15 ಲಕ್ಷ ರೂಪಾಯಿ ಒಳಗೆ ಭಾರತದಲ್ಲಿದೆ ಪವರ್‌ಫುಲ್ ಎಂಜಿನ್ SUV ಕಾರು, ಇಲ್ಲಿದೆ ಲಿಸ್ಟ್!

First Published | Jul 31, 2023, 3:52 PM IST

ಭಾರತದಲ್ಲಿ SUV ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ. ಅತ್ಯಂತ ಕಡಿಮೆ ಬೆಲೆಯಿಂದ ಹಿಡಿದು, ದುಬಾರಿ ಬೆಲೆಯ SUV ಕಾರುಗಳು ಭಾರತದಲ್ಲಿ ಲಭ್ಯವಿದೆ. ಬಲಿಷ್ಠ ಎಂಜಿನ್, ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಲೋಡೆಡ್ ಫೀಚರ್ಸ್ ಹೊಂದಿರುವ ಕಾರುಗಳು 15 ಲಕ್ಷ ರೂಪಾಯಿ ಒಳಗೆ ಲಭ್ಯವಿದೆ. ಭಾರತದಲ್ಲಿ 15 ಲಕ್ಷ ರೂಪಾಯಿ ಒಳಗೆಡೆ ಲಭ್ಯವಿರುವ SUV ಕಾರುಗಳ ಲಿಸ್ಟ್ ಇಲ್ಲಿದೆ.

ಎಲ್ಲಾ ಆಟೋಮೊಬೈಲ್ ಕಾರು ಕಂಪನಿಗಳು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಿ ಭಾರದಲ್ಲಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. 5.99 ಲಕ್ಷ ರೂಪಾಯಿಂದ ಆರಂಭಗೊಳ್ಳುವ SUV ಕಾರುಗಳು ಕೋಟಿ ಕೋಟಿ ರೂಪಾಯಿ ಐಷಾರಾಮಿಗಳು ಕಾರುಗಳು ಭಾರತದಲ್ಲಿ ಅತ್ಯಧಿಕವಾಗಿ ಮಾರಾಟವಾಗುತ್ತಿದೆ.

ಇತ್ತೀಚೆಗೆ ಬಿಡುಗಡೆಯಾಗಿರು ಹೊಚ್ಚ ಹೊಸ ಮಹೀಂದ್ರ ಸ್ಕಾರ್ಪಿಯೋ ಎನ್ ಕಾರು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. 2.0 ಲೀಟರ್ ಟರ್ಬೆ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 200 ಹೆಚ್‌ಪಿ ಪವರ್ ಜನರೇಟರ್ ಹೊಂದಿದೆ. ಸ್ಕಾರ್ಪಿಯೋ ಎನ್ ಕಾರಿನ ಆರಂಭಿಕ ಬೆಲೆ 13.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

Latest Videos


7 ಸೀಟರ್ ಕಾರುಗಳ ಪೈಕಿ ಮಹೀಂದ್ರ xuv 700 ಕಾರು ಎಲ್ಲರನ್ನು ಮೋಡಿ ಮಾಡುತ್ತಿದೆ. 2.0 ಲೀಟರ್ ಟರ್ಬೆ ಪೆಟ್ರೋಲ್ ಎಂಜಿನ್ ಹೊಂದಿರುವ ನೂತನ xuv 700 ಕಾರು 187 ಬಿಹೆಚ್‌ಪಿ ಪವರ್ ಹೊಂದಿದೆ. ನೂತನ ಕಾರಿನ ಬೆಲೆ 14.01 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.
 

ಕಿಯಾ ಮೋಟಾರ್ಸ್ ಕಾರುಗಳ ಪೈಕಿ ಕಿಯಾ ಸೆಲ್ಟೋಸ್ ಅತ್ಯಾಕರ್ಷಕ ವಿನ್ಯಾಸ, ಪರ್ಫಾಮೆನ್ಸ್, ಟೆಕ್ ಫೀಚರ್ಸ್‌ಗಳಿಂದ ಗಮನಸೆಳೆದಿದೆ. 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 158 ಹೆಚ್‌ಪಿ ಪವರ್ ಹಾಗೂ 235 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಇದರ ಆರಂಭಿಕ ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ.

ಹ್ಯುಂಡೈ ಅಲ್ಕಜರ್ ಕಾರು ಹೆಚ್ಚು ಸ್ಥಳಾವಕಾಶ, ಆರಾಮಾದಾಯಕ ಪ್ರಯಾಣ ಜೊತೆಗೆ ಅತ್ಯಾಧುನಿಕ್ ಟೆಕ್ ಫೀಚರ್ಸ್ ಹೊಂದಿದೆ. 1.5 ಲೀಟರ್ ಟರ್ಬೆ ಪೆಟ್ರೋಲ್ ಎಂಜಿನ್ ಹೊಂದಿದ್ದು, 158 ಬಿಹೆಚ್‌ಪಿ ಪವರ್ ಹೊಂದಿದೆ. ಬೆಲೆ 15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಮಹೀಂದ್ರ ಕಂಪನಿಯ ಕಾರುಗಳ ಪೈಕಿ ಮಹಿಂದ್ರ ಥಾರ್ ಕಾರಿಗೆ ಭಾರಿ ಫಾಲೋವರ್ಸ್ ಇದ್ದಾರೆ. ಎಲ್ಲಾ ವಯೋಮಾನವದರಿಗೆ ಸೂಕ್ತವಾಗುವ ಈ ಕಾರು ಯಾವುದೇ ರಸ್ತೆಗೂ ಸೈ. 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿರುವ ಈ ಕಾರು 150 ಹೆಚ್‌ಪಿ ಪವರ್ ಹಾಗೂ 320 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಬೆಲೆ 13.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

click me!