ಭಾರತದಲ್ಲಿ ಅತ್ಯಾಕರ್ಷಕ ಹ್ಯುಂಡೈ ಕ್ರೆಟಾ N ಲೈನ್ ಕಾರು ಬಿಡುಗಡೆ, ಬೆಲೆ ಎಷ್ಟು?

First Published | Mar 11, 2024, 7:58 PM IST

ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ, ಬೇಡಿಕೆಯ ಎಸ್‌ಯುವಿಗಳ ಪೈಕಿ ಹ್ಯುಂಡೈ ಕ್ರೆಟಾ ಕಾರು ಮುಂಚೂಣಿಯಲ್ಲಿದೆ. ಇದೀಗ ಹ್ಯುಂಡೈ ಕ್ರೆಟಾ ಎನ್‌ಲೈನ್ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
 

ಭಾರಿ ಕುತೂಹಲ, ಬಹು ನಿರೀಕ್ಷಿತ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ ಎನ್ ಲೈನ್ ಕಾರು ಬಿಡುಗಡೆಯಾಗಿದೆ. ಕಳೆದೊಂದು ತಿಂಗಳಿನಿಂದ ಕ್ರೆಟಾ ಎನ್ ಲೈನ್ ಕಾರು ಭಾರಿ ಸಂಚಲನ ಸೃಷ್ಟಿಸಿತ್ತು.
 

ಹೊಚ್ಚ ಹೊಸ ಕ್ರೆಟಾ ಎನ್ ಲೈನ್ ಕಾರು 16.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಪ್ರಿಮಿಯಂ ಕ್ಲಾಸ್ ಕ್ರೆಟಾ ಇದೀಗ ಎಲ್ಲರ ಗಮನಸೆಳೆಯುತ್ತಿದೆ.

Tap to resize

ಹೊಸ ಕ್ರೆಟಾ ಎನ್ ಲೈನ್ ಕಾರಿನ ಬುಕಿಂಗ್ ಫೆಬ್ರವರಿ ತಿಂಗಳಲ್ಲಿ ಆರಂಭಗೊಂಡಿತ್ತು. 25 ರೂಪಾಯಿ ಮುಂಗಡ ಪಾವತಿ ಮಾಡಿ ಕಾರು ಬುಕಿಂಗ್ ಮಾಡಿಕೊಳ್ಳಬಹುದು.
 

ಹ್ಯುಂಡೈ ಎನ್ ಲೈನ್ ಸೀರಿಸ್ ಕಾರುಗಳನ್ನು 2021ರಿಂದ ಬಿಡುಗಡೆ ಮಾಡುತ್ತಿದೆ. ಮೊದಲ ಐ20 ಎನ್ ಲೈನ್, ಬಳಿಕ ವೆನ್ಯೂ ಎನ್ ಲೈನ್ ಕಾರು ಬಿಡುಗಡೆ ಮಾಡಿತ್ತು. ಇದೀಗ ಕ್ರೆಟಾ ಈ ಸಾಲಿಗೆ ಸೇರಿಕೊಂಡಿದೆ.
 

ಹ್ಯುಂಡೈ ಎನ್ ಲೈನ್ ಕಾರು 1.5 ಲೀಟರ್ ಟರ್ಬೋ ಟಿಡಿಜಿಐ ಪೆಟ್ರೋಲ್ ಎಂಜಿನ್ ಹೊಂದಿದೆ. 157.81 ಬಿಹೆಚ್‌ಪಿ ಪವರ್ ಹಾಗೂ 253 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
 

1 ಲೀಟರ್ ಪೆಟ್ರೋಲ್‌ಗೆ 18 ಕಿಲೋಮೀಟರ್ ಮೈಲೇಜ್ ನೀಡಲಿದೆ. 7 ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ.
 

0-100 ಕಿ.ಮೀ ವೇಗವನ್ನು ಕೇವಲ 8.9 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ. ನಾರ್ಮಲ್, ಇಕೋ, ಸ್ಪೋರ್ಟ್ಸ್ ಎಂಬ ಮೂರು ಮೊಡ್‌ಗಳಲ್ಲಿ ಕಾರು ಡ್ರೈವ್ ಮಾಡಬಹುದು.
 

18 ಇಂಚಿನ್ ಅಲೋಯ್ ವ್ಹೀಲ್, 10.25 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್, ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಹಾಗೂ ಟೈಲ್ ಲೈಟ್ಸ್, ಪನೋರಮಿಕ್ ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
 

Latest Videos

click me!