ಭಾರತದಲ್ಲಿ ಮಾರುತಿ ಸುಜುಕಿ ಅತೀ ಹೆಚ್ಚಿನ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಕೈಗೆಟುಕುವ ದರ, ಉತ್ತಮ ಮೈಲೇಜ್, ಹೈಬ್ರಿಡ್, ಸಿಎನ್‌ಜಿ ಆಯ್ಕೆ ಸೇರಿದಂತೆ ಹಲವು ವಿಶೇಷತೆ ಮಾರುತಿ ಸುಜುಕಿಯಲ್ಲಿದೆ. ಇದೀಗ ಮಾರುತಿ ಎಲೆಕ್ಟ್ರಿಕ್ ಮಾರುಕಟ್ಟೆಗೆ ಕಾಲಿಡುತ್ತಿದೆ.
ಟಾಟಾ ಮೋಟಾರ್ಸ್ ಭಾರತದಲ್ಲಿ ಇವಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ಎಂಜಿ, ಹ್ಯುಂಡೈ , ಮಹೀಂದ್ರ ಸೇರಿದಂತೆ ಇತರ ಆಟೋ ಕಂಪನಿಗಳು ಇವಿ ಮೂಲಕ ಸಂಚಲನ ಸೃಷ್ಟಿಸಿದೆ. ಇದೀಗ ಮಾರುತಿ ಸುಜುಕಿ ಸರದಿ
ಮಾರುತಿ ಸುಜುಕಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ರೋಡ್ ಟೆಸ್ಟಿಂಗ್ ನಡೆಯುತ್ತಿದೆ. ಹೌದು, ಮಾರುತಿ ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಕಾರು ದೆಹಲಿ ಹಾಗೂ ಮುಂಬೈ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ.
ಮಾರುತಿ ಸುಜುಕಿ ಇವಿ ಮಾರುಕಟ್ಟೆಗೆ ಕೊಂಚ ವಿಳಂಬವಾಗಿ ಕಾಲಿಡುತ್ತಿದೆ. ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿಕೊಡುತ್ತಿರು ಮಾರುತಿ ಸುಜುಕಿ, ಅತೀಕಡಿಮೆ ಬೆಲೆಗೆ ಗರಿಷ್ಠ ಮೈಲೇಜ್ ಕಾರು ನೀಡಲು ಸಜ್ಜಾಗಿದೆ.
ಮಾರುತಿ ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಕಾರಿನಲ್ಲಿ 60 kWh ಬ್ಯಾಟರಿ ಪ್ಯಾಕ್ ಬಳಸಲಾಗುತ್ತಿದೆ. ಇದರಿಂದ ಒಂದು ಬಾರಿ ಚಾರ್ಜ್ ಮಾಡಿದರೆ 550 ಕಿಲೋಮೀಟರ್‌ನಿಂದ 600 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ ಇವಿಎಕ್ಸ್ ಎಲೆಕ್ಟ್ರಿಕ್ ಕಾರು ನೇರವಾಗಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ನೆಕ್ಸಾನ್ ಇವಿ ಆರಂಭಿಕ ಎಕ್ಸ್ ಶೋ ರೂಂ ಬೆಲೆ 14.74 ಲಕ್ಷ ರೂಪಾಯಿ.
ಮಾರುತಿ ಸುಜುಕಿ ಇವಿಎಕ್ಸ್ ಇವಿ ಕಾರಿನ ಬಲೆ 10 ರಿಂ 13 ಲಕ್ಷ ರೂಪಾಯಿ ಒಳಗಿರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಮೂಲಕ ಮಾರುತಿ ಭಾರತದಲ್ಲಿ ಅತೀ ಕಡಿಮೆ ಬೆಲೆಗೆ ಗರಿಷ್ಠ ಮೈಲೇಜ್ ಕಾರು ನೀಡಲು ಸಜ್ಜಾಗಿದೆ.
ಇವಿಎಕ್ಸ್ ಕಾನ್ಸೆಪ್ಟ್ ಕಾರನ್ನು ಈಗಾಗಲೇ ಅನಾವರಣ ಮಾಡಲಾಗಿತ್ತು. ಇದೀಗ ಟೆಸ್ಟಿಂಗ್ ಸೇರಿದಂತೆ ಇತರ ಕಾರ್ಯಗಳು ನಡೆಯುತ್ತಿದೆ. 2024ರ ಅಂತ್ಯದಲ್ಲಿ ನೂತನ ಇವಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.