ವಿಶ್ವದ ಅತೀ ದೊಡ್ಡ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ ಫೋರ್ಡ್ ಇದೀಗ ತನ್ನ ಗೇರ್ ಬದಲಾಯಿಸಿದೆ. ಭಾರತ ಸೇರಿದಂತೆ ಕೆಲ ದೇಶಗಳಿಂದ ಮಾರಾಟ ಸ್ಥಗತಿಗೊಳಿಸಿದ ಬಳಿಕ ಇದೀಗ ಭರ್ಜರಿಯಾಗಿ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ.
ಫೋರ್ಡ್ ಇದೀಗ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಹಾಗೂ ಎಲೆಕ್ಟ್ರಿಕ್ ಪಿಕ್ ಅಪ್ ವಾಹನ ಬಿಡುಗಡೆಗೆ ಸಜ್ಜಾಗಿದೆ. ಕೈಗೆಟುಕುವ ದರದಲ್ಲಿ ಫೋರ್ಡ್ ಈ ವಾಹನಗಳನ್ನು ಬಿಡುಗಡೆ ಮಾಡಲಿದೆ.
3 ಸಾಲಿನ ಎಸ್‌ಯುವಿ ಅಂದರೆ 7 ಸೀಟರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲಿದೆ. ಪ್ರಮುಖವಾಗಿ ಈ ಇವಿ ಕಾರು ಚೀನಾದ ಬಿವೈಡಿ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.
ಬಿವೈಡಿ ಸೇರಿದಂತೆ ಚೀನಾದ ಕೆಲ ಆಟೋ ಕಂಪನಿಗಳು ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡುತ್ತಿದೆ. ಹೀಗಾಗಿ ಮಾರುಕಟ್ಟೆ ವಿಸ್ತರಿಸಲು ಫೋರ್ಡ್ ಇದೀಗ ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ವಾಹನ ನೀಡಲಿದೆ.
ಅಮೆರಿಕ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಚೀನಾ ಕಾರುಗಳಿಗೆ ಬೇಡಿಕೆ ಕಡಿಮೆ. ಹೀಗಾಗಿ ಇಲ್ಲಿ ಫೋರ್ಡ್ ತನ್ನು ಕಡಿಮೆ ಬೆಲೆ ವಾಹನ ಮೂಲಕ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ.
ಮೂಲಗಳ ಪ್ರಕಾರ ಫೋರ್ಡ್ ಸರಿಸರುಮಾರು 20 ಲಕ್ಷ ರೂಪಾಯಿ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಹಾಗೂ ಪಿಕ್‌ಅಪ್ ವಾಹನ ಬಿಡುಗಡೆ ಮಾಡಲು ಮುಂದಾಗಿದೆ. ಈ ಮೂಲಕ ಟೆಸ್ಲಾ ಕಾರುಗಳಿಗೆ ಸೆಡ್ಡು ಹೊಡೆಯಲಿದೆ.
ಫೋರ್ಡ್ ಈಗಾಗಲೇ ಲೋ ಕಾಸ್ಟ್ ಕಾರುು ಹಾಗೂ ಪಿಕ್ ಅಪ್ ಉತ್ಪಾದನೆಗೆಯಲ್ಲಿ ತೊಡಗಿಸಿಕೊಂಡಿದೆ. 2026ರಲ್ಲಿ ಫೋರ್ಡ್ ಕೈಗೆಟುಕುವ ದರದ ಕಾರುಗಳು ಬಿಡುಗಡೆಯಾಗಲಿದೆ.
ಸದ್ಯ ಭಾರತದಲ್ಲಿ ಫೋರ್ಡ್ ಕಾರುಗಳು ಮಾರಾಟವಿಲ್ಲ. ಆದರೆ 2026ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳೊಂದಿಗೆ ಫೋರ್ಡ್ ಭಾರತಕ್ಕೆ ಮರು ಎಂಟ್ರಿಕೊಡುವ ಸಾಧ್ಯತೆಗಳಿವೆ.