ಕೇವಲ 6.29 ಲಕ್ಷ ರೂಗೆ ಹೊಚ್ಚ ಹೊಸ ರೆನಾಲ್ಟ್ ಕೈಗರ್ SUV ಕಾರು ಬಿಡುಗಡೆ

Published : Aug 26, 2025, 03:19 PM IST

ರೆನಾಲ್ಟ್ ಇಂಡಿಯಾ ಇದೀಗ ಕೈಗರ್ ಕಾರನ್ನು ಹೊಸ ವಿನ್ಯಾಸ, ಸುಧಾರಿತ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಕೇವಲ 6.29 ಲಕ್ಷ ರೂಪಾಯಿ ಬೆಲೆಯಲ್ಲಿ ಕಾರು ಲಭ್ಯವಿದೆ.

PREV
17

ರೆನಾಲ್ಟ್ ಇಂಡಿಯಾ ಹೊಚ್ಚ ಹೊಸ ಕೈಗರ್ ಕಾರು ಬಿಡುಗಡೆ ಮಾಡಿದೆ. ರೀಥಿಂಕ್ ಪರ್ಫಾರ್ಮೆನ್ಸ್ ಪರಿಕಲ್ಪನೆ ಅಡಿ ಹೊಸ ರೆನಾಲ್ಡ್ ಕಿಗರ್ ಕಾರು ಬಿಡುಗಡೆ ಮಾಡಲಾಗಿದೆ. ಅಭಿವೃದ್ಧಿಪಡಿಸಿರುವ ಸುಧಾರಿತ 100 ಪಿಎಸ್ ಟರ್ಬೊಚಾರ್ಜ್ಡ್ ಎಂಜಿನ್ ಹಾಗೂ 35ಕ್ಕೂ ಹೆಚ್ಚು ಸುಧಾರಣೆಗಳನ್ನು ಹೊಂದಿರುವ ಈ ಸಬ್-ಫೋರ್ ಮೀಟರ್ ಎಸ್‌ಯುವಿ ಇದಾಗಿದೆ. ಹೊಸ ಕೈಗರ್ ಆಕರ್ಷಕ ವಿನ್ಯಾಸ, ಸ್ಮಾರ್ಟ್ ತಂತ್ರಜ್ಞಾನ ಮತ್ತು ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಅಪ್ ಗ್ರೇಡ್ ಮಾಡಲಾಗಿದೆ. ಇದು ವಿವಿಧ ವೇರಿಯೆಂಟ್ ಗಳಲ್ಲಿ ಲಭ್ಯವಿದೆ. ಕೈಗೆಟುಕುವ ದರದ ನ್ಯಾಚುರಲೀ ಆಸ್ಪಿರೇಟೆಡ್ ಎಂಜಿನ್ ವೇರಿಯಂಟ್‌ ಗಳು ರೂ. 6.29 ಲಕ್ಷದಿಂದ ರೂ. 9.14 ಲಕ್ಷ (ಎಕ್ಸ್-ಶೋರೂಮ್) ಬೆಲೆಯಲ್ಲಿ ಲಭ್ಯವಿವೆ. ಇನ್ನು ಟರ್ಬೊ ಕೈಗರ್ ವೇರಿಯಂಟ್‌ ಗಳಾದ ಟೆಕ್ನೋ ಮತ್ತು ಇಮೋಷನ್‌ ಗೆ ರೂ. 9.99 ಲಕ್ಷದಿಂದ ರೂ. 11.29 ಲಕ್ಷ (ಎಕ್ಸ್-ಶೋರೂಮ್) ಬೆಲೆಯಿದೆ.

27

ಕಾರು ಏಳು ಆಕರ್ಷಕ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, ಇವುಗಳಲ್ಲಿ ಓಯಸಿಸ್ ಯೆಲ್ಲೋ ಮತ್ತು ಶಾಡೋ ಗ್ರೇ ಎಂಬ ಎರಡು ಹೊಸ ಬಣ್ಣಗಳನ್ನು ಸೇರಿಸಲಾಗಿದೆ. ಜೊತೆಗೆ ರೇಡಿಯಂಟ್ ರೆಡ್, ಕ್ಯಾಸ್ಪಿಯನ್ ಬ್ಲೂ, ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಕಾರು ದೊರೆಯಲಿದೆ.

