ಟಿಯಾಗೋದಿಂದ ನೆಕ್ಸಾನ್‌ವರೆಗೆ ಟಾಟಾ ಕಾರುಗಳ ಮೇಲೆ ₹3.35 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್; ಯಾವ ಕಾರಿಗೆ ಎಷ್ಟು ಆಫರ್?

Published : Oct 22, 2026, 06:51 PM IST

ಹಬ್ಬದ ಸೀಸನ್ ಶುರುವಾಗಿದೆ. ಇದೇ ಖುಷಿಯಲ್ಲಿ ಪ್ರಮುಖ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ತನ್ನ ಕಾರುಗಳ ಮೇಲೆ ಬರೋಬ್ಬರಿ 3.35 ಲಕ್ಷ ರೂ.ವರೆಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಯಾವ ಮಾಡೆಲ್ ಕಾರಿಗೆ ಎಷ್ಟು ರಿಯಾಯಿತಿ ಸಿಗುತ್ತಿದೆ ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

PREV
16
ಹಬ್ಬದ ಸೀಸನ್ ಟಾಟಾ ಕಾರು ಖರೀದಿಸುವವರಿಗೆ ಗುಡ್ ನ್ಯೂಸ್

ಹಬ್ಬದ ಸೀಸನ್‌ನಲ್ಲಿ ಹೊಸ ಕಾರು ಖರೀದಿಸುವ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್. ಟಾಟಾ ಮೋಟಾರ್ಸ್ ತನ್ನ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಈ ಆಫರ್ ಬಳಸಿಕೊಂಡು ಗ್ರಾಹಕರು ಸಾವಿರದಿಂದ ಲಕ್ಷಾಂತರ ರೂಪಾಯಿವರೆಗೆ ಹಣ ಉಳಿಸಬಹುದು.

26
ಟಾಟಾ ಕಾರು ಗ್ರಾಹಕರಿಗೆ ಗರಿಷ್ಠ 3.35 ಲಕ್ಷದವರೆಗೆ ಡಿಸ್ಕೌಂಟ್

ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮೇಲೂ ಈ ಡಿಸ್ಕೌಂಟ್ ಲಭ್ಯವಿದೆ. ಟಿಯಾಗೋ, ಟಿಗೋರ್, ಆಲ್ಟ್ರೋಜ್‌ನಿಂದ ಹಿಡಿದು ನೆಕ್ಸಾನ್, ಪಂಚ್ ಇವಿ, ಕರ್ವ್ ಇವಿ, ಹ್ಯಾರಿಯರ್ ಇವಿವರೆಗೆ ಹಲವು ಮಾಡೆಲ್‌ಗಳು ಈ ಲಿಸ್ಟ್‌ನಲ್ಲಿವೆ. ಕಾರಿನ ಮಾಡೆಲ್ ಮತ್ತು ವೇರಿಯೆಂಟ್ ಆಧಾರದ ಮೇಲೆ ಡಿಸ್ಕೌಂಟ್ ಬದಲಾಗುತ್ತದೆ. ಗ್ರಾಹಕರು ಗರಿಷ್ಠ 3.35 ಲಕ್ಷ ರೂ.ವರೆಗೆ ಲಾಭ ಪಡೆಯಬಹುದು.

