ಹ್ಯುಂಡೈ IONIQ5,ಕಿಯಾ ಇವಿ6 ಸೇರಿ 1.47 ಲಕ್ಷ ಇವಿ ಕಾರು ಹಿಂಪಡೆಯಲು ಮುಂದಾದ ಕಂಪನಿ!

First Published Mar 22, 2024, 5:22 PM IST

ತಾಂತ್ರಿಕ ಕಾರಣದಿಂದ ಹ್ಯುಂಡೈ IONIQ5, ಕಿಯಾ ಇವಿ6 ಸೇರಿದಂತೆ 1.47 ಲಕ್ಷ ಇವಿ ಕಾರುಗಳನ್ನು ಹಿಂಪಡೆಯಲು ಹ್ಯುಂಡೈ ಹಾಗೂ ಕಿಯಾ ನಿರ್ಧರಿಸಿದೆ. ಇದೀಗ ಈ ಸಮಸ್ಯೆ ಎದುರಿಸುತ್ತಿರುವ ಮಾಲೀಕರಿಗೆ ತಮ್ಮ ಕಿಯಾ ಅಥಾ ಹ್ಯುಂಡೈ ಕಾರುಗಳನ್ನು ಹತ್ತಿರದ ಡೀಲರ್‌ಶಿಪ್‌ಗೆ ವಾಪಸ್ ನೀಡಲು ಸೂಚಿಸಲಾಗಿದೆ.

ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹ್ಯುಂಡೈ ಹಾಗೂ ಕಿಯಾ ಮೋಡಿ ಮಾಡುತ್ತಿದೆ. ಈ ಪೈಕಿ ಹ್ಯುಂಡೈ IONIQ5, ಕಿಯಾ ಇವಿ6 ಸೇರಿದಂತೆ ಕೆಲ ಕಾರುಗಳು ಅತ್ಯಂತ ಜನಪ್ರಿಯವಾಗಿದೆ. 
 

IONIQ5 ಹಾಗೂ ಇವಿ6 ಕಾರುಗಳ ಚಾರ್ಜಿಂಗ್ ಯೂನಿಟ್‌ನಲ್ಲಿ ಸಾಫ್ಟ್‌ವೇರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈಗಾಗಲೇ ಅಮೇರಿಕದಲ್ಲಿ ಮಾರಾಟವಾಗಿರುವ 1.47 ಲಕ್ಷ IONIQ5 ಇವಿ6 ಸೇರಿದಂತೆ ಕೆಲ ಮಾಡೆಲ್ ಎಲೆಕ್ಟ್ರಿಕ್ ಕಾರುಗಳನ್ನು ಹಿಂಪಡೆಯಲಾಗುತ್ತಿದೆ.
 

ಉತ್ತರ ಕೊರಿಯಾದಲ್ಲಿ ಎರಡು ವಾರಗಳ ಹಿಂದೆ 1.70 ಲಕ್ಷ IONIQ5 ಹಾಗೂ ಇವಿ6 ಕಾರುಗಳನ್ನು ಹಿಂಡೆಯಲು ಉತ್ತರ ಕೊರಿಯಾ ಸಚಿವಾಲಯ ಆದೇಶ ಹೊರಡಿಸಿದೆ.  
 

ಹ್ಯುಂಡೈ IONIQ5,IONIQ6, ಜೆನಿಸಿಸ್, GV60, GV70 ಸೇರಿದಂತೆ 1.15 ಲಕ್ಷ ಹ್ಯುಂಡೈ ಕಾರುಗಳು ಹಾಗೂ 56,016 ಕಿಯಾ ಇವಿ6 ಕಾರುಗಳನ್ನು ಅಮೆರಿಕದಲ್ಲಿ ರಿಕಾಲ್ ಮಾಡಲು ಕಂಪನಿ ಮುಂದಾಗಿದೆ.
 

ICCUನಲ್ಲಿ ಚಾರ್ಜಿಂಗ್ ಯೂನಿಟ್‌ನಲ್ಲಿ ಸಾಫ್ಟ್‌ವೇರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಲವರು ಈ ಕುರಿತು ದೂರು ನೀಡಿದ್ದಾರೆ. ಚಾಲನೆಯಲ್ಲಿರುವಾಗಲೇ ಚಾರ್ಚ್ ದಿಢೀರ್ ಕಳೆದುಕೊಳ್ಳುವ ಹಾಗೂ ಚಾರ್ಜಿಂಗ್ ವೇಳೆಯೂ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
 

ICCU ಪವರ್ ಸಮಸ್ಯೆ ಕುರಿತು ಅಮೆರಿಕದಲ್ಲಿ ಜೂನ್ 8, 2023ರಲ್ಲಿ ತನಿಖೆಗೆ ಆದೇಶಿಸಿದೆ. ಇದೀಗ ತಾಂತ್ರಿಕ ಸಮಸ್ಯೆ ಕಾರಣ NHTSA ಘೋಷಣೆ ಮಾಡಿದೆ. 147,110  ಹ್ಯುಂಡೈ ಹಾಗೂ ಕಿಯಾ ಇವಿ ಕಾರುಗಳನ್ನು ರಿಕಾಲ್ ಮಾಡುವುದಾಗಿ ಘೋಷಿಸಿದೆ.
 

ಮಾಲೀಕರು ಹತ್ತಿರದ ಡೀಲರ್‌ಶಿಪ್‌ಗೆ ವಾಹನಗಳನ್ನು ಹಿಂತಿರುಗಿಸಲು ಸೂಚಿಸಿದೆ. ಡೀಲರ್ಸ್ ಈ ಕುರಿತು ಪರಿಶೀಲನೆ ನಡೆಸಿ ನಿರ್ವಹಣೆ ಮಾಡಿ ಮರಳಿ ಮಾಲೀಕರಿಗೆ ನೀಡಲಿದ್ದಾರೆ ಎಂದಿದೆ.
 

ಹೆಚ್ಚು ವಾಹನಗಳ ರಿಪೇರಿ ಅಗತ್ಯವಿರುವುದರಿಂದ ವ್ಯತ್ಯಯವಾಗುವ ಸಾಧ್ಯತೆ ಇದೆ. ಹೀಗಾಗಿ ಕಾರು ಮಾಲೀಕರು ಸಹಕರಿಸಬೇಕಾಗಿ ಕಂಪನಿ ವಿನಂತಿಸಿಕೊಂಡಿದೆ.

click me!