37

ಹೊಸ ಕೈಗರ್‌ ನ ಅತ್ಯುತ್ತಮ ಕಾರ್ಯಕ್ಷಮತೆ

ಮೂಲ ಕೈಗರ್‌ ನ ಅದ್ಭುತ ಪರಂಪರೆಯ ಮೇಲೆ ನಿರ್ಮಿತವಾದ ಈ ಕಾರು, ಸಬ್- 4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ವಿಶಿಷ್ಟ ಕಾರ್ಯಕ್ಷಮತೆಯ ಪ್ಯಾಕೇಜ್ ಅನ್ನು ಒದಗಿಸಲಿದೆ. ಇದು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಎಂಜಿನ್ ಕಂಪಾರ್ಟ್‌ಮೆಂಟ್‌ ಜೊತೆಗೆ ವಿಶಾಲವಾದ ಕ್ಯಾಬಿನ್ ಲೇಔಟ್, ವಿಭಾಗದಲ್ಲಿಯೇ ಅತ್ಯುತ್ತಮ ಹಿಂಭಾಗದ ಕಾಲಿಡುವ ಸ್ಥಳ, ಆಂತರಿಕ ಶೇಖರಣಾ ಸ್ಥಳ, ಫ್ರಂಟ್ ಕಪಲ್ ಡಿಸ್ಟಾನ್ಸ್ ಮತ್ತು ವಿಭಾಗದಲ್ಲಿಯೇ ಹೆಚ್ಚು ಬೂಟ್ ಸ್ಪೇಸ್ ಅನ್ನು ನೀಡುತ್ತದೆ. ಇದು ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ವಿಭಿನ್ನ ಡ್ರೈವಿಂಗ್ ಮೋಡ್‌ ಗಳನ್ನು ಹೊಂದಿದ್ದು, ಇವುಗಳನ್ನು ವಿವಿಧ ಪ್ರದೇಶಗಳಿಗೆ ತಕ್ಕಂತೆ ಮತ್ತು ಗ್ರಾಹಕರ ಆದ್ಯತೆಗಳಿಗೆ ಹೊಂದಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

47

ಹೊಸ ಕೈಗರ್ ಭಾರತದ ವೈವಿಧ್ಯಮಯ ಚಾಲನೆಯ ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿರುವ ವಾಹನವಾಗಿದ್ದು, ಸರ್ವತೋಮುಖ ಕಾರ್ಯಕ್ಷಮತೆಯೊಂದಿಗೆ ಅತ್ಯುತ್ತಮ ಮೌಲ್ಯವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದರ ಕೇಂದ್ರದಲ್ಲಿ ಶಕ್ತಿಶಾಲಿ ಟರ್ಬೊಚಾರ್ಜ್ಡ್ ಎಂಜಿನ್ ಇದ್ದು, ಇದು ಗರಿಷ್ಠ 100 ಪಿಎಸ್ ಶಕ್ತಿಯನ್ನು ಮತ್ತು 160 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 20.38 ಕೆಎಂಪಿಎಲ್ (ಎ.ಆರ್.ಎ.ಐ ಪ್ರಕಾರ) ಇಂಧನ ದಕ್ಷತೆಯನ್ನು ಒದಗಿಸುತ್ತದೆ. ಹೆಚ್ಚು ಕೈಗೆಟುಕುವ ಸುಲಭದಜ ಆಯ್ಕೆಯನ್ನು ಬಯಸುವ ಗ್ರಾಹಕರಿಗಾಗಿ, ಹೊಸ ಕೈಗರ್ ಸುಧಾರಿತ ನೈಸರ್ಗಿಕ ಆಸ್ಪಿರೇಟೆಡ್ ಎಂಜಿನ್‌ ನೊಂದಿಗೆ ಲಭ್ಯವಿದ್ದು, ಇದು ಗರಿಷ್ಠ 72 ಪಿಎಸ್ ಪವರ್ ಅನ್ನು ಮತ್ತು 96 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 19.83 ಕೆಎಂಪಿಎಲ್ (ಎ.ಆರ್.ಎ.ಐ ಪ್ರಕಾರ) ಇಂಧನ ದಕ್ಷತೆಯನ್ನು ಒದಗಿಸುತ್ತದೆ.

