ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರತಿ ದಿನ ಆವಿಷ್ಕಾರ ನಡೆಯುತ್ತಿದೆ. ಮೈಲೇಜ್ ಹೆಚ್ಚಳ, ಚಾರ್ಜಿಂಗ್ ಸಮಯ ಕಡಿತ, ಸುರಕ್ಷತೆ ಕುರಿತು ಸಂಶೋಧನೆ ನಡೆಯುತ್ತಲೇ ಇದೆ. ಇದೀಗ ಅತೀ ದೊಡ್ಡ ಸಮಸೆಯಾಗಿರು ಚಾರ್ಜಿಂಗ್ ಹಾಗೂ ಮೈಲೇಜ್‌ಗೆ ಉತ್ತರ ಸಿಕ್ಕಿದೆ.
ಕೇವಲ 10 ನಿಮಿಷ ಚಾರ್ಜ್ ಮಾಡಿದರೆ ಸಾಕು ಬರೋಬ್ಬರಿ 400 ಕಿ.ಮೀ ಮೈಲೇಜ್ ನೀಡುವ ಬ್ಯಾಟರಿ ತಂತ್ರಜ್ಞಾನ ಪರಿಚಯಿಸಲಾಗಿದೆ. ಪೆಟ್ರೋಲ್ ಅಥವಾ ಡೀಸೆಲ್ ಹಾಕಲು ತೆಗೆದುಕೊಳ್ಳುವ ಸಮಯದಲ್ಲಿ ಚಾರ್ಜಿಂಗ್ ಆಗಲಿದೆ.
10 ನಿಮಿಷ ಚಾರ್ಜ್ ಮಾಡಿದರೆ ಸಾಕು 400 ಕಿ.ಮಿ ಮೈಲೇಜ್ ನೀಡಲಿದೆ. ಇನ್ನು ಸಂಪೂರ್ಣ ಚಾರ್ಜಿಂಗ್ ಮಾಡಿದರೆ 700 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಗರಿಷ್ಠ ಮೈಲೇಜ್ ಹಾಗೂ ಅತ್ಯಲ್ಪ ಸಮಯದ ಚಾರ್ಜಿಂಗ್ ತಂತ್ರಜ್ಞಾನದ ಬ್ಯಾಟರಿಯನ್ನು ಚೀನಾದ ಕಾಂಟಂಪರರಿ ಆಂಪರೆಕ್ಸ್ ಟೆಕ್ನಾಲಜಿ ಸಂಸ್ಥೆ ಅಭಿವೃದ್ಧಿ ಮಾಡಿದೆ.
ಅಮೆರಿಕದ ಟೆಸ್ಲಾ ಕಂಪನಿಗೆ ಬ್ಯಾಟರಿ ತಯಾರಿಸಿ ನೀಡುತ್ತಿರುವ ಈ ಕಂಪನಿ ಇದೀಗ ಸೂಪರ್‌ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಅಭಿವೃದ್ಧಿಪಡಿಸಿದೆ. ಲಿಥಿಯಂ ಐಯಾನ್ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಹೊಸ ದಿಕ್ಕು ನೀಡಿದೆ.
2023ರ ಅಂತ್ಯದ ವೇಳೆ ಈ ಬ್ಯಾಟರಿ ಉತ್ಪಾದನೆ ಆರಂಭಗೊಳ್ಳಲಿದ್ದು, 2024ರ ಆರಂಭದಿಂದಲೇ ಬ್ಯಾಟರಿ ರಫ್ತು ಆರಂಭಗೊಳ್ಳಲಿದೆ. ಚೀನಾದಲ್ಲಿನ ಆವಿಷ್ಕಾರ ಇದೀಗ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ನೆರವಾಗಲಿದೆ.
ಭಾರತಕ್ಕೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಬಹುತೇಕ ಚೀನಾ ಹಾಗೂ ಇತರ ದೇಶಗಳನ್ನು ಅವಲಂಬಿಸಿದೆ. ಇದೀಗ ಈ ತಂತ್ರಜ್ಞಾನ ಭಾರತಕ್ಕೆ ಕಾಲಿಡುವ ದಿನ ದೂರವಿಲ್ಲ. 2014ರಿಂದ ಭಾರತದಲ್ಲಿ ಚಾರ್ಜಿಂಗ್ ಸಮಸ್ಸೆಗೆ ಪರಿಹಾರ ಸಿಗಲಿದೆ.