ಎರ್ಟಿಗಾ ಸೇರಿ 7 ಸೀಟರ್ ಕಾರಿಗೆ ಠಕ್ಕರ್, ಬರುತ್ತಿದೆ ಮೇಡ್ ಇನ್ ಇಂಡಿಯಾ ನಿಸ್ಸಾನ್ ಗ್ರಾವೈಟ್ ಕಾರು, ಕೆಲವೇ ದಿನಗಳಲ್ಲಿ ಹೊಸ ಕಾರು ಬಿಡುಗಡೆಯಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸ, ಕೈಗೆಟುಕುವ ಬೆಲೆ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ.
ಮುಂದಿನ ತಿಂಗಳು ನಿಸ್ಸಾನ್ ಗ್ರಾವೈಟ್ ಕಾರು ಬಿಡುಗಡೆಯಾಗುತ್ತಿದೆ. ಭಾರತದಲ್ಲಿ ಬಿ-ಎಂಪಿವಿ ಸೆಗ್ಮೆಂಟ್ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಗ್ರಾವೈಟ್ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಲು, ಮತ್ತೊಮ್ಮೆ ಮಿಂಚಲು ತಂತ್ರಾತ್ಮಕವಾಗಿ ಸಿದ್ಧಪಡಿಸಿದ ವಾಹನಗಳ ಸಾಲಿನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ವಾಹನ ವಾಗಿದೆ. ಆಧುನಿಕ ಭಾರತೀಯ ಕುಟುಂಬಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಗ್ರಾವೈಟ್, ಬಹುಮುಖತೆ ಮತ್ತು ವೈವಿಧ್ಯತೆಯನ್ನು ಹೊಂದಿದೆ.
26
ನಿಸ್ಸಾನ್ ಗ್ರಾವೈಟ್ ಕಾರು
2024ರ ಜುಲೈಯಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಎರಡನೇ ಮಾಡೆಲ್ ಆಗಿ ಘೋಷಿಸಲಾದ ಗ್ರಾವೈಟ್ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ನಿಸ್ಸಾನ್ ಉತ್ಪನ್ನಗಳ ರೋಡ್‌ಮ್ಯಾಪ್‌ನಲ್ಲಿ 2026ರ ಆರಂಭದಲ್ಲಿ ಗ್ರಾವೈಟ್ ನ ಬಿಡುಗಡೆ ಆಗಲಿದೆ. ನಂತರ 2026ರ ಮಧ್ಯದಲ್ಲಿ ಟೆಕ್ಟಾನ್ ಮತ್ತು 2027ರ ಆರಂಭದಲ್ಲಿ 7-ಸೀಟರ್ ಸಿ-ಎಸ್‌ಯುವಿ ಬಿಡುಗಡೆ ಆಗಲಿದೆ.
36
ಗ್ರಾವೈಟ್ ಹೆಸರಿನಲ್ಲೇ ಇದೆ ಆಕರ್ಷಣೆ
ಗ್ರಾವೈಟ್ ಹೆಸರನ್ನು ಗ್ರಾವಿಟ್ ಮೂಲದಿಂದ ಪಡೆಯಲಾಗಿದೆ. ಗ್ರಾವಿಟಿ ಎಂದರೆ ಗುರುತ್ವಾಕರ್ಷಣೆ. ಈ ಹೆಸರು ಸಮತೋಲನ, ಆಂತರಿಕ ಸ್ಥಿರತೆ ಮತ್ತು ಪ್ರಬಲ ಆಕರ್ಷಣೆಯನ್ನು ಸೂಚಿಸುತ್ತದೆ. ಭಾರತೀಯ ಕುಟುಂಬಗಳಿಗೆ ಅನುಕೂಲಕರ, ಬಹುಮುಖ ಮತ್ತು ಅತ್ಯುತ್ತಮ ಸಂಪರ್ಕ ಸೇವೆ ಒದಗಿಸುವ ವಾಹನಗಳನ್ನು ವಿನ್ಯಾಸಗೊಳಿಸುವ ನಿಸ್ಸಾನ್ ನ ಮೂಲ ಉದ್ದೇಶವನ್ನು ಈ ಗ್ರಾವೈಟ್ ಪ್ರತಿಬಿಂಬಿಸುತ್ತದೆ.