57

ಹೊಸ ಕೈಗರ್ ಪ್ರತಿಯೊಂದು ಚಾಲನಾ ಶೈಲಿಗೆ ಸರಿಹೊಂದುವಂತೆ ಬಹುಮುಖ ಟ್ರಾನ್ಸ್‌ ಮಿಷನ್ ಆಯ್ಕೆಗಳನ್ನು ಹೊಂದಿದ್ದು, ನಿಯಂತ್ರಣವನ್ನು ಇಷ್ಟಪಡುವವರಿಗೆ 5-ಸ್ಪೀಡ್ ಮ್ಯಾನುಯಲ್, ಸುಲಭ ನಗರ ಚಾಲನೆಗಾಗಿ ಈಸಿ-ಆರ್ ಎಎಂಟಿ ಮತ್ತು ಸುಗಮ ಹಾಗೂ ಶುದ್ಧ ಕಾರ್ಯಕ್ಷಮತೆಗಾಗಿ ಸುಧಾರಿತ ಎಕ್ಸ್-ಟ್ರಾನಿಕ್ ಸಿವಿಟಿ ಆಯ್ಕೆಯನ್ನು ಒದಗಿಸುತ್ತದೆ. ಸಿವಿಟಿಯ ವಿಶೇಷತೆಯೆಂದರೆ ಅದರ ಡಿ-ಸ್ಟೆಪ್ ತಂತ್ರಜ್ಞಾನ, ಇದು ಸಾಂಪ್ರದಾಯಿಕ ‘ರಬ್ಬರ್-ಬ್ಯಾಂಡ್ ಎಫೆಕ್ಟ್’ ಅನ್ನು ತೆಗೆದುಹಾಕುತ್ತದೆ ಮತ್ತು ಎಂಜಿನ್ ವೇಗದಲ್ಲಿ ಹಂತ ಹಂತದ ಬದಲಾವಣೆಗಳನ್ನು ಪರಿಚಯಿಸುತ್ತದೆ. ಸ್ಪಂದನಾಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ವೇಗವರ್ಧನೆಯ ಸಮಯದಲ್ಲಿ ಸುಲಭವಾಗಿ ಗೇರ್ ಶಿಫ್ಟ್‌ ಹೋಂದಲು ಅನುವು ಮಾಡಿಕೊಡುತ್ತದೆ ಮತ್ತು ಚಾಲನೆಯ ಅನುಭವವನ್ನು ಉತ್ತಮಗೊಳಿಸುತ್ತದೆ.

67

ಪ್ರೀಮಿಯಂ ಸೌಕರ್ಯ ಮತ್ತು ಉನ್ನತ ತಂತ್ರಜ್ಞಾನ

ಹೊಸ ಕೈಗರ್ ಆರಾಮದಾಯಕ ಚಾಲನೆಯ ಅನುಭವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ವೆಂಟಿಲೇಟೆಡ್ ಮುಂಭಾಗದ ಸೀಟ್‌ ಗಳು, ಲೈಟ್ ಲೆದರೆಟ್ ಸೀಟ್ ಅಪ್ಹೋಲ್ಸ್ಟರಿ, ಹಿಂಭಾಗದ ಏಸಿ ವೆಂಟ್‌ ಗಳು, ಸುಧಾರಿತ ಗಾಳಿಯ ಹರಿವು, ಮತ್ತು ಸವಾರಿ ಸಮಯದಲ್ಲಿ ಮೌನ ವಾತಾವರಣ ಹೊಂದಲು ಸುಧಾರಿತ ಶಬ್ದ ನಿರೋಧಕ ವ್ಯವಸ್ಥೆ ಇತ್ಯಾದಿ ಲಭ್ಯವಿದೆ.

