ಚಿತ್ರದಲ್ಲಿ ಬಳಸಿದ ಹಳೇ ಟಾಟಾ ಸುಮೋ ಕಾರು ಖರೀದಿಸಿದ ಸೌತ್ ಮೆಘಾಸ್ಟಾರ್!

Published : Oct 03, 2023, 07:22 PM IST

ದಕ್ಷಿಣ ಭಾರತದ ಚಿತ್ರಗಳಲ್ಲಿ ಟಾಟಾ ಸುಮೋ ಕಾರುಗಳ ಬಳಕೆ ಹೆಚ್ಚು. ಪ್ರಮುಖವಾಗಿ ತಮಿಳು ಹಾಗೂ ತೆಲುಗು ಚಿತ್ರದಲ್ಲಿ ಹೀರೋ- ವಿಲನ್ ಜೊತೆಗಿನ ಹೊಡೆದಾಟ, ಚೇಸಿಂಗ್ ವೇಳೆ ಟಾಟಾ ಸುಮೋ ಸಾಮಾನ್ಯ. ಇದೀಗ ಸೌತ್ ಮೆಘಾಸ್ಟಾರ್ ತಮ್ಮ ಚಿತ್ರದಲ್ಲಿ ಬಳಸಿದ ಹಳೇ ಟಾಟಾ ಸುಮೋ ಕಾರನ್ನೇ ಖರೀದಿಸಿ ಗಮನಸೆಳೆದಿದ್ದಾರೆ.

PREV
17
ಚಿತ್ರದಲ್ಲಿ ಬಳಸಿದ ಹಳೇ ಟಾಟಾ ಸುಮೋ ಕಾರು ಖರೀದಿಸಿದ ಸೌತ್ ಮೆಘಾಸ್ಟಾರ್!

ಸೌತ್ ಮೆಘಾಸ್ಟಾರ್, ಮಲೆಯಾಳಂ ಸಿನಿಮಾದ ದಿಗ್ಗಜ ಮಮ್ಮೂಟಿ ಅಭಿನಯ ಕಣ್ಣೂರ್ ಸ್ಕ್ವಾಡ್ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಮಮ್ಮೂಟ್ಟಿ ಬಳಸಿದ ಹಳೇ ಟಾಟಾ ಸುಮೋ ಕಾರು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

27

ಮಮ್ಮೂಟ್ಟಿ ಸಿನಿಮಾ ಜೊತೆಗೆ ಆಟೋಮೊಬೈಲ್‌, ತಂತ್ರಜ್ಞಾನದಲ್ಲೂ ಆಸಕ್ತಿ ಹೊಂದಿದ್ದಾರೆ. ಮಮ್ಮೂಟ್ಟಿ ಗ್ಯಾರೇಜ್‌ನಲ್ಲಿ ಹಲವು ಐಷಾರಾಮಿ ಹಾಗೂ ವಿಂಟೇಜ್ ಕಾರುಗಳಿವೆ. ಈ ಸಾಲಿಗೆ ಟಾಟಾ ಸುಮೋ ಸೇರಿಕೊಂಡಿದೆ.

37

ಕಣ್ಣೂರು ಸ್ಕ್ವಾಡ್ ಚಿತ್ರದಲ್ಲಿ ನಾಯಕ ನಟ ಮಮ್ಮೂಟಿ ಹಳೇ ಟಾಟಾ ಸುಮೋ ಕಾರು ಬಳಸಿದ್ದಾರೆ. ಚಿತ್ರದಲ್ಲಿ ಈ ಕಾರು ಕೂಡ ನಟನ ಪಾತ್ರಕ್ಕೆ ಜೀವ ತುಂಬಿದೆ. ಇದೇ ಕಾರನ್ನು ಮಮ್ಮೂಟ್ಟಿ ಖರೀದಿಸಿದ್ದಾರೆ.

47

ಮಮ್ಮೂಟ್ಟಿಗೆ ಕಾರು ಕ್ರೇಜ್ ತುಸು ಹೆಚ್ಚೇ ಇದೆ. ಮಮ್ಮೂಟಿ ಪುತ್ರ ದುಲ್ಕರ್ ಸಲ್ಮಾನ್ ಬಳಿ ಕೂಡ ಹಲವು ಐಷಾರಾಮಿ ಕಾರುಗಳಿವೆ. ವಿಂಟೇಜ್ ಕಾರು ದುಲ್ಕರ್ ಅಚ್ಚು ಮೆಚ್ಚು.

57

2019ರ ವರೆಗೆ ಟಾಟಾ ಸುಮೋ ಕಾರು ಭಾರತದಲ್ಲಿ ಉತ್ಪಾದನೆಯಾಗಿದೆ. 2019ರಿಂದ ಈ ಕಾರು ಸ್ಥಗಿತಗೊಂಡಿದೆ. ಸದ್ಯ ಟಾಟಾ 2024ರಲ್ಲಿ ಹೊಸ ಅವತಾರದಲ್ಲಿ ಟಾಟಾ ಸುಮೋ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.

67

ಬರೋಬ್ಬರಿ 25 ವರ್ಷಗಳ ಕಾಲ ಟಾಟಾ ಸುಮೋ ಕಾರು ಭಾರತದಲ್ಲಿ ಅಧಿಪತ್ಯ ಸಾಧಿಸಿತ್ತು. 1990ರ ದಶಕದಲ್ಲಿ ಬಿಡುಗಡೆಯಾದ ಟಾಟಾ ಸುಮೋ ಹಲವು ಅಪ್‌ಡೇಟ್ ಕಂಡಿದೆ.

77

90ರ ದಶಕದಲ್ಲಿ ಬಿಡುಗಡೆಯಾದ ಮೂರೇ ವರ್ಷಕ್ಕೆ 1 ಲಕ್ಷಕ್ಕೂ ಅಧಿಕ ಟಾಟಾ ಸುಮೋ ಕಾರುಗಳು ಮಾರಾಟವಾಗುವ ಮೂಲಕ ದಾಖಲೆ ಬರೆದಿತ್ತು. ಇದೀಗ ಈ ಕಾರು ಇತಿಹಾಸ ಪುಟ ಸೇರಿದೆ.

Read more Photos on
click me!

Recommended Stories