ಗ್ರಾವೈಟ್ ಅಸಾಧಾರಣ ಕ್ಯಾಬಿನ್ ಹೊಂದಿದ್ದು, ವಿಶಾಲವಾಗಿದೆ ಮತ್ತು ವಿಭಾಗದಲ್ಲಿಯೇ ಅತಿ ಹೆಚ್ಚಿನ ಸ್ಟೋರೇಜ್ ಸೌಲಭ್ಯಗಳನ್ನು ಹೊಂದಿದೆ. ಈ ಮೂಲಕ ಕೌಟುಂಬಿಕ ಪ್ರಯಾಣಗಳ ರೀತಿಯನ್ನೇ ಪರಿವರ್ತಿಸಲಿದೆ. ಪ್ರತಿಯೊಂದು ಅಂಶವನ್ನೂ ವೈವಿಧ್ಯಮಯ ಬಳಕೆ ಮತ್ತು ಅನುಕೂಲಕರ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಬದಲಾಗುತ್ತಿರುವ ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆ ಅಗತ್ಯತೆಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಅಲ್ಟ್ರಾ-ಮಾಡ್ಯುಲರ್ ಸೀಟಿಂಗ್‌ನಿಂದ ಹಿಡಿದು, ದೈನಂದಿನ ಪ್ರಯಾಣಗಳು ಮತ್ತು ಸುದೀರ್ಘ ಕೌಟುಂಬಿಕ ಪ್ರವಾಸಗಳವರೆಗೆ ಎಲ್ಲಕ್ಕೂ ಸೂಕ್ತ ಅನ್ನಿಸುವಂತೆ, ಬೇಕಾದಷ್ಟು ಜಾಗ ಇರುವಂತೆ ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ.
56
ಮೇಡ್ ಇನ್ ಇಂಡಿಯಾ ಕಾರು
2026ರ ಆರಂಭದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿರುವ ಹೊಚ್ಚ ಹೊಸ ಗ್ರಾವೈಟ್ ಕಾರು ಚೆನ್ನೈಯಲ್ಲಿ ಉತ್ಪಾದಿಸಲಾಗುವುದು. ಈ ಪ್ರಾದೇಶಿಕ ಮಟ್ಟದಲ್ಲಿ ಉತ್ಪಾದನೆ ಮಾಡುವ ನಿರ್ಧಾರವು ಭಾರತೀಯ ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳಿಗೆ ಹೊಂದಿಕೊಳ್ಳುವ ವಿಶೇಷ ವಿನ್ಯಾಸದ ವಾಹನಗಳನ್ನು ನೀಡುವ ನಿಸ್ಸಾನ್ ಮೋಟಾರ್ ಇಂಡಿಯಾದ ಬದ್ಧತೆಯನ್ನು ಬಲಪಡಿಸುತ್ತದೆ.
ಮೇಡ್ ಇನ್ ಇಂಡಿಯಾ ಕಾರು
66
ವಿನ್ಯಾಸ ಮತ್ತು ಸ್ಫೂರ್ತಿ
ಹೊಚ್ಚ ಹೊಸ ಗ್ರಾವೈಟ್ ನಿಸ್ಸಾನ್‌ನ ಜಾಗತಿಕ ವಿನ್ಯಾಸ ಭಾಷೆಗೆ ಅನುಗುಣಾದ ಬೋಲ್ಡ್ ಆದ ಮತ್ತು ವಿಶಿಷ್ಟ ಗುರುತನ್ನು ಹೊಂದಿದೆ. ಅದರ ವಿಶಿಷ್ಟ ಸಿ-ಆಕಾರದ ಫ್ರಂಟ್ ಗ್ರಿಲ್ ನಿಸ್ಸಾನ್‌ನ ಡಿಎನ್ಎಯ ನಿರ್ಣಾಯಕ ಅಂಶವಾಗಿದ್ದು, ತಕ್ಷಣ ಗಮನ ಸೆಳೆಯುತ್ತದೆ ಮತ್ತು ಅದ್ದೂರಿ ರೋಡ್ ಪ್ರೆಸೆನ್ಸ್ ಒದಗಿಸುತ್ತದೆ. ಗ್ರಾವೈಟ್ ನ ಸೊಗಸಾದ ವಿನ್ಯಾಸ ಮತ್ತು ಆಕರ್ಷಕ ದಿಟ್ಟ ನಿಲುವು ಆಧುನಿಕ ಸೊಬಗು ಒದಗಿಸುತ್ತದೆ ಮತ್ತು ಪ್ರಾಯೋಗಿಕ, ದೈನಂದಿನ ಬಳಕೆಗೆ ಸೂಕ್ತವಾಗಿದೆ.