Kia Seltos ಸದ್ದು ಮಾಡುತ್ತಿದ್ದರೆ ಮಾರಾಟದಲ್ಲಿ ಕಿಂಗ್ ಬೇರೆಯೇ! ಮೊದಲ ಸ್ಥಾನ ಪಡೆದ ಕಾರು ಯಾವುದು?

Published : Nov 14, 2026, 11:36 AM IST

Kia Seltos 2026: ಐಷಾರಾಮಿ ಕಾರುಗಳಿಗಿರುವ ಫೀಚರ್ಸ್ ಸಾಮಾನ್ಯ ಕಾರುಗಳಿಗೆ ಬಂದ ನಂತರ ಭಾರತದ ಮಾರುಕಟ್ಟೆಯಲ್ಲೀಗ ಮಧ್ಯಮ ಗ್ರಾಮದ SUV ಕಾರುಗಳ ನಡುವೆ ಸ್ಪರ್ಧೆ ತೀವ್ರವಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಏಳು ಲಕ್ಷ ಕಾರುಗಳ ಮಾರಾಟದ ಮೂಲಕ ಹೊಸ ದಾಖಲೆಯನ್ನೇ ಬರೆದಿದೆ.

PREV
15
Kia Seltos 2026 ಕಾರು ಮಾರಾಟದಲ್ಲಿ ದಾಖಲೆ!

Kia Seltos 2026: ಐಷಾರಾಮಿ ಕಾರುಗಳಿಗಿರುವ ಫೀಚರ್ಸ್ ಸಾಮಾನ್ಯ ಕಾರುಗಳಿಗೆ ಬಂದ ನಂತರ ಭಾರತದ ಮಾರುಕಟ್ಟೆಯಲ್ಲೀಗ ಮಧ್ಯಮ ಗ್ರಾಮದ SUV ಕಾರುಗಳ ನಡುವೆ ಸ್ಪರ್ಧೆ ತೀವ್ರವಾಗಿದೆ. ಇಂಥ ತೀವ್ರ ಸ್ಪರ್ಧಾತ್ಮಕ ನಡುವೆಯು ಒಂದು ಕಾರಿನ ಕ್ರೇಜ್ ಮಾತ್ರ ಏರುತ್ತಲೇ ಇದೆ. ದೇಶಿಯ ಮಾರುಕಟ್ಟೆಯಲ್ಲಿ ಏಳು ಲಕ್ಷ ಕಾರುಗಳ ಮಾರಾಟದ ಮೂಲಕ ಹೊಸ ದಾಖಲೆಯನ್ನೇ ಬರೆದಿದೆ. ಯಾವುದು ಅದು ಎಸ್‌ಯುವಿ ಕಾರು? ಇಷ್ಟೊಂದು ಜನಪ್ರಿಯವಾಗಲು ಕಾರಣವೇನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

25
Kia Seltos 2026 ಏಳು ಲಕ್ಷ ಕಾರುಗಳ ಮಾರಾಟದ ಮೈಲಿಗಲ್ಲು!

ಭಾರತೀಯ ಮಾರುಕಟ್ಟೆ ಪ್ರವೇಶಿಸಿದಾಗಿನಿಂದೂ ಜನಪ್ರಿಯವಾಗಿರುವ ಕಿಯಾ(KIA) ಕಾರು ಇದೀಗ ಮತ್ತೊಂದು ಮೈಲಿಗಲ್ಲು ಮುಟ್ಟಿದೆ. ಅಂದರೆ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಮಾರಾಟವು ಬರೋಬ್ಬರಿ 7 ಲಕ್ಷ ಯುನಿಟ್‌ಗಳನ್ನು ದಾಟಿ ಮುನ್ನುಗ್ಗುತ್ತಿದೆ. 2019 ರಲ್ಲಿ ಮೊದಲು ಬಿಡುಗಡೆಯಾದ ಈ SUV ಕಾರು ಭಾರತದಲ್ಲಿ ಕಿಯಾ ಬ್ರ್ಯಾಂಡ್‌ಗೆ ವಿಶೇಷ ಮನ್ನಣೆಯನ್ನು ತಂದುಕೊಟ್ಟಿತು. ಇತ್ತೀಚೆಗೆ ಬಿಡುಗಡೆಯಾದ ಎರಡನೇ ತಲೆಮಾರಿನ ಮಾದರಿಯ ಕಾರು ಕೂಡ ಉತ್ತಮ ಪ್ರತಿಕ್ರಿಯೆ ಪಡೆಯಿತು. ಇದೀಗ ಕಿಯಾ ಸೆಲ್ಟೋಸ್ ಎಸ್‌ಯುವಿ ಕಾರು ಹೊಸದೊಂದು ದಾಖಲೆ ನಿರ್ಮಿಸಿದೆ.

