ಎಂಜಿ ಮಾಟಾರ್ ಇಂಡಿಯಾ ಸಂಸ್ಥೆಯು ನವೀಕರಿಸಿದ ZS EV 2021 ಆವೃತ್ತಿ ಎಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಂದು ಸಲ ಚಾರ್ಜ್ ಮಾಡಿದರೆ ಸುಮಾರು 419 ಕಿಮೀ ಮೈಲೆಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. 44.5 ಕೆಡಬ್ಲ್ಯೂಎಚ್ ಹೈ-ಟೆಕ್ ಬ್ಯಾಟರಿಯನ್ನು ಈ ವಾಹನ ಒಳಗೊಂಡಿದೆ.
ಅಷ್ಟೇ ಅಲ್ಲದೆ ವಾಹನವು 21555R17 ಟೈರ್ಸ್ ಹೊಂದಿದ್ದು ವಾಹನದ ಮತ್ತು ಬ್ಯಾಟರಿ-ಪ್ಯಾಕ್ನ ಗ್ರೌಂಡ್ ಕ್ಲಿಯರನ್ಸ್ ಅನ್ನು ಕ್ರಮವಾಗಿ 177 ಎಂಎಂ ಮತ್ತು 205 ಎಂಎಂಗೆ ಹೆಚ್ಚಿಸಲಾಗಿದೆ. ದೇಶದ 31 ನಗರಗಳಲ್ಲಿ ಈ ನವೀಕರಿಸದ ಆವೃತ್ತಿಯು ಖರೀದಿಗೆ ಲಭ್ಯವಿದೆ. ರೂ 20.99 ಲಕ್ಷ (ಎಕ್ಸ್-ಶೋ ರೂಂ) ಬೆಲೆ ನಿಗದಿ ಪಡಿಸಲಾಗಿದೆ.
ಎಂಜಿ ಜಡ್‌ಎಸ್ ಇವಿ ವಾಹನವು 143 ಪಿಎಸ್ ಪವರ್ ಮತ್ತು 350 ಎನ್‌ಎಂ ಟಾರ್ಕ್ ಹೊಂದಿದೆ ಮತ್ತು 8.5 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗಕ್ಕೆ ತಲುಪುವ ಸಾಮರ್ಥ್ಯವನ್ನು ಸಹ ಹೊಂದಿದೆ . ಎಕ್ಸೈಟ್ & ಎಕ್ಸ್‌ಕ್ಲೂಸಿವ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.
ಭಾರತದ ಮೊದಲ ಪ್ಯೂರ್ ಎಲೆಕ್ಟ್ರಿಕ್ ಇಂಟರ್ನೆಟ್ ಎಸ್‌ಯುವಿ ಇದಾಗಿದ್ದು ಎಂಜಿ ಸಿಗ್ನೇಚರ್ ಜಾಗತಿಕ ವಿನ್ಯಾಸದ ಸೂಚನೆಗಳನ್ನು ಅಳವಡಿಸಿಕೊಂಡಿದೆ ಮತ್ತು ಪನೋರಮಿಕ್ ಸನ್‌ರೂಫ್, 17-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್ಸ್, ಪಿಎಂ 2.5 ಫಿಲ್ಟರ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಬ್ಯಾಟರಿಯನ್ನು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಲು ವಿವಿಧ ಸೌಲಭ್ಯವನ್ನು ಸಹ ವಾಹನದಲ್ಲಿ ಕಲ್ಪಿಸಲಾಗಿದ್ದು 5-ವೇ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ..ನಿವಾಸಗಳು ಅಥವಾ ಕಚೇರಿಗಳಲ್ಲಿ ಉಚಿತ ಎಸಿ ಫಾಸ್ಟ್ ಚಾರ್ಜರ್, ಪೋರ್ಟಬಲ್ ಇನ್-ಕಾರ್ ಚಾರ್ಜಿಂಗ್ ಕೇಬಲ್, ಡೀಲರ್‌ಶಿಪ್‌ಗಳಲ್ಲಿ ಡಿಸಿ ಸೂಪರ್‌ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳು, 24x7 ಚಾರ್ಜ್-ಆನ್- ಪ್ರಯಾಣದ ಸೌಲಭ್ಯ (5 ನಗರಗಳಲ್ಲಿ), ಮತ್ತು ಉಪಗ್ರಹ ನಗರಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಚಾರ್ಜ್ ಮಾಡಿಕೊಳ್ಳುವ ಸೌಲಭ್ಯ ಹೊಂದಿದೆ.
“ಇಎಸ್ ಜಾಗದ ಬಗ್ಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಾ 1 ವರ್ಷದ ಅಲ್ಪಾವಧಿಯಲ್ಲಿ ಜಡ್ಎಸ್ ಇವಿ ವಿಕಾಸವನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಗ್ರಾಹಕರಿಗೆ ಉತ್ತಮ ಮಾಲೀಕತ್ವದ ಅನುಭವವನ್ನು ವಿಸ್ತರಿಸಲು ನಾವು ನಮ್ಮ ಪರಿಸರ ವ್ಯವಸ್ಥೆಯ ಪಾಲುದಾರರೊಂದಿಗೆ ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ” ಎಂದು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಾಬಾ ಹೇಳಿದರು.
‘ಇಕೋಟ್ರೀ ಚಾಲೆಂಜ್’ ಅನ್ನು ಸಹ ಪರಿಚಯಿಸಲಾಗಿದ್ದು ಈ ಮೂಲಕ ಜಡ್ಎಸ್ ಇವಿ ಮಾಲೀಕರು ಪರಿಸರ ಉಪಕ್ರಮದಲ್ಲಿ ಭಾಗವಹಿಸಬಹುದು ಮತ್ತು ತಮ್ಮ ಸಿಒ 2 ಉಳಿತಾಯ ಮತ್ತು ರಾಷ್ಟ್ರೀಯ ಶ್ರೇಯಾಂಕವನ್ನು ಟ್ರ್ಯಾಕ್ ಮಾಡಬಹುದು.
ಎಂಜಿ ಜಡ್ ಇವಿ 2021 ಅನ್ನು ಎಂಜಿ ಇಶೀಲ್ಡ್ ಅಡಿಯಲ್ಲಿ ಒಳಗೊಂಡಿದ್ದು ಅನಿಯಮಿತ ಕಿಮೀ ಗಳಿಗೆ 5 ವರ್ಷಗಳ ಖಾತರಿ, ಬ್ಯಾಟರಿ ಪ್ಯಾಕ್ ವ್ಯವಸ್ಥೆಯಲ್ಲಿ 8 ವರ್ಷ ಅಥವಾ 1.5 ಲಕ್ಷ ಕಿಮೀ ಖಾತರಿ, ರೌಂಡ್-ದಿ-ಕ್ಲಾಕ್ ರಸ್ತೆಬದಿಯ ಸಹಾಯ (ಆರ್ಎಸ್ಎ) 5 ವರ್ಷಗಳವರೆಗೆ ಮತ್ತು 5 ಕಾರ್ಮಿಕ ಮುಕ್ತ ಸೇವೆಗಳು ಸೌಲಭ್ಯನ್ನು ಕಲ್ಪಿಸಿದೆ.