ಅದಾನಿ, ಅಂಬಾನಿ ಬಳಿಯೂ ಇಲ್ಲ; ಈ ಉದ್ಯಮಿ ಬಳಿ ಇದೆ ಭಾರತದ ಏಕೈಕ 12 ಕೋಟಿ ರೂ ಮೆಕ್ಲರೆನ್ ಕಾರು !

First Published Aug 28, 2023, 11:38 AM IST

ಭಾರತದಲ್ಲಿ ಐಷಾರಾಮಿ ಕಾರುಗಳು, ದುಬಾರಿ ಕಾರುಗಳನ್ನು ಹೊಂದಿದರ ಪಟ್ಟಿ ದೊಡ್ಡದಿದೆ. ಈ ಪೈಕಿ ಭಾರತದಲ್ಲಿ ಒಂದೇ ಒಂದು ಮೆಕ್ಲರೆನ್ 765 LT ಸ್ಪೈಡರ್ ಕಾರಿದೆ. 12 ಕೋಟಿ ರೂ ಮೌಲ್ಯದ ಈ ಕಾರಿನ ಮಾಲೀಕ ಅಂಬಾನಿಯೂ ಅಲ್ಲ, ಅದಾನಿಯೂ ಅಲ್ಲ. ಈ ಯುವ ಉದ್ಯಮಿ ಬಳಿ ಇದೆ ಭಾರತ ಎಲ್ಲಾ ಶ್ರೀಮಂತರನ್ನು ಮೀರಿಸುವ ಕಾರು.

ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಹಲವು ಉದ್ಯಮಿಗಳು, ಸೆಲೆಬ್ರೆಟಿಗಳ ಬಳಿ ಐಷಾರಾಮಿ ಕಾರುಗಳಿವೆ. ವಿಶ್ವದ ಅತ್ಯಂತ ದುಬಾರಿಗಳು ಭಾರತದ ಕೆಲ ಗಣ್ಯ ವ್ಯಕ್ತಿಗಳ ಬಳಿ ಇವೆ. ಅಂಬಾನಿ ಕಾರು ಗ್ಯಾರೇಜ್ ನೋಡಿದರೆ ದಂಗಾವುದು ಖಚಿತ

ಮುಕೇಶ್ ಅಂಬಾನಿ, ಅದಾನಿ ಬಳಿ ಇಲ್ಲದ ಕಾರೊಂದು ಹೈದರಾಬಾದ್ ಮೂಲದ ಯುವ ಉದ್ಯಮಿ ಬಳಿ ಇದೆ. ಭಾರತದಲ್ಲಿರುವ ಏಕೈಕ ಮೆಕ್ಲರೆನ್ 765 LT ಸ್ಪೈಡರ್ ಕಾರು ಈ ಉದ್ಯಮಿ ಬಳಿ ಇದೆ. ಈತ ಬೇರಾರು ಅಲ್ಲ, ಹೈದರಾಬಾದ್‌ನ ನಾಸೀನ್ ಖಾನ್.
 

ನಾಸೀನ್ ಖಾನ್ ಪೂರ್ಣ ಹೆಸರು ಮೊಹಮ್ಮದ್ ನಾಸೀರುದ್ದೀನ್. ಈತನ ತಂದೆ ಕಿಂಗ್ ಗ್ರೂಪ್ ಮಾಲೀಕ ಶೆಹನವಾಜ್. ಸಾವಿರಾರು ಕೋಟಿ ರೂ ಒಡೆಯ. ನಾಸೀರ್ ಖಾನ್ ಬಳಿ ಇರುವ ಕಾರುಗಳ ಒಟ್ಟು ಮೌಲ್ಯ ಸರಿಸುಮಾರು 60 ಕೋಟಿ ರೂಪಾಯಿ.
 

ಭಾರತದಲ್ಲಿ ಮೆಕ್ಲರೆನ್ 765 LT ಸ್ಪೈಡರ್ ಕಾರು ಒಂದೇ ಒಂದು ಇದೆ. ಅದು ನಾಸೀರ್ ಖಾನ್ ಬಳಿ ಇದೆ. ಇದರ ಎಕ್ಸ್ ಶೋ ರೂಂ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಇನ್ನು ಆನ್‌ರೋಡ್ ಬೆಲೆ ಸರಿಸುಮಾರು 15 ರಿಂದ 20 ಕೋಟಿ ರೂಪಾಯಿ.
 

ಮೆಕ್ಲರೆನ್ ಜೊತೆಗೆ ನಾಸೀರ್ ಖಾನ್ ಬಳಿ 3 ಫೆರಾರಿ ಕಾರು, 3 ಲ್ಯಾಂಬೋರ್ಗಿನಿ, 2 ರೋಲ್ಸ್ ರಾಯ್ಸ್, 2 ಮರ್ಸಡೀಸ್ ಬೆಂಜ್, 1 ಫೋರ್ಡ್ ಮಸ್ತಾಂಗ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ

ನಾಸೀರ್ ಖಾನ್ ಬಳಿ 20ಕ್ಕೂ ಹೆಚ್ಚು ಐಷಾರಾಮಿ ಕಾರು ಹಾಗೂ ಬೈಕ್‌ಗಳಿವೆ. ಸೂಪರ್ ಬೈಕ್, ಸೂಪರ್ ಕಾರು ಕ್ರೇಜ್ ಹೊಂದಿರುವ ನಾಸೀರ್ ಖಾನ್, ಇನ್‌ಸ್ಟಾಗ್ರಾಂನಲ್ಲಿ 6 ಲಕ್ಷ ಫಾಲೋವರ್ಸ್ ಇದ್ದಾರೆ.

ಮೆಕ್ಲರೆನ್ 765 LT ಸ್ಪೈಡರ್ ಕಾರು 4.0 ಲೀಟರ್ ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್ ಹೊಂದಿದೆ. 765 Ps ಪವರ್ ಹಾಗೂ  800 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
 

7 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದ್ದು, ಆಲ್ ವ್ಹೀಲ್ ಪವರ್ ಹೊಂದಿದೆ. ಕಾರಿನ ಗರಿಷ್ಠ ವೇಗ 330 ಕಿ.ಮೀ ಪ್ರತಿ ಗಂಟೆಗೆ. ಈ ಸೂಪರ್ ಕಾರಿನಲ್ಲಿ ಗರಿಷ್ಠ ವೇಗದಲ್ಲಿ ಸಾಗಲು ಸಾಧ್ಯವಿದೆ.
 

click me!