ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಬ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ.
undefined
ಇತ್ತೀಚೆಗೆ ನಿಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಯಾಗಿ ಭಾರಿ ಸಂಚಲನ ಮೂಡಿಸಿತ್ತು. ಇದೀಗ SUV ಸಬ್ ಕಾಂಪಾಕ್ಟ್ ಕಾರಿನ ದಾಖಲೆ ಪುಡಿ ಮಾಡಲು ರೆನಾಲ್ಟ್ ಕಿಗರ್ ಕಾರು ಬಿಡುಗಡೆಯಾಗುತ್ತಿದೆ.
undefined
ಫೆಬ್ರವರಿ 15 ರಂದು ಹೊಚ್ಚ ಹೊಸ ರೆನಾಲ್ಟ್ ಕಿಗರ್ ಕಾರು ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಈ ಕಾರು ಅತೀ ಕಡಿಮೆ ಬೆಲೆಯಗೆ ಲಭ್ಯವಾಗಲಿದೆ.
undefined
ರೆನಾಲ್ಟ್ ಕ್ವಿಡ್, ರೆನಾಲ್ಟ್ ಟ್ರೈಬರ್ ರೀತಿ ಇದೀಗ ರೆನಾಲ್ಟ್ ಕಿಗರ್ ಕೂಡ ಕೈಗೆಟುಕುವ ದರ ಕಾರು ಎಂದು ರೆನಾಲ್ಟ್ ಇಂಡಿಯಾ ಹೇಳಿದೆ.
undefined
ಜನವರಿ 28ಕ್ಕೆ ರೆನಾಲ್ಟ್ ಕಿಗರ್ ಪ್ರೊಡಕ್ಷನ್ ವರ್ಶನ್ ಕಾರು ಅನಾವರಣಗೊಂಡಿತ್ತು. 1.0 ಲೀಟರ್, 3 ಸಿಲಿಂಡರ್ ಟರ್ಬೋಚಾರ್ಜ್ ಎಂಜಿನ್ ಹೊಂದಿದೆ.
undefined
1.0 ಲೀಟರ್ ಎಂಜಿನ್ 100PS ಪವರ್ ಹಾಗೂ 160NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.0 L ಲೀಟರ್ ಎಂಜಿನ್ 72 PS ಪವರ್ ಹಾಗೂ 96 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.
undefined
5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 5 ಸ್ಪೀಡ್ X-TRONIC CVT ಟ್ರಾನ್ಸ್‌ಮಿಶನ್ ಆಯ್ಕೆಗಳಿವೆ. ಇನ್ನುಳಿದಂತೆ LED DRLs, ಇನ್ಪೋಟೈನ್ಮೆಂಟ್, ಸೇರಿದಂತೆ ಹಲವು ಫೀಚರ್ಸ್ ನೂತನ ಕಾರಿನಲ್ಲಿದೆ.
undefined
ನೂತನ ರೆನಾಲ್ಟ್ ಕಿಗರ್ ಕಾರು, ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ನಿಸಾನ್ ಮ್ಯಾಗ್ನೈಟ್, ಮಹೀಂದ್ರ ಎಕ್ಸ್‌ಯುವಿ 300, ಫೋರ್ಟ್ ಇಕೋಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
undefined