ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಟ್ರಾಫಿಕ್ ನಡುವೆ ಕ್ಲಚ್, ಗೇರ್ ಬದಲಾಯಿಸಿ ಡ್ರೈವಿಂಗ್ ಮಾಡುವುದೇ ಸಾಹಸ. ಇನ್ನು ಮಹಿಳೆಯರಂತೂ ಹೆಚ್ಚಾಗಿ ಆಟೋಮ್ಯಾಟಿಕ್ ಕಾರುಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.
ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರಿಗಿಂತ ಆಟೋಮ್ಯಾಟಿಕ್ ಕಾರುಗಳು ಕೊಂಚ ದುಬಾರಿ. ಆದರೆ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲೇ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರುಗಳು ಲಭ್ಯವಿದೆ.
ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು ಪಟ್ಟಿ ಮಾರುತಿ ಸುಜುಕಿ ಅಲ್ಟೋ ಕೆ10 ಸಲ್ಲಸಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 5.61 ಲಕ್ಷ ರೂನಿಂದ ಆರಂಭಗೊಳ್ಳುತ್ತಿದೆ.
ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿನಲ್ಲೂ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 5.76 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.
ರೆನಾಲ್ಟ್ ಕ್ವಿಡ್ ಕಾರಿನಲ್ಲೂ ಆಟೋಮ್ಯಾಟಿಕ್ ಆಯ್ಕೆ ಕಾರುಗಳಿಗೆ ಭಾರಿ ಬೇಡಿಕೆ ಇದೆ. ರೆನಾಲ್ಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನ ಆರಂಭಿಕ ಬೆಲೆ 6.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
ಮಾರುತಿ ಸಣ್ಣ ಕಾರುಗಳ ಪೈಕಿ ಸೆಲೆರಿಯೋ ಕಾರಿಗೆ ಭಾರಿಬೇಡಿಕೆ ಇದೆ. ಸೆಲೆರಿಯೋ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರಿನ ಆರಂಭಿಕ 6.38 ಲಕ್ಷ ರೂಪಾಯಿ(ಎಕ್ಸ್ ಶೋರೂಂ)
ಸ್ಥಳವಕಾಶ, ಆರಾಮದಾಯಕ ಪ್ರಯಾಣ ಎಲ್ಲದಕ್ಕೂ ಮಾರುತಿ ಸುಜುಕಿ ವ್ಯಾಗನ್ಆರ್ ಕಾರಿಗೆ ಭಾರಿ ಡಿಮ್ಯಾಂಡ್ ಇದೆ. ವ್ಯಾಗನ್ಆರ್ ಆಟೋಮ್ಯಾಟಿಕ್ ವರ್ಶನ್ ಕಾರಿನ ಆರಂಬಿಕ ಬೆಲೆ 6.54 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಸುರಕ್ಷತೆಗೆ ಆದ್ಯತೆ ನೀಡಿರುವ ಟಾಟಾ ಮೋಟಾರ್ಸ್ ಕಾರುಗಳು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಪೈಕಿ ಟಾಟಾ ಟಿಯಾಗೋ ಆಟೋಮ್ಯಾಟಿಕ್ ವರ್ಶನ್ ಕಾರು 6.93 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯಲ್ಲಿ ಲಭ್ಯವಿದೆ.