ಲ್ಯಾಂಬೋರ್ಗಿನಿ ಅತ್ಯಂತ ದುಬಾರಿ ಕಾರು Revuelto ಹೈಬ್ರಿಡ್ ಸೂಪರ್ ಕಾರು ಬಿಡುಗಡೆ ಮಾಡಿದೆ. V12 ಎಂಜಿನ್ ಹೊಂದಿರುವ ಈ ಕಾರಿನ ಆರಂಬಿಕ ಬೆಲೆ 8.89 ಕೋಟಿ ರೂಪಾಯಿ(ಎಕ್ಸ್ ಶೋ ರೂಂ)
ಈ ಸೂಪರ್ ಕಾರಿನ ಪವರ್ ನೋಡಿದರೆ ಗಾಬರಿಯಾಗುವುದು ಖಚಿತ. ಕಾರಣ ಬರೋಬ್ಬರಿ 1,001 HP ಪವರ್ ಹಾಗೂ 727 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
0-100 ಕಿ.ಮೀ ವೇಗವನ್ನು ಕೇವಲ 2.5 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ. ಈ ಕಾರಿನ ಗರಿಷ್ಠ ವೇಗ ಗಂಟಗೆ 350 ಕಿಲೋಮೀಟರ್. ಮತ್ತೊಂದು ವಿಶೇಷ ಅಂದರೆ ಡ್ರೈವ್, ಸ್ಪೋರ್ಟ್ಸ್ ಸೇರಿದಂತೆ 13 ಬಗೆಯ ಡ್ರೈವ್ ಮೊಡ್‌ಗಳಿವೆ.
2022ರಲ್ಲಿ ಲ್ಯಾಂಬೋರ್ಗಿನಿ ಅವೆಂಟಡೋರ್ ಕಾರು ಉತ್ಪಾದನೆ ಸ್ಥಗಿತಗೊಳಿಸಿತ್ತು. ಈ ಕಾರಿನ ಬದಲು ಇದೀಗ ಲ್ಯಾಂಬೋರ್ಗಿನಿ Revuelto ಹೈಬ್ರಿಡ್ ಸೂಪರ್ ಕಾರು ಬಿಡುಗಡೆ ಮಾಡಿದೆ.
ವೈ ಶೇಪ್ LED DRLs ಹಾಗೂ ಟೇಲ್ ಲೈಟ್ಸ್, ಕೂಪ್ ರೀತಿ ರೂಫ್‌ಲೈನ್, ಇನ್ನು ಕಾಕ್‌ಪಿಟ್ ಶೈಲಿಯ ಕ್ಯಾಬಿನ್ ಈ ಲ್ಯಾಂಬೋರ್ಗಿನಿ Revuelto ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಫುಲ್ಲಿ ಡಿಜಿಟಲ್ ಇನ್‌ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಡ್ರೈವರ್ ಭಾಗದಿಂದ ಪ್ಯಾಸೆಂಜರ್ ಭಾಗದವರೆಗೆ ಸಂಪೂರ್ಣ ಡಿಜಿಟಲ್ ಡಿಸ್‌ಪ್ಲೇ ಬಳಕೆ ಮಾಡಲಾಗಿದೆ.
ಲ್ಯಾಂಬೋರ್ಗಿನಿ Revuelto ಕಾರಿನ ಆನ್‌ರೋಡ್ ಬೆಲೆ 10 ರಿಂದ 12 ಕೋಟಿ ರೂಪಾಯಿ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.
ಭಾರತದಲ್ಲಿ ಅತೀ ಹೆಚ್ಚು ಲ್ಯಾಂಬೋರ್ಗಿನಿ ಕಾರು ಮಾರಾಟವಾಗುವ ನಗರದ ಪೈಕಿ ಬೆಂಗಳೂರು ಮುಂಚೂಣಿಯಲ್ಲಿದೆ. ಇದೀಗ ಲ್ಯಾಂಬೋರ್ಗಿನಿ Revuelto ಕಾರಿಗೆ ಬೆಂಗಳೂರಿನಲ್ಲಿ ಬೇಡಿಕೆ ವ್ಯಕ್ತವಾಗುತ್ತಿದೆ.