ಭಾರತದಲ್ಲಿ ಕೈಗೆಟುಕು ದರದಲ್ಲಿ ಮಾರುತಿ ಸುಜುಕಿ ಕಾರುಗಳನ್ನು ನೀಡುತ್ತಿದೆ. ಈ ಪೈಕಿ 7 ಸೀಟರು ಕಾರು ಮಾರುತಿ ಸುಜುಕಿ ಎರ್ಟಿಗಾ ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದೀಗ ಎರ್ಟಿಗಾ ಕಾರು 7.8 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಆದರೆ ಈ ಕಾರನ್ನು ಸಿಎಸ್‌ಡಿ ಮೂಲಕ ಖರೀದಿಸಿದರೆ ಶೇಕಡಾ 28ರಷ್ಟಿದ್ದ ಜಿಎಸ್‌ಟಿ ಬದಲು, ಕೇವಲ ಶೇಕಡಾ 14ರಷ್ಟು ಜಿಎಸ್‌ಟಿ ಪಾವತಿಸಿದರೆ ಸಾಕು. ಹೀಗಾಗಿ ಬೆಲೆ ಭಾರಿ ಇಳಿಕೆಯಾಗಲಿದೆ. ಇದರಿಂದ ಸೈನಿಕರಿಗೆ ಉಳಿತಾಯವಾಗಲಿದೆ.
25
ಸೂಪರ್ ೭ ಸೀಟರ್ ಕಾರು
ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ (ಸಿಎಸ್‌ಡಿ) ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆ ಬೆಂಗಳೂರು, ಅಹಮದಾಬಾದ್, ಬಾಗ್ದೋಗ್ರಾ, ದೆಹಲಿ, ಜೈಪುರ, ಕೋಲ್ಕತ್ತಾ, ಮುಂಬೈ ಸೇರಿದಂತೆ ಭಾರತದಲ್ಲಿ 34 ಸಿಎಸ್‌ಡಿ ಮಳಿಗೆಗಳಿವೆ. ಸೈನಿಕರಿಗೆ ಆಹಾರ, ಔಷಧಿ, ಮನೆ ಬಳಕೆ ವಸ್ತುಗಳು, ಕಾರುಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುತ್ತದೆ. ಸಿಎಸ್‌ಡಿಯಲ್ಲಿ ಕಾರು ಖರೀದಿಸಲು ಅರ್ಹರು: ಸೇವೆಯಲ್ಲಿರುವ ಮತ್ತು ನಿವೃತ್ತ ಸೈನಿಕರು, ಸೈನಿಕರ ವಿಧವೆಯರು, ಮಾಜಿ ಸೈನಿಕರು, ರಕ್ಷಣಾ ಇಲಾಖೆ ಸಿಬ್ಬಂದಿ ಇದೀಗ ಮಾರುತಿ ಎರ್ಟಿಗಾ ಕಾರನ್ನು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಲು ಸಾಧ್ಯವಿದೆ.
35
ಜಾಸ್ತಿ ಮೈಲೇಜ್ ಕೊಡೋ 7 ಸೀಟರ್ ಕಾರು
ಮಾರುತಿ ಎರ್ಟಿಗಾ Lxi ಮಾದರಿಯ ಸಿಎಸ್‌ಡಿ ಬೆಲೆ ₹7.89 ಲಕ್ಷ. ಇತರ ಮಳಿಗೆಗಳಲ್ಲಿ ಸಾಮಾನ್ಯ ಬೆಲೆ ₹8.99 ಲಕ್ಷ. ಅಂದರೆ, ₹80,000 ಉಳಿತಾಯ ಮಾಡಲು ಸಾಧ್ಯವಿದೆ. ಎಂಟು ಮಾದರಿಗಳಲ್ಲಿ ₹94,000 ವರೆಗೆ ಉಳಿಸಬಹುದು.
ಮಾರುತಿ ಎರ್ಟಿಗಾದಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಇದೆ. ಇದು103 ಪಿಎಸ್ ಮತ್ತು 137 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಆಯ್ಕೆಯೂ ಲಭ್ಯ. ಪೆಟ್ರೋಲ್ ಮಾದರಿಯ ಮೈಲೇಜ್ ಲೀಟರ್‌ಗೆ 20.15 ಕಿ.ಮೀ, ಸಿಎನ್‌ಜಿ ಮಾದರಿಯ ಮೈಲೇಜ್ ಕೆಜಿಗೆ 26.11 ಕಿ.ಮೀ. ಪ್ಯಾಡಲ್ ಶಿಫ್ಟರ್‌ಗಳು, ಆಟೋ ಹೆಡ್‌ಲೈಟ್‌ಗಳು, ಆಟೋ ಎಸಿ, ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳಿವೆ.
45
ಫ್ಯಾಮಿಲಿ ಜೊತೆ ಟ್ರಿಪ್‌ಗೆ ಬೆಸ್ಟ್ ಕಾರು
7 ಇಂಚಿನ ಬದಲು 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಇದೆ. ವಾಯ್ಸ್ ಕಮಾಂಡ್ ಮತ್ತು ಕನೆಕ್ಟೆಡ್ ಕಾರ್ ತಂತ್ರಜ್ಞಾನವನ್ನು ಬೆಂಬಲಿಸುವ ಸುಜುಕಿಯ ಸ್ಮಾರ್ಟ್‌ಪ್ಲೇ ಪ್ರೊ ತಂತ್ರಜ್ಞಾನವಿದೆ. ಕನೆಕ್ಟೆಡ್ ಕಾರ್ ವೈಶಿಷ್ಟ್ಯಗಳಲ್ಲಿ ವಾಹನ ಟ್ರ್ಯಾಕಿಂಗ್, ಟೋ ಅವೇ ಎಚ್ಚರಿಕೆ ಮತ್ತು ಟ್ರ್ಯಾಕಿಂಗ್, ಜಿಯೋ-ಫೆನ್ಸಿಂಗ್, ಓವರ್-ಸ್ಪೀಡಿಂಗ್ ಎಚ್ಚರಿಕೆ, ರಿಮೋಟ್ ಕಾರ್ಯಗಳು ಸೇರಿವೆ. 360 ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ ಕೂಡ ಇದೆ.
55
ಕಡಿಮೆ ಬೆಲೆ, ಜಾಸ್ತಿ ಮೈಲೇಜ್ ಕಾರು
ಭಾರತದಲ್ಲಿ ಟೊಯೋಟಾ ಇನ್ನೋವಾ, ಮಾರುತಿ XL6, ಕಿಯಾ ಕ್ಯಾರೆನ್ಸ್, ಮಹೀಂದ್ರಾ ಮರಾಝೊ, ಟೊಯೋಟಾ ರೂಮಿಯನ್, ರೆನಾಲ್ಟ್ ಟ್ರೈಬರ್ ಮುಂತಾದ ಮಾದರಿಗಳ ಜೊತೆ ಮಾರುತಿ ಸುಜುಕಿ ಎರ್ಟಿಗಾ ಸ್ಪರ್ಧಿಸುತ್ತದೆ. 7ಸೀಟರ್ ವಿಭಾಗದಲ್ಲಿ ಮಹೀಂದ್ರಾ ಸ್ಕಾರ್ಪಿಯೊ, ಬೊಲೆರೊಗಳಿಗೂ ಸವಾಲು ಹಾಕುತ್ತದೆ.