ಮಹೀಂದ್ರ ತನ್ನ ಕಾರುಗಳ ಮೇಲೆ ಫೆಬ್ರವರಿ ತಿಂಗಳ ಡೌಸ್ಕೌಂಟ್ ಘೋಷಿಸಿದೆ. ಈ ಮೂಲಕ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದು ಕೈಗೆಟುಕುವ ದರದಲ್ಲಿ ಕಾರು ಲಭ್ಯವಾಗಲಿದೆ.
undefined
ಫೆಬ್ರವರಿ 28ರ ವರೆಗೆ ಡಿಸ್ಕೌಂಟ್ ಆಫರ್ ಚಾಲ್ತಿಯಲ್ಲಿರಲಿದೆ. ಮಹೀಂದ್ರ ತನ್ನ SUV ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಿದೆ. ಈ ಮೂಲಕ ಮಾರಾಟ ವೇಗ ಹಚ್ಚಿಸಲು ನಿರ್ಧರಿಸಿದೆ.
undefined
ಮಹೀಂದ್ರ ಅಲ್ಟುರಾಸ್ ಕಾರಿಗೆ ಗರಿಷ್ಠ ಡಿಸ್ಕೌಂಟ್ ಘೋಷಿಸಿದೆ. ಅಲ್ಟುರಾಸ್ ಕಾರಿಗೆ ಒಟ್ಟು 3.06 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 2.2 ಲಕ್ಷ ರೂಪಾಯಿ, ಎಕ್ಸ್‌ಚೇಂಜ್ ಆಫರ್ 50,000 ರೂಪಾಯಿ ಹಾಗೂ ಕಾರ್ಪೋರೇಟ್ ಆಫರ್ 16,000 ರೂಪಾಯಿಯಿಂದ 20,000 ರೂಪಾಯಿ ವರೆಗೆ ನೀಡಲಾಗಿದೆ.
undefined
ಮಹೀಂದ್ರ XUV300 ಕಾರಿಗೆ ಗರಿಷ್ಠ 45,000 ರೂಪಾಯಿ ಘೋಷಿಸಲಾಗಿದೆ. ಕ್ಯಾಶ್ ಡಿಸ್ಕೌಂಟ್ 10,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 25,000 ರೂಪಾಯಿ, ಕಾರ್ಪೋರೇಟ್ ಆಫರ್ 5,000 ರೂಪಾಯಿ ಹಾಗೂ ಹೆಚ್ಚುವರಿ ಡಿಸ್ಕೌಂಟ್ 5,000 ರೂಪಾಯಿ ನೀಡಲಾಗಿದೆ.
undefined
ಮಹೀಂದ್ರ KUV100 NXT ಕಾರಿಗೆ 62,055 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ, ಕಾರ್ಪೋರೇಟ್ ಆಫರ್ 4,000 ರೂಪಾಯಿ ಹಾಗೂ ಕ್ಯಾಶ್ ಡಿಸ್ಕೌಂಟ್ 38,055 ರೂಪಾಯಿ ನೀಡಲಾಗಿದೆ.
undefined
ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಒಟ್ಟು 39,502 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್, 15,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್, 4,5000 ರೂಪಾಯಿ ಕಾರ್ಪೋರೇಟ್ ಆಫರ್ ಹಾಗೂ ಹೆಚ್ಚುವರಿ ಡಿಸ್ಕೌಂಟ್ 10,000 ರೂಪಾಯಿ ನೀಡಲಾಗಿದೆ.
undefined
ಮಹೀಂದ್ರ XUV500 ಕಾರಿಗೆ ಗರಿಷ್ಠ 80,800 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 36,800 ರೂಪಾಯಿ ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ, ಕಾರ್ಪೋರೇಟ್ ಆಫರ್ 9,000 ರೂಪಾಯಿ ಹಾಗೂ ಹೆಚ್ಚುವರಿಯಾಗಿ 15,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ
undefined
ಮಹೀಂದ್ರ ಮೋರಾಜೋ ಕಾರಿಗೆ ಗರಿಷ್ಠ 36,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಕ್ಯಾಶ್ ಡಿಸ್ಕೌಂಟ್ 15,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ ಹಾಗೂ ಕಾರ್ಪೋರೇಟ್ ಡಿಸ್ಕೌಂಟ್ 6,000 ರೂಪಾಯಿ ನೀಡಲಾಗಿದೆ. ಇನ್ನು ಬೊಲೆರೋ ವಾಹನಕ್ಕೆ ಗರಿಷ್ಠ 24,050 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.
undefined