36
ಟಾಟಾ ಟಿಯಾಗೋ

ಟಾಟಾ ಕಂಪನಿ ತನ್ನ ಎಂಟ್ರಿ ಲೆವೆಲ್ ಕಾರುಗಳ ಮೇಲೂ ಆಫರ್ ನೀಡುತ್ತಿದೆ. ಟಿಯಾಗೋ ಪೆಟ್ರೋಲ್ ಮತ್ತು ಸಿಎನ್‌ಜಿ ಮಾಡೆಲ್‌ಗಳ ಮೇಲೆ 35,000 ರೂ.ವರೆಗೆ ಲಾಭ ಸಿಗುತ್ತಿದೆ. ಇದರಲ್ಲಿ 15,000 ರೂ. ನೇರ ಡಿಸ್ಕೌಂಟ್, 5,000 ರೂ. ಒಇಎಂ ಸಪೋರ್ಟ್, ಜೊತೆಗೆ ಎಕ್ಸ್‌ಚೇಂಜ್ ಅಥವಾ ಸ್ಕ್ರ್ಯಾಪೇಜ್ ಬೆನಿಫಿಟ್ ಸೇರಿದೆ. ಎಕ್ಸ್‌ಚೇಂಜ್ ಬೋನಸ್ ಅಡಿ 10,000 ರೂ., ಸ್ಕ್ರ್ಯಾಪೇಜ್ ಅಡಿ 15,000 ರೂ.ವರೆಗೆ ಲಾಭ ಸಿಗಲಿದೆ. ಟಿಗೋರ್ ಖರೀದಿಸುವವರಿಗೆ ಒಟ್ಟು 30,000 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್ ಸಿಎನ್‌ಜಿ ವೇರಿಯೆಂಟ್ ಮೇಲೆ 55,000 ರೂ. ಹಾಗೂ ಪೆಟ್ರೋಲ್, ಡೀಸೆಲ್ ವೇರಿಯೆಂಟ್‌ಗಳ ಮೇಲೆ 35,000 ರೂ.ವರೆಗೆ ಹಣ ಉಳಿಸಬಹುದು.

46
ಟಾಟಾ ನೆಕ್ಸಾನ್

ಭಾರೀ ಡಿಮ್ಯಾಂಡ್ ಇರುವ ಟಾಟಾ ನೆಕ್ಸಾನ್ ಎಸ್‌ಯುವಿಯ ವಿವಿಧ ವೇರಿಯೆಂಟ್‌ಗಳ ಮೇಲೆ ದೊಡ್ಡ ಮಟ್ಟದ ಡಿಸ್ಕೌಂಟ್ ಲಭ್ಯವಿದೆ. ಆಯ್ದ ಪೆಟ್ರೋಲ್ ಮ್ಯಾನುವಲ್ ವೇರಿಯೆಂಟ್‌ಗಳ ಮೇಲೆ 75,000 ರೂ.ವರೆಗೆ ಹಣ ಉಳಿಸಬಹುದು. ಸಿಎನ್‌ಜಿ ಮಾಡೆಲ್ ಮೇಲೆ 60,000 ರೂ.ವರೆಗೆ ಲಾಭ ಸಿಗುತ್ತಿದೆ. ನೆಕ್ಸಾನ್‌ನ ಇತರ ಪೆಟ್ರೋಲ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ವೇರಿಯೆಂಟ್‌ಗಳ ಮೇಲೆ 55,000 ರೂ.ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಡೀಸೆಲ್ ಮಾಡೆಲ್ ಮೇಲೆ 20,000 ರೂ.ವರೆಗೆ ಲಾಭ ಪಡೆಯಬಹುದು. ನೆಕ್ಸಾನ್ ಇವಿ ಖರೀದಿಸುವವರು 45,000 ರೂ.ವರೆಗೆ ಹಣ ಉಳಿಸಬಹುದು. ಇದರಲ್ಲಿ 10,000 ರೂ. ಗ್ರೀನ್ ಬೋನಸ್ ಕೂಡ ಸೇರಿದೆ.

