ಭಾರತದಲ್ಲಿ ಐಷಾರಾಮಿ,ದುಬಾರಿ ಕಾರುಗಳಿಂದ ಹಿಡಿದು ಕೈಗೆಟುಕುವ ದರದಲ್ಲಿ ಕಾರುಗಳು ಲಭ್ಯವಿದೆ. 4 ಲಕ್ಷ ರೂಪಾಯಿಗೂ ಭಾರತದಲ್ಲಿ ಹೊಸ ಕಾರು ಲಭ್ಯವಿದೆ. ಒಂದೊಂದು ರಾಜ್ಯದಲ್ಲಿ ಕಾರುಗಳ ಆನ್‌ರೋಡ್ ಬೆಲೆ ಬೇರೆ ಬೇರೆ. ಆಯಾ ರಾಜ್ಯದ ತೆರಿಗೆಗೆ ಅನುಗುಣವಾಗಿ ಬದಲಾಗುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಇದೀಗ ಪ್ರಶ್ನೆ ಭಾರತ ಮಾಲೀಕತ್ವದ, ಭಾರತೀಯ ಮೂಲದ ಕಾರು ಭಾರತದಲ್ಲಿ 2 ಕೋಟಿ ರೂಪಾಯಿ ಆದರೆ ಈ ದೇಶದಲ್ಲಿ ಕೇವಲ 80 ಲಕ್ಷ ರೂಪಾಯಿಗೆ ಲಭ್ಯವಿದೆ. ಇಷ್ಟೇ ಅಲ್ಲ ಬೇರೆ 2 ಕೋಟಿ ರೂಪಾಯಿ ಕಾರುಗಳು ಈ ದೇಶದಲ್ಲಿ ಕೇವಲ 30 ಲಕ್ಷ ರೂಪಾಯಿಗೆ ಲಭ್ಯವಿದೆ. ವಿಶೇಷ ಅಂದರೆ ಹೀಗೆ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ದೇಶ ಒನ್ ಒನ್ ಒನ್ಲಿ ದುಬೈ.