ನಿಸಾನ್ ಬಿಡುಗಡೆ ಮಾಡಿರುವ ಮ್ಯಾಗ್ನೈಟ್ ಸಬ್ ಕಾಂಪಾಕ್ಟ್ SUV ಕಾರು ಭಾರತದಲ್ಲಿ ಭಾರಿ ಬೇಡಿಕೆ ಸೃಷ್ಟಿಸಿದೆ. 2020ರ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಗೊಂಡ ಮ್ಯಾಗ್ನೈಟ್ ಇದೀಗ ಹಲವು ದಾಖಲೆ ಬರೆದಿದೆ.
ಇದರ ನಡುವೆ ನಿಸಾನ್ ಮ್ಯಾಗ್ನೈಟ್ ಕಾರಿನ ಕ್ರಾಶ್ ಟೆಸ್ಟ್ ವರದಿ ಬಹಿರಂಗವಾಗಿದೆ. ಏಷ್ಯನ್ NCAP ನಡೆಸಿದ ಮ್ಯಾಗ್ನೈಟ್ ಕಾರಿನ ಕ್ರಾಶ್ ಟೆಸ್ಟ್‌ನಲ್ಲಿ ಮ್ಯಾಗ್ನೈಟ್ 4 ಸ್ಟಾರ್ ರೇಟಿಂಗ್ ಪಡೆದಿದೆ.
ಕ್ರಾಶ್ ಟೆಸ್ಟ್‌ನಲ್ಲಿ ಗರಿಷ್ಠ ರೇಟಿಂಗ್ 5 ಸ್ಟಾರ್ ಆಗಿದ್ದು, ನಿಸಾನ್ ಮ್ಯಾಗ್ನೈಟ್ 4 ಸ್ಟಾರ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಗ್ಗದ ದರದಲ್ಲಿ ಸುರಕ್ಷತೆಯ ಕಾರು ನೀಡಿದ ಹೆಗ್ಗಳಿಕೆಗೆ ನಿಸಾನ್ ಪಾತ್ರವಾಗಿದೆ
ವಯಸ್ಕರ ಸುರಕ್ಷತೆಯಲ್ಲಿ 39.02 ಅಂಕ ಗಳಿಸಿದ ನಿಸಾನ್ ಮ್ಯಾಗ್ನೈಟ್, ಮಕ್ಕಳ ಸುರಕ್ಷತೆಯಲ್ಲಿ 16.31 ಅಂಕ ಸಂಪಾದಿಸಿದೆ. ಈ ಮೂಲಕ ಒಟ್ಟು 4 ಸ್ಟಾರ್ ರೇಟಿಂಗ್ ಪಡೆದಿದೆ
ನಿಸಾನ್ ಮ್ಯಾಗ್ನೈಟ್ ಭಾರತದಲ್ಲಿ ಲಭ್ಯವಿರುವ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಅತೀ ಕಡಿಮೆ ಬೆಲೆಯ ಕಾರಾಗಿದೆ. ಮ್ಯಾಗ್ನೈಟ್ ಕಾರಿನ ಬೆಲೆ 5.44 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.
ಬಿಡುಗಡೆಯಾದ ಒಂದೇ ತಿಂಗಳಿಗೆ 38,000 ನಿಸಾನ್ ಮ್ಯಾಗ್ನೈಟ್ ಕಾರುಗಳು ಬುಕ್ ಆಗಿವೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಬುಕ್ ಆದ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಮ್ಯಾಗ್ನೈಟ್ ಸ್ಥಾನ ಪಡೆದುಕೊಂಡಿದೆ.
ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ ಎಕ್ಸ್‌ಯುವಿ 300 ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಮ್ಯಾಗ್ನೈಟ್ ಪ್ರತಿಸ್ಪರ್ಧಿಯಾಗಿದೆ.