ಕೊರೋನಾ ಸಮಯದಲ್ಲಿ ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಮ್(ಮನೆಯಿಂದ ಕೆಲಸ)ಗೆ ಅವಕಾಶ ಮಾಡಿಕೊಡಲಾಗಿದೆ. ಕೆಲ ಕಂಪನಿಗಳು ಮತ್ತೆ ಆರಂಭಗೊಂಡಿದ್ದರು, ಹೆಚ್ಚಿನ ಕಂಪನಿಗಳು ವರ್ಕ್ ಫ್ರಮ್ ಹೋಮ್ ಮುಂದುವರಿಸಿದೆ.
undefined
ವರ್ಕ್ ಫ್ರಮ್ ಹೋಮ್‌ನಿಂದ ಎಲ್ಲಿ ಬೇಕಾದರೂ ಕೆಲಸ ಮಾಡುವ ಅವಕಾಶವಿದೆ. ಇದೆ ಸಂದರ್ಭವನ್ನು ಬಳಸಿಕೊಂಡಿರುವ ನಿಸಾನ್ ಇದೀಗ ಕಾನ್ಸೆಪ್ಟ್ ಕಾರೊಂದನ್ನು ಡಿಸೈನ್ ಮಾಡಿದೆ. ಇದು ಕಾರಾವಾನ್ ಕಾರು.
undefined
ನಿಸಾನ್ ಕಾರಾವಾನ್ ಕಾನ್ಸೆಪ್ಟ್ ಕಾರು, ವರ್ಕ್ ಫ್ರಮ್ ಹೋಮ್ ಕೆಲಸಗಾರರಿಗೆ ತಮ್ಮ ಕೆಲಸವನ್ನು ಮತ್ತು ವರ್ಕ್ ಫ್ರಮ್ ಸ್ಮರಣೀಯವಾಗಿಸಲು ನೂತನ ಕಾನ್ಸೆಪ್ಟ್ ಕಾರು ಡಿಸೈನ್ ಮಾಡಿದೆ.
undefined
ಟೊಕಿಯೋ ವರ್ಚುವಲ್ ಆಟೋ ಶೋದಲ್ಲಿ ಜಪಾನ್ ಆಟೋಮೊಬೈಲ್ ಕಂಪನಿ ನಿಸಾನ್, ನಿಸಾನ್ ಕಸ್ಟಮೈಸರ್ 2021 ಕಾರನ್ನು ಪರಿಚಯಿಸಿದೆ. ಕಾರ್ ಹಾಗೂ ವ್ಯಾನ್ ರೀತಿಯಲ್ಲಿರುವ ಈ ಕಾರಾವಾನ್ ಇದೀಗ ಭಾರಿ ಕುತೂಹಲ ಹುಟ್ಟಿಸಿದೆ.
undefined
ಈ ಕಾರಾವಾನ್‌ನಲ್ಲಿ ಆರಾಮದಾಯಕ ಪ್ರಯಾಣ, ಕಚೇರಿಯಲ್ಲೇ ಕುಳಿತು ಕೆಲಸ ಮಾಡುವಂತ ಎಲ್ಲಾ ಸೌಲಭ್ಯ, ವ್ಯಾನ್ ಮೇಲೆ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾ ಕಳೆಯಲು ವಿಶ್ರಾಂತಿ ಸ್ಥಳ ಸೇರಿದಂತೆ ಎಲ್ಲವೂ ಇದೆ.
undefined
ಪ್ರಯಾಣದ ಸೀಟ್‌ನ್ನು ಬೆಡ್ ರೀತಿ ಬಿಡಿಸಿಕೊಂಡು ವಿಶ್ರಾಂತಿ ಪಡೆಯಬಹುದು. ಇನ್ನು ಆಫೀಸ್ ರೀತಿಯಲ್ಲಿ ಟೇಬಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಚಾರ್ಜ್‌ಗಾಗಿ ಪ್ಲಗ್, ಬ್ಯಾಟರಿ, ಲೈಟ್ ವ್ಯವಸ್ಥೆ, ಚೇರ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಆಚ್ಚುಕಟ್ಟಾಗಿ ಡಿೈಸೈನ್ ಮಾಡಲಾಗಿದೆ.
undefined
ಈ ಕಾರಿನಲ್ಲಿ ಡೆಸ್‌ಟಾಪ್ ಕಂಪ್ಯೂಟರ್ ಕೂಡ ಲಭ್ಯವಿದೆ. ಇನ್ನು ವಿಡಿಯೋ ಕಾಲ್ ಅಥವಾ ಕಚೇರಿ ಸಂಬಂಧಿಸಿದ ಕರೆ ಹಾಗೂ ಸಭೆಗಳಿಗೆ ನೆರವಾಗಲು LED ಸ್ಕೀನ್ ಹಾಗೂ ಸೌಂಡ್ ಸಿಸ್ಟಮ್ ಕೂಡ ಈ ಕಾರಿನಲ್ಲಿದೆ.
undefined
ಕೆಲಸದ ನಡುವೆ ಕಾರಿನ ಮೇಲೆ ಹತ್ತಿ ವಿಶ್ರಾಂತಿ ಪಡೆಯತ್ತಾ ಚಹಾ ಹೀರುವ ಹಾಗೂ ಪ್ರಕೃತಿ ಸೌಂದರ್ಯ ಆಸ್ವಾದಿಸುವ ಸೌಲಭ್ಯವೂ ಈ ಕಾರಾವಾನ್ ಕಾನ್ಸೆಪ್ಟ್ ಕಾರಿನಲ್ಲಿ ನೀಡಲಾಗಿದೆ.
undefined