ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್

Published : Nov 27, 2025, 05:21 PM IST

ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್, ಕೈಗೆಟುಕುವ ಬೆಲೆಯಲ್ಲಿ ಹೊಸ ಇವಿ ಅನಾವರಣಗೊಂಡಿದೆ. ಅತೀ ಆಕರ್ಷಕ ವಿನ್ಯಾಸ ಮಾತ್ರವಲ್ಲ, ಪರ್ಫಾಮೆನ್ಸ್ ಕೂಡ ಚೆನ್ನಾಗಿದೆ. ಇದರ ಬೆಲೆ, ಇತರ ಡಿಟೇಲ್ಸ್ ಇಲ್ಲಿದೆ.

PREV
15
ಮಹೀಂದ್ರ XEV 9S ಎಲೆಕ್ಟ್ರಿಕ್ ಕಾರು

ಭಾರತದ ಮಾರುಕಟ್ಟೆಗೆ ಹೊಸ ಎಲೆಕ್ಟ್ರಿಕ್ ಕಾರು ಪರಿಚಯಿಸಲಾಗಿದೆ. ಮಹೀಂದ್ರ XEV 9S ಎಲೆಕ್ಟ್ರಿಕ್ ಎಸ್‌ಯುವಿ ಕಾರನ್ನು ಅನಾವರಣ ಮಾಡಿದೆ. ಇದು ಭಾರತದ ಮೊದಲ 7 ಸೀಟರ್ ಎಸ್‌ಯುವಿ ಕಾರಾಗಿದೆ. ಮಹೀಂದ್ರ EV INGLO ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಕಾರು ಹಲವು ವಿಶೇಷತೆ ಹೊಂದಿದೆ. ಪ್ರಮುಖವಾಗಿ ಇದರ ಬೆಲೆ ಎಲ್ಲರನ್ನು ಆಕರ್ಷಿಸುತ್ತಿದೆ.

25
ಹೊಸ XEV 9S ಕಾರಿನ ಬೆಲೆ

ಮಹೀಂದ್ರ XEV 9S ಎಲೆಕ್ಟ್ರಿಕ್ ಕಾರಿನ ಬೆಲೆ 19.95 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಹೀಗಾಗಿ ಸುದೀರ್ಘ ಪ್ರಯಾಣಕ್ಕೂ ಯಾವುದೇ ಅಡ್ಡಿಯಾಗುವುದಿಲ್ಲ. 527 ಲೀಟರ್ ಬೂಟ್ ಸ್ಪೇಸ್, ಕಾರಿನ ಒಳಗೆ ಹೆಚ್ಚಿನ ಸ್ಥಳವಕಾಶ ನೀಡಲಾಗಿದೆ. ಹೀಗಾಗಿ ಆರಾಮದಾಯಕ ಪ್ರಯಾಣಕ್ಕೂ ಉತ್ತಮ ಕಾರಾಗಿ ಹೊರಹೊಮ್ಮಿದೆ.

35
ಮಹೀಂದ್ರ XEV 9S ಕಾರಿನ ವಿಶೇಷತೆ

ವಿಶಾಲವಾದ ಕ್ಯಾಬಿನ್, ನಿಪುಣ ಮೂರು-ಸಾಲಿನ ಎಲೆಕ್ಟ್ರಿಕ್‌ ಫಸ್ಟ್‌ ಲೇಔಟ್‌, ಇವಿ ಕಾರಾಗಿರುವ ಕಾರಣ ಯಾವುದೇ ಗದ್ದಲವಿಲ್ಲ, ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಗಳು, ಫೀಚರ್ಸ್ ನೀಡಲಾಗಿದೆ. 380 Nm ಟಾರ್ಕ್ ಪವರ್ ಹೊಂದಿದೆ. 0-100 ಕಿ.ಮೀ ವೇಗವನನು ಕೇವಲ 7 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಜೊತೆಗೆ ಎಲ್ಲಾ ಸುರಕ್ಷತಾ ಫೀಚರ್ಸ್ ಲಭ್ಯವಿದೆ.

45
ಎಲ್ಲೆಡೆ ಚಾರ್ಚಿಂಗ್ ವ್ಯವಸ್ಥೆ

ಮಹೀಂದ್ರ 180 ಕೆಡಬ್ಲ್ಯೂ ಸಾಮರ್ಥ್ಯದ ಅತಿ ವೇಗದ ಚಾರ್ಜರ್‌ ಗಳನ್ನು ಹೊಂದಿರುವ 250 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ ಗಳನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದೆ. ಈಗಾಗಲೇ ಎರಡು ಚಾರ್ಜಿಂಗ್ ಸ್ಟೇಷನ್ ಗಳು ಕಾರ್ಯಾರಂಭ ಮಾಡಿದ್ದು, 2027ರ ಅಂತ್ಯದೊಳಗೆ ಸಂಸ್ಥೆಯು 1,000ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಆರಂಭಿಕ ಹಂತದಲ್ಲಿ ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿ ಎನ್ಎಚ್ 75ರಲ್ಲಿರುವ ಹೊಸಕೋಟೆಯಲ್ಲಿ ಮತ್ತು ದೆಹಲಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಎನ್ಎಚ್44ರ ಮುರ್ಥಲ್ ಎಂಬ ಪ್ರದೇಶದಲ್ಲಿ ಎರಡು ಚಾರ್ಜ್_ಇನ್ ಸ್ಟೇಷನ್‌ ಗಳನ್ನು ಉದ್ಘಾಟಿಸಿದೆ.

ಎಲ್ಲೆಡೆ ಚಾರ್ಚಿಂಗ್ ವ್ಯವಸ್ಥೆ

55
ಜನವರಿ 14ರಿಂದ ಬುಕಿಂಗ್ ಆರಂಭ

ಮಹೀಂದ್ರ ಅನಾವರಣಗೊಳಿಸಿರುವ ಹೊಸ ಮಹೀಂದ್ರ XEV 9S ಎಲೆಕ್ಟ್ರಿಕ್ ಕಾರಿನ ಬುಕಿಂಗ್ ಜನವರಿ 14ರಿಂದ ಆರಂಭಗೊಳ್ಳುತ್ತಿದೆ. ಇನ್ನು ಕಾರು ಡೆಲಿವರಿ ಜನವರಿ 23ರಿಂದ ಆರಂಭಗೊಳ್ಳಲಿದೆ. ಗ್ರಾಹಕರು ಮಹೀಂದ್ರ ಅಧಿಕೃತ ಡೀಲರ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಕಾರು ಬುಕಿಂಗ್ ಮಾಡಿಕೊಳ್ಳಬಹುದು.

ಜನವರಿ 14ರಿಂದ ಬುಕಿಂಗ್ ಆರಂಭ

Read more Photos on
click me!

Recommended Stories