ಭಾರತದ ಫೇಮಸ್ ಕಾರ್ ತಯಾರಕ ಕಂಪನಿ ಮಾರುತಿ ಸುಜುಕಿ ಬೆಸ್ಟ್ ವೆಹಿಕಲ್ ಲೈನ್ಅಪ್ ಹೊಂದಿದೆ. ಬೆಳೆಯುತ್ತಿರುವ ಎಸ್‌ಯುವಿ ಮಾರ್ಕೆಟ್‌ನಲ್ಲಿ, ಹಲವು ವಿಭಾಗಗಳಲ್ಲಿ ತನ್ನ ಉಪಸ್ಥಿತಿ ಗಟ್ಟಿ ಮಾಡಿಕೊಳ್ಳೋದು ಕಂಪನಿಯ ಗುರಿ. 2025ರಲ್ಲಿ ರಸ್ತೆಗೆ ಬರಲಿರುವ ಮೂರು ಮಾರುತಿ ಎಸ್‌ಯುವಿಗಳ ಪೂರ್ತಿ ಡೀಟೇಲ್ಸ್ ಇಲ್ಲಿ ತಿಳ್ಕೊಳ್ಳಿ.
ಮಾರುತಿ ಎಲೆಕ್ಟ್ರಿಕ್ ವಿಟಾರಾ
ಮಾರುತಿ ಇ-ವಿಟಾರಾ 2025 ಮಾರ್ಚ್‌ನಲ್ಲಿ ಬರಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಇದರ ಬಿಡುಗಡೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ.. ಹಾರ್ಟೆಕ್ಟ್-ಇ ಪ್ಲಾಟ್‌ಫಾರ್ಮ್ ಬೇಸ್ಡ್ ಈ ಎಲೆಕ್ಟ್ರಿಕ್ ಎಸ್‌ಯುವಿ 49kWh ಮತ್ತು 62kWh ಅಂತ ಎರಡು ಬ್ಯಾಟರಿ ಪ್ಯಾಕ್ ಆಪ್ಷನ್ ಜೊತೆ ಸಿಗುತ್ತೆ. ಇವೆರಡೂ 500 ಕಿಲೋಮೀಟರ್‌ಗಿಂತ ಜಾಸ್ತಿ ದೂರ ಹೋಗೋ ಕೆಪಾಸಿಟಿ ಹೊಂದಿವೆ. ಎರಡು ಬ್ಯಾಟರಿಗಳೂ ಫ್ರಂಟ್ ಆಕ್ಸಲ್‌ನಲ್ಲಿ ಫಿಕ್ಸ್ ಆಗಿರೋ ಎಲೆಕ್ಟ್ರಿಕ್ ಮೋಟಾರ್‌ಗಳ ಜೊತೆ ಕನೆಕ್ಟ್ ಆಗಿರುತ್ತೆ. ಇದು ಕ್ರಮವಾಗಿ 143bhp ಮತ್ತು 173bhp ಪವರ್ ಕೊಡುತ್ತೆ. ಮಾರುತಿ ಸುಜುಕಿ ದೇಶದಲ್ಲಿರೋ 100 ಸಿಟಿಗಳಲ್ಲಿ ಡೀಲರ್‌ಶಿಪ್‌ಗಳಲ್ಲಿ ಫಾಸ್ಟ್ ಚಾರ್ಜರ್‌ಗಳನ್ನು ಹಾಕಿತ್ತಿದೆ. ಜೊತೆಗೆ 1,000ಕ್ಕೂ ಹೆಚ್ಚು ಸಿಟಿಗಳಲ್ಲಿ 1,500ಕ್ಕೂ ಹೆಚ್ಚು ಎಲೆಕ್ಟ್ರಿಕ್ ವೆಹಿಕಲ್‌ಗಳಿಗಾಗಿ ಸರ್ವಿಸ್ ಸೆಂಟರ್‌ಗಳನ್ನು ಹಾಕ್ತಾ ಇದೆ. ಈ ಎಲೆಕ್ಟ್ರಿಕ್ ಕಾರಿಗಾಗಿ ಮಾರುತಿ ಸುಜುಕಿ ಒಂದು ಸ್ಪೆಷಲ್ ಚಾರ್ಜಿಂಗ್ ಆ್ಯಪ್ ಬಿಡುಗಡೆ ಕೂಡ ಮಾಡಲಿದೆ.