ಕಡಿಮೆ ಬೆಲೆಗೆ ಟೆಸ್ಲಾ Y ಮಾಡೆಲ್ ಕಾರು ಪರಿಚಯಿಸಲು ಮುಂದಾದ ಎಲಾನ್ ಮಸ್ಕ್

Published : Mar 17, 2025, 05:01 PM ISTUpdated : Mar 17, 2025, 06:43 PM IST

ಕಡಿಮೆ ಬೆಲೆಯ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೆ ತಯಾರಿ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಟೆಸ್ಲಾ ಘೋಷಣೆ ಹಲವರ ಸಂಭ್ರಮ ಡಬಲ್ ಮಾಡಿದೆ. ಕಾರಣ  ಇದು ಅತೀ ಕಡಿಮೆ ಬೆಲೆಯ ಟೆಸ್ಲಾ ವೈ ಮಾಡೆಲ್ ಕಾರು ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.  

PREV
15
ಕಡಿಮೆ ಬೆಲೆಗೆ ಟೆಸ್ಲಾ Y ಮಾಡೆಲ್ ಕಾರು ಪರಿಚಯಿಸಲು ಮುಂದಾದ ಎಲಾನ್ ಮಸ್ಕ್

ಪ್ರಧಾನಿ ನರೇಂದ್ರ ಇತ್ತೀಚೆಗೆ ಅಮೆರಿಕ ಪ್ರವಾಸದಲ್ಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಇದೇ ವೇಳೆ ಉದ್ಯಮಿ,  ಟ್ರಂಪ್ ಸರ್ಕಾರದ DOGE ಮುಖ್ಯಸ್ಥನಾಗಿರುವ ಎಲಾನ್ ಮಸ್ಕ್ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಟೆಸ್ಲಾ ಭಾರತಕ್ಕೆ ಎಂಟ್ರಿಕೊಡುವ ಸೂಚನೆ ನೀಡಿತ್ತು. ಇದೀಗ ಟೆಸ್ಲಾ ಮಹತ್ವದ ಘೋಷಣೆ ಮಾಡಿದೆ. ಟೆಸ್ಲಾ ಅತೀ ಕಡಿಮೆ ಬೆಲೆಗೆ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಜಗತ್ತಿನಾದ್ಯಂತ ಟೆಸ್ಲಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಟೆಸ್ಲಾ ಈ ನಿರ್ಧಾರ ಕೈಗೊಂಡಿದೆ. 

25

ಅಮೆರಿಕದಲ್ಲಿ ಎಂಟ್ರಿ ಲೆವೆನ್ ಟೆಸ್ಲಾ ಕಾರಾಗಿರುವ ವೈ ಮಾಡೆಲ್ ಕಾರುಗಳನ್ನು ಇತರ ದೇಶಗಳಲ್ಲಿ ಮತ್ತಷ್ಟು ಅಗ್ಗದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇದೇ ಅಗ್ಗದ ಕಾರಿನ ಮೂಲಕ ಭಾರತಕ್ಕೂ ಎಂಟ್ರಿಕೊಡುವ ಸಾಧ್ಯತೆ ಇದೆ. ಸದ್ಯ ಟೆಸ್ಲಾ ಅಗ್ಗದ ಕಾರುಗಳನ್ನು ಚೀನಾದ ಶಾಂಘೈನಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.

35

ಶಾಂಘೈನಲ್ಲಿ ತಯಾರಾಗುವ ಕಡಿಮೆ ಬೆಲೆಯ ಟೆಸ್ಲಾ ಕಾರುಗಳು ಹಲವು ದೇಶಗಳಿಗೆ ರಫ್ತು ಮಾಡಲು ಟೆಸ್ಲಾ ಮುಂದಾಗಿದೆ. ಇದರಿಂದ ಏಷ್ಯನ್ ರಾಷ್ಟ್ರಗಳಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಟೆಸ್ಲಾ ಅತೀ ದೊಡ್ಡ ಪ್ಲಾನ್ ಮಾಡುತ್ತಿದೆ. ಏಷ್ಯಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದರೆ ಮಾರಾಟ ಗಣನೀಯವಾಗಿ ಏರಿಕೆ ಕಾಣಲಿದೆ ಅನ್ನೋ ಸತ್ಯವನ್ನು ಮಸ್ಕ್ ಅರಿತುಕೊಂಡಿದ್ದಾರೆ.

45

ಸದ್ಯ ಎಂಟ್ರಿ ಲೆವಲ್ ಟೆಸ್ಲಾ ಕಾರಿನ ಬೆಲೆ $35,000. ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 30 ಲಕ್ಷ ರೂಪಾಯಿ. ಈ ಕಾರು ಶಾಂಘೈನಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಟೆಸ್ಲಾ ವೈ ಮಾಡೆಲ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಈ ಕಾರುಗಳ ಬೆಲೆ 20 ಲಕ್ಷ ರೂಪಾಯಿ ಆಸುಪಾಸಿನಲ್ಲಿರಲಿದೆ ಎಂದು ಹೇಳಲಾಗುತ್ತಿದೆ.

55

ವೈ ಮಾಡೆಲ್ ಕಾರುಗಳನ್ನು ಇತ್ತೀಚೆಗೆ ಮತ್ತಷ್ಟು ಫೀಚರ್ಸ್‌ನೊಂದಿಗೆ ಟೆಸ್ಲಾ ಮರುವಿನ್ಯಾಸಗೊಳಿಸಿದೆ. ಟೆಸ್ಲಾ ಕಾರುಗಳ ಪೈಕಿ ಮಾಡೆಲ್ 3 ಹಾಗೂ ಮಾಡೆಲ್ ವೈ ಅತೀ ಹೆಚ್ಚು ಮಾರಾಟ ಕಾಣುತ್ತಿದೆ. ಪ್ರಮುಖವಾಗಿ ಇದರ ಬೆಲೆ. ಇನ್ನು ಟೆಸ್ಲಾ ಕಾರಿನ ಗುಣಮಟ್ಟ, ಪರ್ಫಾಮೆನ್ಸ್ ವಿಚಾರದಲ್ಲಿ ಹೆಚ್ಚಿನವರಿಗೆ ಯಾವುದೇ ತಕರಾರಿಲ್ಲ.

Read more Photos on
click me!

Recommended Stories