ಲ್ಯಾಂಬೋರ್ಗಿನಿ ವೆನಾಟಸ್ ಕೂಪ್, ಇದು ಕೇವಲ ಕಾರಲ್ಲ ಐಷರಾಮಿ ಅರಮನೆ!

First Published | Feb 28, 2024, 4:13 PM IST

ಲ್ಯಾಂಬೋರ್ಗಿನಿ ಬ್ರ್ಯಾಂಡ್ ಕಾರು ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಲ್ಯಾಂಬೋರ್ಗಿನಿ ಉರುಸ್ ಕಾರಿನ ವಿನ್ಯಾಸ, ಪರ್ಫಾಮೆನ್ಸ್, ಐಷಾರಾಮಿ, ತಂತ್ರಜ್ಞಾನಕ್ಕೆ ಸಾಟಿಯೇ ಇಲ್ಲ. ಇದೀಗ ಐಷಾರಾಮಿ ಅರಮನೆಯಿಂತಿರುವ ಲ್ಯಾಂಬೋರ್ಗಿನಿ ಉರುಸು ವೆನಾಟಸ್ ಕೂಪ್ ಕಾರು ಭಾರಿ ಸಂಚಲನ ಮೂಡಿಸಿದೆ. ಈ ಕಾರಿನ ವಿಶೇಷತೆ, ಅರಮನೆಯಿಂತಿರುವ ಕಾರಿನ ಫೋಟೋ ಹಾಗೂ ವಿವರ ಇಲ್ಲಿದೆ.

ಲ್ಯಾಂಬೋರ್ಗಿನಿ ಉರುಸ್ ವೆನಾಟಸ್ ಕೂಪ್ ಇವೋಕ್. ಇದು ಕೇವಲ ಕಾರಲ್ಲ, ಐಷಾರಾಮಿ ಅರಮನೆ. ಹೌದು, ಅತ್ಯಾಕರ್ಷಕ ಕಾರಿನ ಡಿಸೈನ್, ಪರ್ಫಾಮೆನ್ಸ್ ಹಾಗೂ ಐಷಾರಾಮಿ ಫೀಚರ್ಸ್ ಎಲ್ಲರನ್ನು ಮನಸೂರೆಗೊಳ್ಳುತ್ತದೆ.

ಇದು ಕಸ್ಟಮೈಸೈಡ್ ಕಾರು. ಇದರ ಪರ್ಫಾಮೆನ್ಸ್ ನಿಮ್ಮ ಊಹೆಗೂ ನಿಲುಕದ್ದು. ಕಾರಣ,  900 hp ಪವರ್ ಹಾಗೂ  and 1,100 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಇದು ಇತರ ಸೂಪರ್ ಕಾರುಗಳಿಂದ ದುಪ್ಪಟ್ಟು.

Tap to resize

ಕೇವಲ 2.9 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳಲಿದೆ. ಈ ಕಾರಿನ ಗರಿಷ್ಠ ವೇಗ ಪ್ರತಿ ಗಂಟೆಗೆ 323 ಕಿಲೋಮೀಟರ್. ಅತ್ಯಂತ ಶಕ್ತಿ ಶಾಲಿ ಎಂಜಿನ್ ಈ ಕಾರಿನಲ್ಲಿ ಬಳಸಲಾಗಿದೆ.
 

ಇದರ ಇಂಟಿರೀಯರ್ ಡಿಸೈನ್ ಎಂತವರನ್ನು ಮೋಡಿ ಮಾಡುತ್ತದೆ. ಕಾರಿನ ಒಳಗೆ ತಿಳಿ ನೀಲಿ ಬಣ್ಣದ ಸೀಟು, ಮ್ಯಾಟ್, ಸ್ಟೀರಿಂಗ್ ಫೀಚರ್ ನೀಡಲಾಗಿದೆ. ಇದು ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ.
 

ಇದಕ್ಕೆ ತಕ್ಕಂತೆ ಲ್ಯಾಂಬೋರ್ಗಿನಿ ಉರುಸ್ ವೆನಾಟಸ್ ಕೂಪ್ ಇವೋಕ್ ಕಾರಿನಲ್ಲಿ ನೀಲಿ ಬಣ್ಣದ ಆ್ಯಂಬಿಯೆನ್ಸ್ ಕೂಡ ನೀಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ಬೇಕಾದರೆ ಆ್ಯಂಬಿಯೆನ್ಸ್ ಕಲರ್ ಬದಲಾಯಿಸಲು ಸಾಧ್ಯವಿದೆ. 

ಲ್ಯಾಂಬೋರ್ಗಿನಿ ಉರುಸ್ ವೆನಾಟಸ್ ಕೂಪ್ ಇವೋಕ್ ಸ್ಪೆಷಲ್ ಎಡಿಶನ್ ಕಾರಾಗಿದೆ. ಹೀಗಾಗಿ ಕೆಲವೇ ಕೆಲವು ಕಾರುಗಳು ಮಾತ್ರ ಲಭ್ಯ. ಇದರ ಜೊತೆಗೆ ಬೇಕಾದ ರೀತಿಯಲ್ಲಿ ಕಸ್ಟಮೈಸ್ ಆಯ್ಕೆಯೂ ಲಭ್ಯವಿದೆ.

ಇವೋಕ್ ಎಡಿಶನ್ ಲ್ಯಾಂಬೋರ್ಗಿನಿ ಮ್ಯಾನ್‌ಸೋರಿ ಎಡಿಶನ‌್‌ನಿಂದ ಸ್ಪೂರ್ತಿ ಪಡೆದ ಕಾರಾಗಿದೆ. ಹೀಗಾಗಿ ಮಾನ್ಸೊರಿ ಕಾರಿನ ಹಲವು ವಿಶೇಷತೆಗಳು ಈ ಹೊಸ ಕಾರಿನಲ್ಲಿದೆ
 

ಕಸ್ಟಮೈಸ್ ಆಯ್ಕೆ ಹಾಗೂ ಲಿಮಿಟೆಡ್ ಎಡಿಶನ್ ಕಾರಾಗಿರುವ ಕಾರಣ ಈ ಕಾರಿನ ಬೆಲೆ ಸ್ಪಷ್ಟವಿಲ್ಲ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬೆಲೆ ಬದಲಾಗಿದೆ. ಆದರೆ ಮೂಲ ಉರುಸ್ ಕಾರಾಗಿರುವ ಕಾರಣ ಈ ಕಾರಿನ ಬೆಲೆ 4.22 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ.

Latest Videos

click me!