35
Kia Seltos 2026 ಏಳು ವರ್ಷಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಕಾರು ಮಾರಾಟ!

ಸೆಲ್ಟೋಸ್ ಭಾರತದಲ್ಲಿ ಎಷ್ಟು ಜನಪ್ರಿಯವಾಗಿದೆ ಎಂದರೆ ಏಳು ವರ್ಷಗಳಲ್ಲಿ ಏಳು ಲಕ್ಷಕ್ಕೂ ಅಧಿಕ ಕಾರುಗಳು ಮಾರಾಟವಾಗಿವೆ. ಕಿಯಾ ತಯಾರಿಸಿದ ಮೊದಲ ಎಸ್‌ಯುವಿ ಕಾರನ್ನು ಆಗಸ್ಟ್ 22, 2019 ರಂದು ಬಿಡುಗಡೆ ಮಾಡಲಾಯಿತು. ಅಂದಿನಿಂದ ಕಳೆದ ಅಕ್ಟೋಬರ್ 2026 ರವರೆಗೆ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 7,04,829 ಯುನಿಟ್‌ಗಳು ಮಾರಾಟವಾಗಿವೆ. ಅದೂ ಭಾರತದಲ್ಲಿ ಕಿಯಾ ಮಾರಾಟ ಮಾಡಿದ ಒಟ್ಟು 16.8 ಲಕ್ಷ ಕಾರುಗಳ ಪೈಕಿ ಸೆಲ್ಟೋಸ್ ಸುಮಾರು 36 ಪ್ರತಿಶತದಷ್ಟಿದೆ!

ಈ ಕಾರು ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ರಫ್ತುಗಳಲ್ಲಿಯೂ ಇದರದ್ದೇ ಪ್ರಾಬಲ್ಯ. ಅಂದರೆ ಇಲ್ಲಿಯವರೆಗೆ 1.6 ಲಕ್ಷಕ್ಕೂ ಹೆಚ್ಚು ಸೆಲ್ಟೋಸ್ ಕಾರುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. ದೇಶಿಯ ಮಾರುಕಟ್ಟೆಯಲ್ಲೂ ದಾಖಲೆ ಪ್ರಮಾಣದ ಮಾರಾಟ, ವಿದೇಶಿ ಮಾರುಕಟ್ಟೆಗೆ ರಫ್ಯು ಮಾಡಿದ ಕಾರುಗಳಲ್ಲೂ ಇದರದ್ದೇ ಪ್ರಾಬಲ್ಯ.

45
ಕಿಯಾ ಸೆಲ್ಟೋಸ್ (Kia Seltos) ಕಾರಿನ ಬೆಲೆ ಎಷ್ಟು?

ಕಿಯಾ ಸೆಲ್ಟೋಸ್ ಕಾರಿನ ಬೆಲೆ 11 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ ಅಂದರೆ ಇದು ಮಧ್ಯಮ ವರ್ಗದ ಜನರ ಬಜೆಟ್ ಒಳಗೆ ಖರೀದಿಸಬಹುದಾದ ಎಸ್‌ಯುವಿ ಕಾರು. ದೇಶಿಯ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಚಳದಿಂದಾಗಿ ಇದೀಗ ಎರಡನೇ ತಲೆಮಾರಿನ ಮಾದರಿಯ ಸೆಲ್ಟೋಸ್ ಮಾರಾಟಕ್ಕೆ ಹೊಸ ಉತ್ತೇಜನ ನೀಡಿದಂತಾಗಿದೆ. ಈ ವರ್ಷದ ಜನೆವರಿ ತಿಂಗಳಲ್ಲಿ ಹೊಸ ಲುಕ್‌ನೊಂದಿಗೆ ಮಾರುಕಟ್ಟೆಗೆ ಬಂದ ಈ ಕಾರು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. 2026 ಜನವೆರಿಯಿಂದ ಆಕ್ಟೋಬರ್‌ವರೆಗೆ ಒಂದೇ ವರ್ಷದಲ್ಲಿ ಒಟ್ಟು 1,13,078 ಗಳಷ್ಟು ಮಾರಾಟವಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ನೋಂದಾಯಿಸಲಾದ 60,526 ಯುನಿಟ್‌ಗಳಿಗೆ ಹೋಲಿಸಿದರೆ ಮಾರಾಟವು ಶೇಕಡಾ 87 ರಷ್ಟು ಹೆಚ್ಚು.

55
ಅತಿಹೆಚ್ಚು ಕಾರುಗಳ ಮಾರಾಟ, ಮೊದಲ ಸ್ಥಾಣ ಯಾವುದು?

