ಡೈಂಮ್ಲರ್ bb18 To ಕ್ಯಾಡಿಲಾಕ್; ಬೆಂಗಳೂರು ರಸ್ತೆಯಲ್ಲಿ ವಿಂಟೇಜ್ ವಾಹನ ಸವಾರಿ!

First Published Feb 10, 2021, 9:00 PM IST

ವಾಹನ ಪ್ರಿಯರಿಗೆ ಹೊಸ ಹೊಸ ವಾಹನಗಳ ಮೇಲೆ ಸವಾರಿ ಮಾಡುವುದಕ್ಕಿಂತ ಒಂದು ವಿಂಟೇಜ್ ವಾಹನದಲ್ಲಿ ಪ್ರಯಾಣ ಮಾಡಿದರೆ ಸಿಗುವ ಆನಂದ ಅಷ್ಟಿಷ್ಟಲ್ಲ. ಅದರಲ್ಲೂ ರಸ್ತೆಯಲ್ಲಿ 100ಕ್ಕೂ ಹೆಚ್ಚು ವಾಹನ ರಸ್ತೆ ಮೇಲೆ ಬಂದರೆ ಕಣ್ಣು ಕೋರೈಸದೆ ಇರದು. ಅದು ಕೂಡ ಬೆಂಗಳೂರು ರಸ್ತೆಯಲ್ಲಿ. 

ಒಂದಲ್ಲ, ಎರಡಲ್ಲ, 100ಕ್ಕೂ ಹೆಚ್ಚು ವಿಂಟೇಜ್ ವಾಹನಗಳು ಬೆಂಗಳೂರು ರಸ್ತೆಯಲ್ಲಿ ಮೇಳೈಸಿದೆ. ಫೋರ್ಡ್ A, ಆಸ್ಟೀನ್ , ಮೋರೆಸ್ ಸೇರಿದಂತೆ ವಿಂಟೇಜ್ ಕಾರು ಮಿರ ಮಿರ ಮಿಂಚಿದೆ.
undefined
ವಿಂಟೇಜ್ ಕಾರು ರ‍್ಯಾಲಿಯಲ್ಲಿ ಡೈಂಮ್ಲರ್ bb18, ಕ್ಯಾಡಿಲ್ಯಾಕ್, ಮರ್ಸಿಡಿಸ್, ಅಂಬಾಸಿಡರ್, ಶವರ್ಲೆ , ಬ್ಯುಕ್ ವಿಂಟೇಜ್ ಕಾರ್‌ಗಳು ಒಂದರ ಹಿಂದೆ ಒಂದರಂತೆ ಗತ್ತು ಗಾಂಭೀರ್ಯದಿಂದ ಪ್ರದರ್ಶನ ಮಾಡಿದೆ.
undefined
ಸಾರಿಗೆ ಇಲಾಖೆ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದ ಪ್ರಯುಕ್ತ ವಿಂಟೇಜ್ ವಾಹನದ ರ‍್ಯಾಲಿ ಆಯೋಜಿಸಿದೆ.
undefined
ಬೆಂಗಳೂರಿನ ಕಸ್ತೂರಿ ನಗರ ಆರ್‌ಟಿಓ ಕಚೇರಿ ಆವರಣದಲ್ಲಿ ವಿಂಟೇಜ್ ವಾಹನ ರ್ಯಾಲಿ ಕಾರ್ಯಕ್ರಮ ಹಾಗೂ ಪ್ರದರ್ಶನ ಆಯೋಜಿಸಲಾಗಿತ್ತು.
undefined
ಕಸ್ತೂರಿ ನಗರದಿಂದ - ಕಸ್ತೂರಬಾ ರೋಡ್ ಸೆಂಟ್ ಜೋಸೆಫ್‌ವರೆಗೂ ಜಾಥಾ ಹಮ್ಮಿಕೊಳ್ಳಲಾಗಿತ್ತು. ವಾಹನ ರ್ಯಾಲಿ ಮೂಲಕ ಜಾಗೃತಿ ಮೂಡಿಸಲಾಗಿತ್ತು
undefined
'ರಸ್ತೆ ಸುರಕ್ಷತೆ - ಜೀವನದ ರಕ್ಷೆ' ಧ್ಯೇಯದೊಂದಿಗೆ ಜನರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಸಾರಿಗೆ ಇಲಾಖೆ ಯಶಸ್ವಿಯಾಗಿ ಆಯೋಜಿಸುತ್ತಿದೆ.
undefined
ರ‍್ಯಾಲಿಯಲ್ಲಿ ವಿಂಟೇಜ್ ಕಾರ್, ಬೈಕ್ ಸೇರಿದಂತೆ ಲೇಡಿ ಡ್ರೈವರ್ ಗಳು ಭಾಗಿ ಯಾಗಿದ್ದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
undefined
ಗತಗಾಲದ ವಾಹನ ವೈಭವ ಕಣ್ತುಂಬಿಕೊಂಡ ಸಾರ್ವಜನಿಕರು ವಿಂಟೇಜ್ ರ್ಯಾಲಿ ಹಾಗೂ ರಸ್ತೆ ಸುರಕ್ಷತಾ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
undefined
click me!