ಕಾಂಪ್ಯಾಕ್ಟ್ ಎಸ್‌ಯುವಿ ಈಗ ಮಲ್ಟಿ-ವ್ಯೂ ಕ್ಯಾಮೆರಾ ಸಿಸ್ಟಮ್ ಅನ್ನು ಹೊಂದಿದ್ದು, ಚಾಲಕರಿಗೆ ಬಹು ಕೋನಗಳಿಂದ ಸ್ಪಷ್ಟವಾಗಿ, ಸೂಕ್ತವಾಗಿ ನೋಡುವ ಅವಕಾಶ ಒದಗಿಸುತ್ತಿದ್ದು, ಸುಲಭವಾದ ಚಾಲನೆಯನ್ನು ಸಾಧ್ಯವಾಗಿಸುತ್ತದೆ. ಭಾರತದ ನಗರಗಳ ಕಿರಿದಾದ ರಸ್ತೆಗಳು ಮತ್ತು ಸವಾಲಿನ ಪಾರ್ಕಿಂಗ್ ಪರಿಸ್ಥಿತಿಗಳಿಗೆ ಇದು ಪರಿಪೂರ್ಣವಾಗಿ ಹೊಂದಿಕೊಳ್ಳುದೆ. ಇದು ಚಾಲಕರಿಗೆ ಸುಲಭವಾಗಿ ವೀಕ್ಷಣೆಗಳನ್ನು ಮಾಡಲು ಮತ್ತು ಸುರಕ್ಷಿತವಾಗಿ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ. ಸ್ವಯಂಚಾಲಿತ ಹೆಡ್‌ ಲ್ಯಾಂಪ್‌ ಗಳು ಮತ್ತು ರೈನ್ ಸೆನ್ಸಿಂಗ್ ವೈಪರ್‌ ಗಳಂತಹ ಫೀಚರ್ ಗಳು ಒತ್ತಡ- ಮುಕ್ತ ಚಾಲನೆಯನ್ನು ಸಾಧ್ಯವಾಗಿಸುತ್ತವೆ.

77

ರೆನಾಲ್ಟ್‌ ನ ಡಿಎನ್ಎಯ ಕೇಂದ್ರದಲ್ಲಿ ಸುರಕ್ಷತೆ ಇದ್ದು, ಇದನ್ನು ಅದರ ಹ್ಯೂಮನ್ ಫಸ್ಟ್ ಪ್ರೋಗ್ರಾಂನ ಮೂಲಕ ಸಾಧಿಸಲಾಗಿದೆ. ಹೊಸ ಕೈಗರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸವಾರರ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿ ಇರಿಸಿಕೊಂಡಿದೆ. ಎಲ್ಲಾ ವೇರಿಯಂಟ್‌ ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಂತೆ ಒಟ್ಟು 21 ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳನ್ನು ಒದಗಿಸುತ್ತದೆ, ಇದರಲ್ಲಿ ಮುಂಭಾಗ, ಸೈಡ್ ಮತ್ತು ಕರ್ಟನ್ ಏರ್‌ ಬ್ಯಾಗ್‌ಗಳು ಸೇರಿವೆ. ಇದರ ಜೊತೆಗೆ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇ ಎಸ್ ಪಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ ಎಸ್ ಎ), ಪ್ರತಿ ಸೀಟ್‌ಗೆ 3- ಪಾಯಿಂಟ್ ಸೀಟ್ ಬೆಲ್ಟ್‌ ಗಳು, ಮತ್ತು ಐಸೋಫಿಕ್ಸ್ ಚೈಲ್ಡ್ ಸೀಟ್ ಆಂಕರೇಜ್ ಸೇರಿವೆ.

Read more Photos on
click me!

Recommended Stories