56
ಟಾಟಾ ಪಂಚ್

ಟಾಟಾ ಪಂಚ್ ಪೆಟ್ರೋಲ್ ಮತ್ತು ಸಿಎನ್‌ಜಿ ಮಾಡೆಲ್‌ಗಳ ಮೇಲೆ ಸದ್ಯ ಯಾವುದೇ ಡಿಸ್ಕೌಂಟ್ ಇಲ್ಲ. ಆದರೆ ಎಲೆಕ್ಟ್ರಿಕ್ ಮಾಡೆಲ್ ಪಂಚ್ ಇವಿ ವೇರಿಯೆಂಟ್‌ಗಳ ಮೇಲೆ ಒಳ್ಳೆ ಉಳಿತಾಯ ಮಾಡಬಹುದು. ಪಂಚ್ ಇವಿ ಲಾಂಗ್ ರೇಂಜ್ ವೇರಿಯೆಂಟ್ ಮೇಲೆ 1.45 ಲಕ್ಷ ರೂ.ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಮೀಡಿಯಂ ರೇಂಜ್ ವೇರಿಯೆಂಟ್ ಮೇಲೆ 1.25 ಲಕ್ಷ ರೂ., ಸ್ಮಾರ್ಟ್ ವೇರಿಯೆಂಟ್ ಮೇಲೆ 95,000 ರೂ.ವರೆಗೆ ರಿಯಾಯಿತಿ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ವ್ ಇವಿಯ ಆಯ್ದ ವೇರಿಯೆಂಟ್‌ಗಳ ಮೇಲೆ ಗರಿಷ್ಠ 3.35 ಲಕ್ಷ ರೂ.ವರೆಗೆ ಹಣ ಉಳಿಸಬಹುದು. ಆದರೆ ಈ ಆಫರ್ ಕೆಲವು ವೇರಿಯೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ (ಎಕ್ಸ್ ಟ್ರಿಮ್‌ಗಳು ಇದರಲ್ಲಿ ಬರುವುದಿಲ್ಲ). ಕರ್ವ್ ಇವಿ ಕ್ರಿಯೇಟಿವ್ ವೇರಿಯೆಂಟ್ ಮೇಲೆ 2.85 ಲಕ್ಷ ರೂ.ವರೆಗೆ ಲಾಭ ಸಿಗಲಿದೆ.

66
ಟಾಟಾ ಹ್ಯಾರಿಯರ್

ಟಾಟಾದ ದೊಡ್ಡ ಎಸ್‌ಯುವಿಗಳಾದ ಹ್ಯಾರಿಯರ್ ಮತ್ತು ಸಫಾರಿ ಡೀಸೆಲ್ ಮಾಡೆಲ್‌ಗಳ ಮೇಲೆ 45,000 ರೂ.ವರೆಗೆ ಹಬ್ಬದ ಆಫರ್ ಸಿಗುತ್ತಿದೆ. ಇದರಲ್ಲಿ ಎಕ್ಸ್‌ಚೇಂಜ್ ಮತ್ತು ಸ್ಕ್ರ್ಯಾಪೇಜ್ ಬೋನಸ್‌ಗಳು ಸೇರಿವೆ. ಹ್ಯಾರಿಯರ್ ಇವಿ ಫಿಯರ್‌ಲೆಸ್ ಮತ್ತು ಎಂಪವರ್ಡ್ ವೇರಿಯೆಂಟ್‌ಗಳ ಮೇಲೆ 2.75 ಲಕ್ಷ ರೂ.ವರೆಗೆ ಡಿಸ್ಕೌಂಟ್ ಪಡೆಯಬಹುದು. ಹಾಗೆಯೇ ಟಾಟಾ ಸಿಯೆರಾ ಪೆಟ್ರೋಲ್, ಡೀಸೆಲ್ ಮಾಡೆಲ್‌ಗಳ ಮೇಲೂ 30,000 ರೂ.ವರೆಗೆ ಲಾಭ ನೀಡಲಾಗುತ್ತಿದೆ.

ನೆನಪಿಡಿ: ಈ ಆಫರ್‌ಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ಹಾಗಾಗಿ, ಕಾರು ಖರೀದಿಸುವ ಮುನ್ನ ಮಾಡೆಲ್ ಮತ್ತು ವೇರಿಯೆಂಟ್ ಪ್ರಕಾರ ಆಫರ್ ನಿಯಮಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

Read more Photos on
click me!

Recommended Stories