ಮಾರುತಿ ಸುಜುಕಿಯ ಫ್ರಾಂಕ್ಸ್ ಹೈಬ್ರಿಡ್ ಕಾರು, 40 ಕಿ.ಮೀ ಮೈಲೇಜ್, ಕೈಗೆಟುವ ಬೆಲೆ!

First Published | Feb 9, 2024, 6:38 PM IST

ಮಾರುತಿ ಸುಜುಕಿ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರು ಎಂದೇ ಗುರುತಿಸಿಕೊಂಡಿರುವ ಫ್ರಾಂಕ್ಸ್ ಇದೀಗ ಹೊಸ ಅವತಾರಲ್ಲಿ ಬಿಡುಗಡೆಯಾಗುತ್ತಿದೆ. ಬರೋಬ್ಬರಿ 40 ಕಿ.ಮೀ ಮೈಲೇಜ್, ಕೈಗೆಟುಕುವ ಬೆಲೆಯಲ್ಲಿ ಈ ಕಾರು ಲಭ್ಯವಾಗಲಿದೆ.

ಮಾರುತಿ ಸುಜುಕಿ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡುತ್ತಿದೆ. ಜೊತೆಗೆ ಅತೀ ಕಡಿಮೆ ಬೆಲೆಯಲ್ಲಿ ನಿರ್ವಹಣೆ ವೆಚ್ಚದ ಕಾರಣ ಮಾರುತಿ ಕಾರಿಗೆ ಭಾರಿ ಬೇಡಿಕೆ.
 

ಮಾರುತಿ ಕಾರುಗಳ ಪೈಕಿ ಫ್ರಾಂಕ್ಸ್ ಎಸ್‌ಯುವಿ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಮಾರುತಿ ಸುಜುಕಿ ಫ್ರಾಂಕ್ಸ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಹೌದು, ಶೀಘ್ರದಲ್ಲೇ ಹೈಬ್ರಿಡ್ ಮಾಡೆಲ್ ಲಾಂಚ್ ಆಗಲಿದೆ.

Latest Videos


ಮಾರುತಿಯ ಅತೀ ಕಡಿಮೆ ಬೆಲೆಯ ಎಸ್‌ಯುವಿ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿರುವ ಫ್ರಾಂಕ್ಸ್, ಕೈಗೆಟುವ ಬೆಲೆಯಲ್ಲೇ ಫ್ರಾಂಕ್ಸ್ ಹೈಬ್ರಿಡ್ ಕಾರು ಬಿಡುಗಡೆ ಮಾಡಲು ನಿರ್ಧರಿಸಿದೆ.
 

ಫ್ರಾಂಕ್ಸ್ ಹೈಬ್ರಿಡ್ ಕಾರಿಗೆ HEV ಎಂಬ ಕೋಡ್ ನೀಡಲಾಗಿದೆ. ನೂತನ ಫ್ರಾಂಕ್ಸ್ ಹೈಬ್ರಿಡ್  ಕಾರು ಬರೋಬ್ಬರಿ 40 ಕಿ.ಮೀ ಮೈಲೇಜ್ ನೀಡಲಿದೆ ಎಂದು ಮೂಲಗಳು ಹೇಳುತ್ತಿದೆ.

Z12E ಮೂರು ಸಿಲಿಂಡರ್ ಎಂಜಿನ್ ಜೊತೆಗೆ 1.5-2kWh ಬ್ಯಾಟರಿ ಪ್ಯಾಕ್ ಹೊಂದಿರುವ ನೂತನ ಫ್ರಾಂಕ್ಸ್ ಹೈಬ್ರಿಡ್ ದೇಶದ ಪ್ಯಾಸೆಂಜರ್ ವಾಹನ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಹೇಳಲಾಗುತ್ತಿದೆ.
 

ಸದ್ಯ ಮಾರುಕಟ್ಟೆಯಲ್ಲಿರುವ ಫ್ರಾಂಕ್ಸ್ ಕಾರಿನ ಬೆಲೆ 7.51 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ. ನೂತನ ಫ್ರಾಂಕ್ಸ್ ಹೈಬ್ರಿಡ್ ಕಾರಿನ ಬೆಲೆ ಕೊಂಚ ಏರಿಕೆಯಾಗಲಿದೆ. ಆದರೆ ಕೈಗೆಟುಕವ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
 

2025ರಲ್ಲಿ ನೂತನ ಫ್ರಾಂಕ್ಸ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಮಾರುತಿ ಸುಜುಕಿ ಈಗಾಗಲೇ ಕೆಲ ಮಾಡೆಲ್ ಕಾರುಗಳನ್ನು ಹೈಬ್ರಿಡ್ ಕಾರುಗಳಾಗಿ ಬಿಡುಗಡೆ ಮಾಡಿದೆ.
 

ಇದೀಗ ಫ್ರಾಂಕ್ಸ್, ಬಲೆನೋ, ಸ್ವಿಫ್ಟ್ ಸೇರಿದಂತೆ ಇತರ ಕಾರುಗಳನ್ನು ಹೈಬ್ರಿಡ್ ಮಾಡೆಲ್‌ನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ದೇಶದ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆ ಮತ್ತಷ್ಟು ಹೆಚ್ಚಿಸಲು ಮಾರುತಿ ಸುಜುಕಿ ಪ್ಲಾನ್ ಮಾಡಿದೆ.
 

click me!