ಅಡಾಸ್ ಟೆಕ್, 26KM ಮೈಲೇಜ್, ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಮಾರುತಿ ಸ್ವಿಫ್ಟ್ ಕಾರು ಲಾಂಚ್

Published : Jan 29, 2025, 11:17 AM ISTUpdated : Jan 30, 2025, 09:55 AM IST

ಮಾರುತಿ ಸುಜುಕಿ ಸ್ವಿಫ್ಟ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಮುಖ್ಯವಾಗಿ ಈ ಕಾರು 5 ಸ್ಟಾರ್ ಸೇಪ್ಟಿ ಹೊಂದರಿಲಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಅಡಾಸ್ ತಂತ್ರಜ್ಞಾನ, ಉತ್ತಮ ಮೈಲೇಜ್, ಕೈಗೆಟುಕುವ ಬೆಲೆ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿ ಇರಲಿದೆ.  

PREV
15
ಅಡಾಸ್ ಟೆಕ್, 26KM ಮೈಲೇಜ್, ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಮಾರುತಿ ಸ್ವಿಫ್ಟ್ ಕಾರು ಲಾಂಚ್

ಇದು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಕಾರು. ಹೀಗಾಗಿ ಬರೋಬ್ಬರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರಿಂದ ದುಬಾರಿ ಇಂಧನ ಸಮಸ್ಯೆಗೆ ಉತ್ತರವಾಗಲಿದೆ. ಈ ಮೂಲಕ ಗ್ರಾಹಕರಿಗೆ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಕಾರು ಬಳಸಲು ಮಾರುತಿ ಸುಜುಕಿ ಸ್ವಿಫ್ಟ್ ಹೈಬ್ರಿಡ್ ಅನುವು ಮಾಡಿಕೊಡಲಿದೆ.
 

25

ಅಡಾಸ್ ಟೆಕ್ನಾಲಜಿ ಈ ಕಾರಿನಲ್ಲಿ ಬಳಸಲಾಗಿದೆ. ಹೀಗಾಗಿ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಸ್ವಿಪ್ಟ್ ಕಾರು ಡ್ರೈವಿಂಗ್ ಹಾಗೂ ಪ್ರಯಾಣ ಮತ್ತಷ್ಟು ಸುಲಭ ಹಾಗೂ ಸುರಕ್ಷತೆ ನೀಡಲಿದೆ.ಅತ್ಯಾಧುನಿಕ ತಂತ್ರಜ್ಞಾನ ಮಾರುತಿ ಸ್ವಿಫ್ಟ್ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
 

35

ಪ್ರಮುಖವಾಗಿ ಮಾರುತಿ ಸುಜುಕಿ ಕಾರುಗಳ ಸುರಕ್ಷತಾ ರೇಟಿಂಗ್ ಕಡಿಮೆ ಮಾತು ಎಲ್ಲೆಡೆ ಕೇಳಿಬರುತ್ತದೆ. ಆದರೆ ಮಾರುತಿ ಸುಜುಕಿ ಡಿಸೈರ್ ಕಾರುನ್ನು 5 ಸ್ಟಾರ್ ಸುರಕ್ಷತೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ ಸ್ವಿಫ್ಟ್ ಕಾರು ಕೂಡ ಇದೇ ರೀತಿ 5 ಸ್ಟಾರ್ ಸುರಕ್ಷತೆ ಇರಲಿದೆ ಎಂದು ವರದಿಗಳು ಹೇಳುತ್ತಿದೆ. 

45

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೈಬ್ರಿಡ್ ಸ್ವಿಫ್ಟ್ 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಪುಶ್ ಬಟನ್ ಸ್ಟಾರ್ಟ್/ಸ್ಟಾಪ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನಲ್ಲಿ ಸ್ಪೋರ್ಟಿ ಸೀಟುಗಳನ್ನು ಸಹ ಕಾಣಬಹುದು. ಇದರಲ್ಲಿ 5 ಜನರಿಗೆ ಆಸನದ ವ್ಯವಸ್ಥೆ ಇರುತ್ತದೆ.

55

ಈ ಕಾರಿನಲ್ಲಿ ಹಿಂಬದಿಯ ಪ್ರಯಾಣಿಕರಿಗೆ ಎಸಿ ವೆಂಟ್ ವ್ಯವಸ್ಥೆ ಇರುತ್ತದೆ, ಪ್ರಸ್ತುತ ಸ್ವಿಫ್ಟ್‌ನ ಬೆಲೆ ರೂ.6.49 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ಹೈಬ್ರಿಡ್ ಸ್ವಿಫ್ಟ್ ಈ ವರ್ಷ ಬಿಡುಗಡೆಯಾಗಬಹುದು. ಇದರ ಬೆಲೆ ಹಾಲಿ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿನ ಬೆಲೆಗಿಂತ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ.

click me!

Recommended Stories