ದುಬಾರಿ BMW ಕಾರು ಖರೀದಿಸಿದ ರಕ್ಷಕ್ ಬುಲೆಟ್, ಹೊಸ ಅತಿಥಿ ಆಗಮನದ ಬೆನ್ನಲ್ಲೆ ಟ್ರೋಲ್!

First Published | Feb 28, 2024, 11:42 AM IST

ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ಇದೀಗ ದುಬಾರಿ BMW ಕಾರು ಖರೀದಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಇಷ್ಟೊಂದು ದುಡ್ಡು ಎಲ್ಲಿಂದ ಅನ್ನೋ ಪ್ರಶ್ನೆ ಎದ್ದಿದೆ. ಈ ಟ್ರೋಲ್‌ಗಳಿಗೆ ರಕ್ಷಕ್ ಬುಲೆಟ್ ಕ್ಯಾರೆ ಎಂದಿಲ್ಲ.

ಬಿಗ್‌ಬಾಸ್ ಮನೆಯಲ್ಲಿ ನಾಲ್ಕೇ ವಾರಗಳಿದ್ದರೂ ರಕ್ಷಕ್ ಬುಲೆಟ್ ಜನಪ್ರಿಯತೆ, ಅಭಿಮಾನಿಗಳ ಬಳಗ ಹೆಚ್ಚಿದೆ. ತಮ್ಮ ಮಾತುಗಳಿಂದಲೇ ರಕ್ಷಕ್ ಬುಲೆಟ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ರಕ್ಷಕ್ ಹೊಸ ಕಾರಿನ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ.

ರಕ್ಷಕ್ ಬುಲೆ ಇದೀಗ ದುಬಾರಿ  BMW ಕಾರು ಖರೀದಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಮನಗೆ ಆಗಮಿಸಿದ ಹೊಸ ಅತಿಥಿಗೆ ಸ್ವಾಗತ ಎಂದು ಪೋಸ್ಟ್ ಮಾಡಿದ್ದಾರೆ.
 

Tap to resize

ಕಪ್ಪು ಬಣ್ಣದ  BMW ಕಾರು ಖರೀದಿಸಿದ್ದಾರೆ.  ಅತ್ಯಂತ ಆಕರ್ಷಕ ಸೆಡಾನ್  BMW ಐಷಾರಾಮಿ ಇದೀಗ ರಕ್ಷಕ್ ಬುಲೆಟ್ ಸಾರಥಿಯಾಗಿದೆ. ಆದರೆ ರಕ್ಷಕ್ ಬುಲೆಟ್ ಈ ಕಾರಿನ ಪೋಸ್ಟ್‌ನಿಂದ ಮತ್ತೆ ಟ್ರೋಲಿಗರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ರಕ್ಷಕ್ ಬುಲೆಟ್‌ಗೆ ಐಷಾರಾಮಿ ಕಾರು ಖರೀದಿಸಲು ಹಣ ಎಲ್ಲಿಂದ ಎಂದು ಪ್ರಶ್ನಿಸಿದ್ದಾರೆ. ರಕ್ಷಕ್ ಬುಲೆಟ್ ಐಷಾರಾಮಿ ಜೀವನ ಕುರಿತು ಹಲವ ಪ್ರಶ್ನೆಗಳನ್ನು ಟ್ರೋಲಿಗರು ಕೇಳುತ್ತಿದ್ದಾರೆ.

ರಕ್ಷಕ್ ಬುಲೆಟ್ ಈಗಾಗಲೇ ಮಹೀಂದ್ರ ಥಾರ್ ಜೀಪ್ ಮಾಲೀಕರಾಗಿದ್ದಾರೆ. ಸಹೋದರಿ ಮದುವೆ ಸಂದರ್ಭದಲ್ಲಿ ರಕ್ಷಕ್ ಬುಲೆಟ್ ಥಾರ್ ಜೀಪ್ ಖರೀದಿಸಿ ಸಂಭ್ರಮಪಟ್ಟಿದ್ದರು.

ಕೆಂಪು ಬಣ್ಣದ ಥಾರ್  ಜೀಪ್ ಕುರಿತು ಹಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜೀಪ್ ಮುಂಭಾಗದ ವಿಂಡ್‌ಶೀಲ್ಡ್ ಮೇಲೆ ಬುಲೆಟ್ ಎಂದು ಬರೆಸಿಕೊಂಡಿದ್ದಾರೆ.

ರಕ್ಷಕ್ ಬುಲೆಟ್ ಕಾಣಿಸಿಕೊಂಡಿರವ ಏಕೈಕ ಸಿನಿಮಾ ಗುರು ಶಿಷ್ಯರು. ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ರಕ್ಷಕ್ ಬುಲೆಟ್‌ಗೆ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ.

ಸಿನಿಮಾ ಬಳಿಕ ಬಿಗ್‌ಬಾಸ್ ವೇದಿಕೆ ಮೂಲಕವೇ ರಕ್ಷಕ್ ಬುಲೆಟ್ ಮನೆ ಮಾತಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ನಾಲ್ಕು ವಾರಗಳಿದ್ದ ರಕ್ಷಕ್ ಬುಲೆಟ್ ಆದಾಯದ ಮೂಲ ಏನು ಅನ್ನೋದು ಇದೀಗ ಟ್ರೋಲಿಗರ ಪ್ರಶ್ನೆಯಾಗಿದೆ.

Latest Videos

click me!