ಕೇವಲ 5.65 ಲಕ್ಷ ರೂ 7 ಸೀಟರ್ ನಿಸ್ಸಾನ್ ಗ್ರಾವೈಟ್ ಕಾರು ಲಾಂಚ್, ದೇಶದ ಅತೀ ಕಡಿಮೆ ಬೆಲೆ MPV

Published : Feb 17, 2026, 10:21 PM IST

ಕೇವಲ 5.65 ಲಕ್ಷ ರೂ 7 ಸೀಟರ್ ನಿಸ್ಸಾನ್ ಗ್ರಾವೈಟ್ ಕಾರು ಲಾಂಚ್, ಇದು ಭಾರತದ ಅತೀ ಕಡಿಮೆ ಬೆಲೆಯ ಎಂಪಿವಿ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಣ್ಣ ಕಾರುಗಳ ಬೆಲೆಯಲ್ಲಿ ಇದೀಗ 7 ಸೀಟಿನ ಕಾರು ಲಭ್ಯವಾಗಿದೆ. 

PREV
16
ನಿಸ್ಸಾನ್ ಗ್ರಾವೈಟ್ ಕಾರು ಬಿಡುಗಡೆ

ಭಾರತದ ಆಟೋಮೊಬೈಲ್ ಮಾರುಕಟ್ಟೆ ಸದಾ ಪೈಪೋಟಿಯಿಂದ ಕೂಡಿದೆ. ಒಂದರ ಹಿಂದೆ ಸ್ಪರ್ಧಾತ್ಮಕ ಬೆಲೆಯಲ್ಲಿ ಕಾರುಗಳು ಬಿಡುಗೆಯಾಗುತ್ತಿದೆ. ಪ್ರತಿ ಕಾರುಗಳು ಹೊಸ ಹೊಸ ಫೀಚರ್ಸ್, ಗರಿಷ್ಠು ಸುರಕ್ಷತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದೀಗ ನಿಸ್ಸಾನ್ ಹೊಸ ಇತಿಹಾಸ ರಚಿಸಿದೆ. ಭಾರತದಲ್ಲಿ ಅತೀ ಕಡಿಮೆ ಬೆಲೆಯ 7 ಸೀಟರ್ ಕಾರು ಬಿಡುಗಡೆ ಮಾಡಿದೆ. ಇಂದು ನಿಸ್ಸಾನ್ ಗ್ರಾವೈಟ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ.

26
ನಿಸ್ಸಾನ್ ಗ್ರಾವೈಟ್ ಬೆಲೆ

ಭಾರತದಲ್ಲಿ ಸಣ್ಣ ಕಾರುಗಳ ಆರಂಭಿಕ ಬೆಲೆ 4 ರಿಂದ 5 ಲಕ್ಷ, ಇನ್ನು 4 ಸೀಟಿನ ಸಣ್ಣ ಎಸ್‌ಯುವಿ ಕಾರುಗಳ ಬೆಲೆ 5 ರಿಂದ 6 ಲಕ್ಷ ರೂಪಾಯಿ ಆದರೆ ನಿಸ್ಸಾನ್ ಗ್ರಾವೈಟ್ 7 ಸೀಟಿನ ಕಾರಿನ ಬೆಲೆ ಕೇವಲ 5.65 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಮಾತ್ರ. ಈ ಮೂಲಕ ಭಾರತದ ಅತೀ ಕಡಿಮೆ ಬೆಲೆಯ ಎಂಪಿವಿ ಕಾರು ಅನ್ನೋ ಹೆಗ್ಗಳಿಕೆಗೆ ನಿಸ್ಸಾನ್ ಗ್ರಾವೈಟ್ ಪಾತ್ರವಾಗಿದೆ.

36
ಆಕರ್ಷಕ ವಿನ್ಯಾಸ

ನಿಸ್ಸಾನ್ ಗ್ರಾವೈಟ್ ಕಾರು ಆಕರ್ಷಕ ವಿನ್ಯಾಸ ಹೊಂದಿದೆ.ಮುಂಭಾಗದಲ್ಲಿ ವಿ ಶೇಪ್ ಗ್ರಿಲ್, ಸ್ಲೀಕ್ ಹೆಡ್‌ಲ್ಯಾಂಪ್ಸ್, ಸೈಡ್ ಇಂಟಿಗ್ರೇಟೆಡ್ ಡಿಆರ್‌ಎಲ್, ಬೊನೆಟ್ ಮೇಲೆ ಗ್ರಾವೈಟ್ ಲೆಟರ್, ರೋಬಸ್ಟ್ ಲುಕಿಂಗ್ ಬಂಪರ್, 15 ಇಂಚಿನ ಅಲೋಯ್ ವ್ಹೀಲ್ಸ್, ಶಾರ್ಪ್ ಟೈಲ್ ಲ್ಯಾಂಪ್ಸ್ ಅದಕ್ಕೆ ಹೊಂದಿಕೊಂಡು ಕನೆಕ್ಟೆಡ್ ಸ್ಟ್ರಿಪ್ ಸೇರಿದಂತೆ ಹಲವು ಆಕರ್ಷಣೆ ಈ ಕಾರಿನಲ್ಲಿದೆ.

46
ನಿಸ್ಸಾನ್ ಗ್ರಾವೈಟ್ ಫೀಚರ್

ನಿಸ್ಸಾನ ಗ್ರಾವೈಟ್ ಐದು ಬಣ್ಣಗಳಲ್ಲಿ ಲಭ್ಯವಿದೆ. ಇನ್ನು 8 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಫ್ರೆಶ್ ಡಿಸೈನ್ ಸ್ಟೀರಿಂಗ್ ವ್ಹೀಲ್, 7 ಇಂಚಿನ ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಕೆಲ ವಿಶೇಷತೆಗಳು ಈ ಗ್ರಾವೈಟ್ ಕಾರಿನಲ್ಲಿದೆ. ವೈಯರ್‌ಲೆಸ್ ಚಾರ್ಡರ್, ಆಟೋ ಹೆಡ್‌ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

56
ಗ್ರಾವೈಟ್ ಕಾರಿನ ಸುರಕ್ಷತೆ

ನಿಸ್ಸಾನ್ ಗ್ರಾವೈಟ್ ಸುರಕ್ಷತೆಗೂ ಅಧ್ಯೆತೆ ನೀಡಿದೆ. 6 ಏರ್ ಬ್ಯಾಗ್ ನೀಡಲಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ಎಬಿಎಸ್ , ಹಿಲ್ ಸ್ಟಾರ್ಟ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ. ವಿಶೇಷ ಅಂದರೆ 8 ವೇರಿಯೆಂಟ್‌ಗಳಲ್ಲಿ ಗ್ರಾವೈಟ್ ಕಾರು ಲಭ್ಯವಿದೆ.

66
ಗ್ರಾವೈಟ್ ಕಾರಿನ ಎಂಜಿನ್

ನಿಸ್ಸಾನ್ ಗ್ರಾವೈಟ್ ಕಾರು 1.0 ಲೀಟರ್ 3 ಸಿಲಿಂಡರ್ ಎಂಜಿನ್ ಹೊಂದಿದೆ. 71 ಹೆಚ್‌ಪಿ ಪವರ್ ಹಾಗೂ 96 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಲಭ್ಯವಿದೆ. ಒಂದು ಲೀಟರ್ ಪೆಟ್ರೋಲ್‌ಗೆ 19.6 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳುತ್ತಿದೆ.

Read more Photos on
click me!

Recommended Stories