ನೆಕ್ಸಾ 10 ವರ್ಷದ ಸಂಭ್ರಮ, ಮಾರುತಿ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ

Published : Aug 10, 2025, 05:02 PM ISTUpdated : Aug 10, 2025, 05:06 PM IST

ಮಾರುತಿ ಸುಜುಕಿ ಇದೀಗ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ ಮಾಡಿದೆ. ನೆಕ್ಸಾ ಜೊತೆಗಿನ 10 ವರ್ಷದ ಸಂಭ್ರಮದಲ್ಲಿ ಈ ಕಾರು ಬಿಡುಗಡೆಯಾಗಿದೆ.

PREV
15

ಮಾರುತಿ ಸುಜುಕಿ ಕಾರು ಭಾರತದಲ್ಲಿ ಅತೀ ಬೇಡಿಕೆಯ ಕಾರು. ಕೈಗೆಟುಕುವ ಬೆಲೆ, ಕಡಿಮೆ ನಿರ್ವಹಣಾ ವೆಚ್ಚ, ಉತ್ತಮ ಮೈಲೇಜ್ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಮಾರುಕಟ್ಟೆ ಹೊಂದಿದೆ. ಇದೀಗ ಮಾರುತಿ ಸುಜುಕಿ ಅಧಿಕೃತ ಡೀಲರ್ ನೆಕ್ಸಾ 10 ವರ್ಷದ ಸಂಭ್ರಮದಲ್ಲಿದೆ. ಈ ಸಂಭ್ರಮದಲ್ಲಿ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ ಫ್ಯಾಂಟಮ್ BLAQ ಕಾರು ಬಿಡುಗಡೆ ಮಾಡಿದೆ. ಸ್ಪೆಷಲ್ ಎಡಿಶನ್ ಕಾರು ಇದಾಗಿದ್ದು ಹಲವು ವಿಶೇಷತೆ ಹೊಂದಿದೆ.

25

ಬ್ಲಾಕ್ ಕಲರ್, ಸ್ಟ್ರಾಂಗ್ ಹೈಬ್ರಿಡ್ ಆಲ್ಫಾ ವೇರಿಯೆಂಟ್ ಜೊತೆಗೆ ಗೋಲ್ಡ್ ಆ್ಯಸೆಂಟ್ ಹೊಂದಿರುವ ಈ ಕಾರು ಅತ್ಯಾಕರ್ಷಕ ಲುಕ್ ಹೊಂದಿದೆ. ಎಸ್‌ಯುವಿ ಕಾರು ಅತ್ಯುತ್ತಮ ಪರ್ಫಾಮೆನ್ಸ್ ಹಾಗೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಗೊಂಡಿದೆ. ಹಲವು ಹೊಸತನಗಳು ಈ ಕಾರಿನಲ್ಲಿದೆ. 22.86 ಸಿಎಂ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈಯರ್‌ಲೆಸ್ ಆ್ಯಂಡ್ರಾಯ್ಡ್ ಅಟೋ, ಹಾಗೂ ಆ್ಯಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್ ಇದರಲ್ಲಿದೆ.

35

ಸುರಕ್ಷತಾ ಫೀಚರ್ಸ್‌ಗೆ ಹೆಚ್ಚಿನ ಗಮನಕೇಂದ್ರೀಕರಿಸಿರುವ ಮಾರುತಿ ಸುಜುಕಿ, 360 ಡಿಗ್ರಿ ಕ್ಯಾಮೆರಾ, ಹೆಡ್ ಅಪ್ ಡಿಸ್‌ಪ್ಲೇ, ವೈಯರ್‌ಲೆಸ್ ಚಾರ್ಜಿಂಗ್ ಡಾಕ್, 6 ಏರ್ ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ, ಎಬಿಎಸ್ ಬ್ರೇಕ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪ್ರಾರ್ಕಿಂಗ್ ಸೆನ್ಸಾರ್, 3 ಪಾಯಿಂಟ್ಸ್ ಸೀಟ್ ಬೆಲ್ಟ್ ಹಾಗೂ ರಿಮೆಂಡರ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ನೀಡಲಾಗಿದೆ.

45

ಮಾರುತು ಸುಜುಕಿ ಗ್ರ್ಯಾಂಡ್ ವಿಟಾರ ಕಾರು ಭಾರಿ ಜನಪ್ರಿಯತೆ ಪಡೆದುಕೊಂಡಿದೆ.ಉತ್ತಮ ಸ್ಥಳವಕಾಶ, ಫೀಚರ್ಸ್, ಪರ್ಪಾಮೆನ್ಸ್ ಕಾರಣದಿಂದ ಅತೀ ಕಡಿಮೆ ಅವಧಿಯಲ್ಲಿ 3 ಲಕ್ಷ ಕಾರುಗಳು ಮಾರಾಟಗೊಂಡಿದೆ. 3 ಲಕ್ಷ ಕಾರು ಮಾರಾಟ ಕೇವಲ 32 ತಿಂಗಳಲ್ಲಿ ಆಗಿದೆ. ಇದೀಗ ಮಾರುತಿ ಗ್ರ್ಯಾಂಡ್ ವಿಟಾರ ಫ್ಯಾಂಟಮ್ ಬ್ಲಾಕ್ ಎಡಿಶನ್ ಕಾರು ಗ್ರಾಹಕರನ್ನು ಸೆಳೆಯಲಿದೆ ಎಂದು ಮಾರುತಿ ಸುಜುಕಿ ಮಾರ್ಕೆಟಿಂಗ್ ಸೇಲ್ಸ್ ಅಧಿಕಾರಿ ಪ್ರಥೋ ಬ್ಯಾನರ್ಜಿ ಹೇಳಿದ್ದಾರೆ.

55

2015ರಲ್ಲಿ ಮಾರುತಿ ಸುಜುಕಿ ಅಧಿಕೃತ ಡೀಲರ್ ಆಗಿ ನೆಕ್ಸಾ ಆರಂಭಗೊಂಡಿತ್ತು. ಕಳೆದ 10 ವರ್ಷದಿಂದ ನೆಕ್ಸಾ ಡೀಲರ್ ಮೂಲಕ ಲಕ್ಷ ಲಕ್ಷ ಮಾರುತಿ ಕಾರುಗಳು ಮಾರಾಟಗೊಂಡಿದೆ. 10ನೇ ವರ್ಷದ ಸಂಭ್ರಮದಲ್ಲಿ ಗ್ರ್ಯಾಂಡ್ ವಿಟಾರ ಸ್ಪೆಷಲ್ ಎಡಿಶನ್ ಮೂಲಕ ಮಾರುತಿ ಮತ್ತೆ ಭಾರಿ ಸಂಚಲನ ಸೃಷ್ಟಿಸಿದೆ.

Read more Photos on
click me!

Recommended Stories