ಸ್ಟಾರ್ಟ್ಅಪ್ ಎಂಡಿ ಬಳಿ ಇದೆ ಭಾರತದ ಇತೀ ದುಬಾರಿ ರಿಜಿಸ್ಟ್ರೇಶನ್ ನಂಬರ್

Published : Sep 02, 2025, 04:31 PM IST

ಭಾರತದಲ್ಲಿ ದುಬಾರಿ ಕಾರು ಹಲವರ ಬಳಿ ಇದೆ. ಆದರೆ ಹರಾಜಿನ ಮೂಲಕ ದುಪ್ಪಟ್ಟು ಬೆಲೆ ನೀಡಿ ಕಾರಿನ ರಿಜಿಸ್ಟ್ರೇಶನ್ ನಂಬರ್ ಖರೀದಿ ಮಾಡಿದವರು ಯಾರು? ಭಾರತದ ಸ್ಟಾರ್ಟ್ ಅಪ್ ನಿರ್ದೇಶಕರೊಬ್ಬರು ತಮ್ಮ ಕಾರಿಗೆ ಮರ್ಸಿಡಿಸ್ ಬೆಂಜ್‌ಗಿಂತೂ ಹೆಚ್ಚು ಬೆಲೆ ನೀಡಿ ಕಾರಿನ ನಂಬರ್ ಪಡೆದುಕೊಂಡಿದ್ದಾರೆ.

PREV
16

ಭಾರತ ಹಲವು ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು, ಕಂಪನಿ ಸಿಇಒಗಳ ಬಳಿ ಐಷಾರಾಮಿ ಹಾಗೂ ದುಬಾರಿ ಕಾರುಗಳಿವೆ. ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರುಗಳನ್ನು ಖರೀದಿಸುತ್ತಾರೆ.ಮುಕೇಶ್ ಅಂಬಾನಿ ಸೇರಿದಂತೆ ಹಲವರ ಬಳಿಕ ದುಬಾರಿ ಕಾರುಗಳಿವೆ. ಆದರೆ ಭಾರತದ ಅತೀ ದುಬಾರಿ ನಂಬರ್ ಪ್ಲೇಟ್ (ವಾಹನ ರಿಜಿಸ್ಟ್ರೇಶನ್ ನಂಬರ್ ಯಾರ ಬಳಿ ಇದೆ? ಈ ದುಬಾರಿ ನಂಬರ್ ಪ್ಲೇಟ್ ಇರುವ ಉದ್ಯಮಿ ವೇಣು ಗೋಪಾಲಕೃಷ್ಣನ್.

26

ಟೆಕ್ಕಿ ವೇಣು ಗೋಪಾಲಕೃಷ್ಣನ್ ಶ್ರೀಮಂತ ಉದ್ಯಮಿ. ಲಿಟ್ಮಸ್7 ಅನ್ನೋ ಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹುಟ್ಟುಹಾಕಿರುವ ವೇಣು ಗೋಪಾಲಕೃಷ್ಣನ್, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇಣು ಗೋಪಾಲಕೃಷ್ಣನ್ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ. ಈ ಕಾರಿಗೆ ತಮ್ಮಿಷ್ಟದ ಹಾಗೂ ಅದೃಷ್ಟದ ನಂಬರ್‌ಗಾಗಿ ಬರೋಬ್ಬರಿ 46 ಲಕ್ಷ ರೂಪಾಯಿ ನೀಡಿದ್ದಾರೆ.

36

ವೇಣು ಗೋಪಾಲಕೃಷ್ಣನ್ 4 ಕೋಟಿ ರೂಪಾಯಿ ನೀಡಿ ಖರೀದಿಸಿದ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ ಆರ್‌ಟಿಒ ನಡೆಸಿದ ಹರಾಜಿನ ಮೂಲಕ 45.99 ಲಕ್ಷ ರೂಪಾಯಿ ನೀಡಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದಾರೆ. ಇದು ಭಾರತದ ಅತೀ ದುಬಾರಿ ವಾಹನ ನಂಬರ್ ಪ್ಲೇಟ್. ಹಲವರು ಹರಾಜಿನ ಮೂಲಕ ನಂಬರ್ ಖರೀದಿಸಿದ್ದಾರೆ. ಆದರೇ ಇದು ಅತೀ ದುಬಾರಿ ಖರೀದಿ ಎಂದೇ ಗುರುತಿಸಿಕೊಂಡಿದ್ದಾರೆ.

46

KL 07 DG 0007 ನಂಬರ್‌ಗೆ ವೇಣು ಗೋಪಾಲಕೃಷ್ಣನ್ 45.99 ಲಕ್ಷ ರೂಪಾಯಿ ನೀಡಿದ್ದಾರೆ. 7 ಇವರ ಅದೃಷ್ಣದ ನಂಬರ್. ಹೀಗಾಗಿ ಲಿಟ್ಮಸ್7 ಎಂದು ತಮ್ಮ ಕಂಪನಿಗೆ ಹೆಸರಿಟ್ಟಿದ್ದಾರೆ. ಇಷ್ಟೇ ಅಲ್ಲ 007 ಜೇಮ್ಸ್ ಬಾಂಡ್ ಸಿನಿಮಾದಲ್ಲಿ ಬಳಕೆಯಾಗಿರುವ ಅತೀ ಜನಪ್ರಿಯ ನಂಬರ್. ಹೀಗಾಗಿ ಈ ನಂಬರ್‌ಗೆ ಹಲವರು ಮುಗಿಬಿದ್ದಿದ್ದರು. ಆದರೆ ಪಟ್ಟು ಬಿಡದ ವೇಣು ಗೋಪಾಲಕೃಷ್ಣನ್ ದುಬಾರಿ ಬೆಲೆ ನೀಡಿ ಖರೀದಿಸಿದ್ದಾರೆ.

56

ಕೇರಳ ಮೋಟಾರು ವಾಹನ ಇಲಾಖೆ ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆಸಿತ್ತು. ಈ ವೇಳೆ ಎಲ್ಲರನ್ನು ಹಿಂದಿಕ್ಕಿ ವೇಣು ಗೋಪಾಲಕೃಷ್ಣನ್ KL 07 DG 0007 ನಂಬರ್ ಖರೀದಿಸಿದ್ದಾರೆ. ವೇಣು ಗೋಪಾಲಕೃಷ್ಣನ್ ಅವರ ಬಹುತೇಕ ಐಷಾರಾಮಿ ಕಾರುಗಳ ನಂಬರ್ 7ರಿಂದ ಕೊನೆಗೊಳ್ಳುತ್ತದೆ.

66

KL 07 DG 0007 ನಂಬರ್ ಪ್ಲೇಟ್ ಹರಾಜು 25,000 ರೂಪಾಯಿಯಿಂದ ಆರಂಭಗೊಂಡಿತ್ತು. ನೇರವಾಗಿ 50 ಸಾವಿರ, 1 ಲಕ್ಷಕ್ಕೆ ಜಂಪ್ ಆಗಿತ್ತು. ಹಲವು ಉದ್ಯಮಿಗಳು ಈ ನಂಬರ್ ಖರೀದಿಗೆ ಮುಗಿಬಿದ್ದಿದ್ದರು. ಕೊನೆಗೆ ವೇಣು ಗೋಪಾಲಕೃಷ್ಣನ್ 46 ಲಕ್ಷ ರೂಪಾಯಿ ನೀಡಿ ರಿಜಿಸ್ಟ್ರೇಶನ್ ನಂಬರ್ ಖರೀದಿಸಿದ್ದಾರೆ.

Read more Photos on
click me!

Recommended Stories