ಏರಿಕೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಇ100 ಎಥೆನಾಲ್ ಇಂಧನ ಬಳಕೆಯತ್ತ ಭಾರತ ಹೆಜ್ಜೆ ಇಡಲು ಮುಂದಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
55
ಹಲವು ಆಟೋ ಕಂಪನಿಗಳಿಂದ ಫ್ಲೆಕ್ಸ್ ಫ್ಯೂಯೆಲ್ ಕಾರು
ಟೋಯಾಟಾ, ಟಾಟಾ ಮೋಟಾರ್ಸ್, ಮಹೀಂದ್ರ ಸಂಸ್ಥೆಗಳು ಫ್ಲೆಕ್ಸ್ ಫ್ಯೂಯೆಲ್ ಕಾರು ಪ್ರದರ್ಶಿಸಿದೆ. ಶೀಘ್ರದಲ್ಲೇ ಭಾರತದಲ್ಲಿ ಫ್ಲೆಕ್ಸ್ ಫ್ಯೂಯೆಲ್ ಕಾರು ಹೊಸ ಅಧ್ಯಾಯ ಬರೆಯಲಿದೆ. ಇದೀಗ ಮಾರುತಿ ಮಹತ್ವದ ಹೆಜ್ಜೆ ಇಡುತ್ತಿದೆ.