ಇನ್ನೊಂದು ಅಚ್ಚರಿಪಡಿಸುವ ಸಂಗತಿ ಎಂದರೆ ಫೆಬ್ರುವರಿ ಯಿಂದ ಅಕ್ಟೋಬರ್ ವರೆಗಿನ ಒಂಭತ್ತು ತಿಂಗಳಲ್ಲಿ ಬರೋಬ್ಬರಿ 1,02,439 ಕಾರುಗಳು ಮಾರಾಟವಾಗಿವೆ. ಅಂದರೆ ಜನರು ಪ್ರತಿ ತಿಂಗಳು ಸರಾಸರಿ 11,000 ಕ್ಕೂ ಹೆಚ್ಚು ವಾಹನಗಳನ್ನು ಖರೀದಿಸಿದ್ದಾರೆಂದರ್ಥ! ಆದರೆ ಜನವರಿಯಲ್ಲಿ ಮಾತ್ರ ತುಸು ಕಡಿಮೆಯಾಗಿದೆ. ಸುಮಾರು 10,639 ಯುನಿಟ್‌ಗಳು ಮಾರಾಟವಾಗಿದ್ದವು.

ಅನಂತರದಲ್ಲಿ ಜೂನ್ ತಿಂಗಳು ಹೊರತುಪಡಿಸಿದರೆ ಪ್ರತಿ ತಿಂಗಳು 10000 ಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ. ಅದರಲ್ಲೂ ಅಕ್ಟೋಬರ್ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಈ ತಿಂಗಳಲ್ಲಿ ಒಟ್ಟು 33,462 ವಾಹನಗಳನ್ನು ಮಾರಾಟವಾಗಿವೆ ಎಂದರೆ ಹುಬ್ಬೇರಿಸುವಂತದ್ದೇ. ಇದು ಭಾರತದಲ್ಲಿ ಒಂದೇ ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕಿಯಾ ಮಾರಾಟ ಮಾಡುವ ಮೂಲಕ ಎಳು ಲಕ್ಷ ಕಾರುಗಳ ಮಾರಾಟ ಮಾಡಿದ ಹೊಸ ದಾಖಲೆ ನಿರ್ಮಿಸಿದೆ.

ಇನ್ನು ಎರಡನೇ ಅತಿ ಹೆಚ್ಚು ಮಾರಾಟವಾಗುವ ಕಾರು ಎಂದರೆ ಸೋನೆಟ್ ಆದರೆ ಇದು ದೇಶೀಯ ಮಾರುಕಟ್ಟೆಯಲ್ಲಿ ಸೆಲ್ಟೋಸ್‌ಗಿಂತ ಸುಮಾರು 1.1 ಲಕ್ಷ ಯುನಿಟ್‌ಗಳಷ್ಟು ಕಡಿಮೆ. ಕ್ಯಾರೆನ್ಸ್ ಸರಣಿಯು ಇಲ್ಲಿಯವರೆಗೆ 3,31,186 ಕಾರುಗಳ ಮಾರಾಟ ಮಾಡಿದೆ.

ಸ್ಪರ್ಧೆ ತೀವ್ರವಾದ್ರೂ ಜನಪ್ರಿಯತೆ ಗಟ್ಟಿಯಾಗಿದೆ

ಮಧ್ಯಮ ಗಾತ್ರದ SUV ಕಾರುಗಳು ಅದರಲ್ಲೂ ಎಲೆಕ್ಟ್ರಿಕ್ ಕಾರುಗಳು, ಹೈಬ್ರಿಡ್ ಕಾರುಗಳು ಸೇರಿದಮತೆ 20 ಕ್ಕೂ ಹೆಚ್ಚು ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿಗಿಳಿದಿವೆ. ಇಂಥ ಸ್ಪರ್ಧಾತ್ಮಕ ಮಾರುಕಟ್ಟೇಯಲ್ಲೂ ಸೆಲ್ಟೋಸ್ ತನ್ನದೇ ಆದ ಹಿಡಿತವನ್ನು ಕಾಯ್ದುಕೊಂಡಿದೆ. ಜನವರಿ ಮತ್ತು ಅಕ್ಟೋಬರ್ 2026 ರ ನಡುವೆ 81,090 ಕಾರುಗಳ ಮಾರಾಟ ಮಾಡುವ ಮೂಲಕ ಮಾಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಹೀಂದ್ರಾ ಸ್ಕಾರ್ಪಿಯೋ 1,12,841 ಯುನಿಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹುಂಡೈ ಕ್ರೆಟಾ 1,07,682 ಯುನಿಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಮಾರುತಿ ವಿಕ್ಟೋರಿಸ್ 88,804 ಯುನಿಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

Read more Photos on
click me!

Recommended Stories