ಮಹೀಂದ್ರಾ ತಮ್ಮ BE.6 ಎಲೆಕ್ಟ್ರಿಕ್ ಕಾರಿನ ಬ್ಯಾಟ್‌ಮ್ಯಾನ್ ಆವೃತ್ತಿಯನ್ನ ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದರೆ ಕೇವಲ 300 ಕಾರು ಮಾತ್ರ ಲಭ್ಯವಿದೆ. ಈ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಮಹೀಂದ್ರ ಈಗಾಲೇ ಬಿಇ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿ ಭಾರಿ ಯಶಸ್ಸು ಗಳಿಸಿದೆ. ಈ ಯಶಸ್ಸಿನ ಬೆನ್ನಲ್ಲೇ ಇದೀಗ ಮಹೀಂದ್ರ ಮಹೀಂದ್ರ ಬಿಇ 6 ಬ್ಯಾಟ್‌ಮನ್ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ವಿನ್ಯಾಸ, ಬಣ್ಣ, ಫೀಚರ್ಸ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ಕಾರು ಬಿಡುಗಡೆಯಾಗುತ್ತಿದ್ದಂತೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಕಾರು ಬುಕಿಂಗ್ ಮಾಡಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಆದರೆ ಎಲ್ಲರಿಗೂ ಈ ಕಾರು ಬುಕಿಂಗ್ ಸಾಧ್ಯವಾಗಲ್ಲ.
26
ಕೇವಲ 300 ಕಾರು ಉತ್ಪಾದನೆ
BE.6 ಬ್ಯಾಟ್‌ಮ್ಯಾನ್ ಆವೃತ್ತಿ ಕಾರು ಲಿಮಿಟೆಡ್ ಎಡಿಶನ್ ಕಾರಾಗಿದೆ. ಹೀಗಾಗಿ ಕೇವಲ 300 ಕಾರುಗಳು ಮಾತ್ರ ಲಭ್ಯವಿದೆ. ಈ ಕಾರಿನ ಬೆಲೆ 27.79 ಲಕ್ಷ ರೂ. (ಎಕ್ಸ್‌ಶೋರೂಂ). ಆಗಸ್ಟ್ 23 ರಿಂದ 21,000 ರೂ. ಗೆ ಬುಕಿಂಗ್. ಸೆಪ್ಟೆಂಬರ್ 20 ರಿಂದ ಡೆಲಿವರಿ ಆರಂಭಗೊಳ್ಳಲಿದೆ.
36
ಬ್ಯಾಟ್‌ಮ್ಯಾನ್ ಚಿಹ್ನೆಗಳು
ಕಾರಿನಲ್ಲಿ ಚಿನ್ನದ ಬಣ್ಣದ ಬ್ಯಾಟ್‌ಮ್ಯಾನ್ ಲೋಗೋಗಳಿವೆ. ಸಸ್ಪೆನ್ಷನ್ ಸ್ಪ್ರಿಂಗ್ಸ್ ಮತ್ತು ಬ್ರೇಕ್ ಕ್ಯಾಲಿಪರ್‌ಗಳು ಕೂಡ ಚಿನ್ನದ ಬಣ್ಣದಲ್ಲಿವೆ. ಬ್ಯಾಟ್‌ಮ್ಯಾನ್ ಆವೃತ್ತಿಗಾಗಿ ಮಹೀಂದ್ರಾ Warner Bros ಜೊತೆಗೆ ಕೈಜೋಡಿಸಿದೆ. ಕಪ್ಪು ಬಣ್ಣದ ಈ ಕಾರಿನಲ್ಲಿ ಬ್ಯಾಟ್‌ಮ್ಯಾನ್ ಲೋಗೋಗಳಿವೆ.
46
ಕ್ಯಾಬಿನ್ ವಿನ್ಯಾಸ
ಕ್ಯಾಬಿನ್ ಕಪ್ಪು ಮತ್ತು ಚಿನ್ನದ ಥೀಮ್ ಹೊಂದಿದೆ. ಚಿನ್ನದ ಬಣ್ಣದ ಹೊಲಿಗೆ ಮತ್ತು ಲಿಮಿಟೆಡ್ ಎಡಿಷನ್ ಬ್ಯಾಡ್ಜ್ ಇದೆ. ಪ್ರೀಮಿಯಂ ಕ್ಲಾಸ್ ಕಾರು ಇದಾಗಿದೆ. ಅತ್ಯಾಕರ್ಷಕ ಕ್ಯಾಬಿನ್ ಕೂಡ ನೀಡಲಾಗಿದೆ.
56
ಬ್ಯಾಟ್‌ಮ್ಯಾನ್
ಡಾರ್ಕ್ ನೈಟ್ ಲೋಗೋಗಳು ಕಾರಿನ ಒಳಭಾಗದಲ್ಲೂ ಇವೆ. ಬ್ಯಾಟ್‌ಮ್ಯಾನ್ ಥೀಮ್‌ನ ಸ್ಟಾರ್ಟ್-ಅಪ್ ಸೌಂಡ್ ಕೂಡ ಇದೆ. ಕಾರು ಲಾಂಚ್ ಬೆನ್ನಲ್ಲೇ ಬುಕಿಂಗ್ ಮಾಡಲು ಕಾತುರರಾಗಿದ್ದಾರೆ. ಮೊದಲು ಬುಕ್ ಮಾಡುವ 300 ಗ್ರಾಹಕರಿಗೆ ಮಾತ್ರ ಕಾರು ಲಭ್ಯವಿದೆ.
66
BE 6 ಬ್ಯಾಟ್‌ಮ್ಯಾನ್
BE 6 ಬ್ಯಾಟ್‌ಮ್ಯಾನ್ ಆವೃತ್ತಿಯು 79kWh ಬ್ಯಾಟರಿಯನ್ನು ಹೊಂದಿದ್ದು, 682 ಕಿ.ಮೀ. ಮೈಲೇಜ್ ನೀಡುತ್ತದೆ. 286hp ಮತ್ತು 380Nm ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನ ವಿನ್ಯಾಸ, ಮೈಲೇಜ್ ಹಾಗೂ ಪರ್ಫಾಮೆನ್ಸ್ ಕಾರಣದಿಂದ ಅತ್ಯಂತ ಜನಪ್ರಿಯವಾಗಿದೆ.