5 ನಿಮಿಷ ಚಾರ್ಜಿಂಗ್, 100 KM ಮೈಲೇಜ್; ಬಿಡುಗಡೆಯಾಗುತ್ತಿದೆ ಹ್ಯುಂಡೈ IONIQ 5 ಕಾರು!

First Published | Jan 16, 2021, 5:05 PM IST

ಹ್ಯುಂಡೈ ಮುಂದಿನ ತಿಂಗಳು ಅತ್ಯಾಧುನಿಕ ತಂತ್ರಜ್ಞಾನದ  ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಇದು ವಿಶ್ವದ ಅತ್ಯಂತ ಕಡಿಮೆ ಸಮಯದಲ್ಲಿ ಚಾರ್ಜಿಂಗ್ ಮಾಡಬಹುದಾದ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ. ನೂತನ ಕಾರಿನ ಕುರಿತ  ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ತಂತ್ರಜ್ಞಾನ, ಅತ್ಯಾಧುನಿಕ ಹಾಗೂ ಅತ್ಯಾಕರ್ಷ ಹ್ಯುಂಡೈ IONIQ 5 ಕಾರು ಮುಂದಿನ ತಿಂಗಳು ಬಿಡುಗಡೆಯಾಗಲು ಸಜ್ಜಾಗಿದೆ. ನೂತನ ಕಾರು ಅತೀ ವೇಗದ ಚಾರ್ಜಿಂಗ್ ಹೊಂದಿದೆ.
undefined
ಸಾಮಾನ್ಯವಾಗಿ ಎಲೆಕ್ಟ್ರಿಕ್ ಕಾರು ಶೇಕಡಾ 80 ರಷ್ಟು ಚಾರ್ಜ್ ಆಗಲು ಕನಿಷ್ಠ 60 ರಿಂದ ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಹ್ಯುಂಡೈ IONIQ 5 ಕಾರು 20 ನಿಮಿಷದಲ್ಲಿ ಶೇಕಡಾ 80ರಷ್ಟು ಚಾರ್ಜ್ ಆಗಲಿದೆ.
undefined

Latest Videos


ಕೇವಲ 5 ನಿಮಿಷ ಚಾರ್ಜ್ ಮಾಡಿದರೆ 100 ಕಿ.ಮೀ ಪ್ರಯಾಣ ಮಾಡಲುು ಸಾಧ್ಯವಿದೆ. ಇದು ವಿಶ್ವದಲ್ಲಿ ಸದ್ಯ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಅತೀ ವೇಗದ ಚಾರ್ಜಿಂಗ್ ಎನಿಸಿಕೊಂಡಿದೆ.
undefined
ಹ್ಯುಂಡೈ IONIQ 5 ಕಾರು ಸಂಪೂರ್ಣ ಚಾರ್ಜ್ ಮಾಡಿದರೆ 450 ಕಿ.ಮೀ ಮೈಲೇಜ್ ನೀಡಲಿದೆ. ಸದ್ಯ ಹ್ಯುಂಡೈ ಬಿಡುಗಡೆ ಮಾಡಿರುವ ಕೋನಾ ಕಾರು ಕೂಡ 450 ಕಿ.ಮೀ ಮೈಲೇಜ್ ನೀಡಲಿದೆ.
undefined
230 kW ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. ಹೀಗಾಗಿ 313 bhp ಪವರ್ ನೀಡಲಿದೆ. ಇದು ಎಲೆಕ್ಟ್ರಿಕ್ ಕಾರುಗಳ ಪೈಕಿ ಅತ್ಯುತ್ತಮ ಹಾರ್ಸ್ ಪವರ್ ಆಗಿದೆ.
undefined
5.2 ಸೆಕೆಂಡ್‌ಗಳಲ್ಲಿ ಹ್ಯುಂಡೈ IONIQ 5 ಕಾರು 100 ಕಿ.ಮೀ ವೇಗ ಪಡೆದುಕೊಳ್ಳಲಿದೆ. ಈ ಮೂಲಕ ಎಲೆಕ್ಟ್ರಿಕ್ ಕಾರುಗಳ ಪೈಕಿ ಅತ್ಯುತ್ತಮ ಪಿಕ್ ಅಪ್ ಕೂಡ ನೀಡಲಿದೆ.
undefined
ಅತ್ಯಾಕರ್ಷ ವಿನ್ಯಾಸ ಹೊಂದಿರುವ ಹ್ಯುಂಡೈ IONIQ 5 ಕಾರು ಎಲೆಕ್ಟ್ರಿಕ್ ಕಾರುಗಳ ಪೈಕಿ ಹೊಸ ಸಂಚಲನ ಸೃಷ್ಟಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
undefined
click me!