ಮಹೀಂದ್ರ XEV 9e ಪ್ರತಿಸ್ಪರ್ಧಿ ಕಾರಿಗೆ ಬರೋಬ್ಬರಿ 4 ಲಕ್ಷ ರೂ ನಗದು ಡಿಸ್ಕೌಂಟ್,ಲಿಮಿಟೆಡ್ ಆಫರ್

Published : May 05, 2025, 06:01 PM IST

ಮಹೀಂದ್ರ  XEV 9e ಎಲೆಕ್ಟ್ರಿಕ್ ಕಾರು ದೇಶದ ಗಮನಸೆಳೆದಿದೆ. ಇದೀಗ ಈ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಎಲೆಕ್ಟ್ರಿಕ್ ಕಾರಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ನಗದು ಡಿಸ್ಕೌಂಟ್ ಆಫರ್ ನೀಡಲಾಗಿದೆ. 

PREV
15
ಮಹೀಂದ್ರ XEV 9e ಪ್ರತಿಸ್ಪರ್ಧಿ ಕಾರಿಗೆ ಬರೋಬ್ಬರಿ 4 ಲಕ್ಷ ರೂ ನಗದು ಡಿಸ್ಕೌಂಟ್,ಲಿಮಿಟೆಡ್ ಆಫರ್

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಲ್ಲಿ ಹಲವು ಆಯ್ಕೆಗಳಿವೆ. ಈ ಪೈಕಿ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸಂಚಲನ ಸೃಷ್ಟಿಸಿರುವ ಮಹೀಂದ್ರ  XEV 9e ಕಾರುಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ಇದರ ಪರಿಣಾಮದ ಈ ಕಾರಿನ ಪ್ರತಿಸ್ಪರ್ಧಿಗಳು ಕಾರುಗಳು ಪೈಪೋಟಿ ಎದುರಿಸುವಂತಾಗಿದೆ. ಈ ಪೈಪೋಟಿಯಿಂದ ಇದೀಗ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್, ಇತರ ಆಫರ್ ಲಭ್ಯವಾಗುತ್ತಿದೆ. ಈ ಮೂಲಕ ಗರಿಷ್ಠ ಮಾರಾಟ ದಾಖಲೆ ಬರೆಯಲು ಪ್ರಯತ್ನಿಸುತ್ತಿದೆ.

25

ವಿಶೇಷ ಅಂದರೆ ಮಹೀಂದ್ರ ಪೈಪೋಟಿಯಿಂಂದ XEV 9e ಪ್ರತಿಸ್ಪರ್ಧಿ ಕಾರಾಗಿರುವ ಹ್ಯುಂಡೈಐಯಾನಿಕ್ 5 ಎಸ್‌ಯುವಿ ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಲಾಗಿದೆ. ಇದೀಗ ಹ್ಯುಂಡೈ ಐಯಾನಿಕ್ 5 ಎಸ್‌ಯುವಿ ಎಲೆಕ್ಟ್ರಿಕ್ ಕಾರಿನ ಮೇಲೆ ಬರೋಬ್ಬರಿ 4 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಿಂದ ಹ್ಯುಂಡೈ ಐಯಾನಿಕ್ 5 ಇವಿ ಕಾರು ಖರೀದಿಸುವವರಿಗೆ ಭಾರಿ ಪ್ರಯೋಜನವಾಗಲಿದೆ.

35

ನೇರವಾಗಿ ಮಹೀಂದ್ರ ಇದೀಗ 4 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಇದರ ಜೊತೆಗೆ ಕೆಲ ಡೀಲರ್ಸ್  ಹೆಚ್ಚುವರಿ ಬೋನಸ್, ವಾರೆಂಟಿ, ಸರ್ವೀಸ್,ಆ್ಯಕ್ಸಸರಿ ಸೇರಿದಂತೆ ಇತರ ಕೆಲ ಡಿಸ್ಕೌಂಟ್ ಘೋಷಿಸಿದೆ.  ಈ ಮೂಲಕ ಗ್ರಾಹಕರು ಇದೀಗ ಹ್ಯುಂಡೈ ಐಯಾನಿಕ್ 5 ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸಬಹುದು. ಈ ಆಫರ್ ಲಿಮಿಟೆಡ್ ಅವಧಿಗೆ ಲಭ್ಯವಿದೆ. ಆದರೆ 4 ಲಕ್ಷ ರೂಪಾಯಿ ಡಿಸ್ಕೌಂಟ್ ಆಫ್ MY2024 ಮಾಡೆಲ್ ಕಾರುಗಳಿಗೆ ಅನ್ವಯಿಸಲಿದೆ.

45

ಮಹೀಂದ್ರ XEV 9e ಇವಿ ಕಾರು ಬಿಡುಗಡೆಯಾದ ಬಳಿಕ ಹ್ಯುಂಡೈ ಐಯಾನಿಕ್ 5 ಇವಿ ಕಾರಿನ ಮಾರಾಟಕ್ಕೆ ಹಿನ್ನಡೆಯಾಗಿತ್ತು. ಇದೀಗ MY2024 ಸ್ಟಾಕ್ ಕ್ಲೀಯರೆನ್ಸ್‌ಗಾಗಿ ಆಫರ್ ಘೋಷಿಸಿದೆ. ಈ ಆಫರ್ ಹ್ಯುಂಡೈ ಐಯಾನಿಕ್ ಮಾರಾಟ ಹೆಚ್ಚಿಸುವ ನಿರೀಕ್ಷೆಯಲ್ಲಿದೆ. ಹ್ಯುಂಡೈ ಐಯಾನಿಕ್ 5 ಎಸ್‌ಯುವಿ ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆ 48.78 ಲಕ್ಷ ರೂಪಾಯಿ. ಇದರ ಮೇಲೆ ಮಹೀಂದ್ರ 4 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಿದೆ. ಆದರೆ ಡಿಸ್ಕೌಂಟ್ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ ವ್ಯತ್ಯಾಸವಾಗಲಿದೆ. ಹೀಗಾಗಿ ಡೀಲರ್ ಬಳಿ ಸಂಪರ್ಕಿಸಿ ಡಿಸ್ಕೌಂಟ್ ಖಚಿತಪಡಿಸಿಕೊಳ್ಳಿ. 

55

ಹ್ಯುಂಡೈ ಐಯಾನಿಕ್ 5 ಕಾರಿಗೆ ಮಾತ್ರವಲ್ಲ, ಇತರ ಕೆಲ ಹ್ಯುಂಡೈ ಕಾರುಗಳ ಮೇಲೂ ಡಿಸ್ಕೌಂಟ್ ಆಫರ್ ಲಭ್ಯವಿದ. ಹ್ಯುಂಡೈ i10 Nios ಕಾರಿಗೆ 80,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಹ್ಯುಂಡೈ ಔರಾ ಹಾಗೂ ಎಕ್ಸ್‌ಟರ್ ಕಾರಿನ ಮೇಲೆ 65,000 ರೂಪಾಯಿ ಹಾಗೂ 55,000 ರೂಪಾಯಿ ಆಫರ್ ನೀಡಲಾಗಿದೆ. ಇನ್ನು ಹ್ಯಂಡೈ ವೆನ್ಯೂ ಕಾರಿನ ಮೇಲೆ 75,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಈ ಎಲ್ಲಾ ಡಿಸ್ಕೌಂಟ್ ಕುರಿತು ಹತ್ತಿರದ ಡೀಲರ್ ಬಳಿ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.

Read more Photos on
click me!

Recommended Stories