ಹೊಚ್ಚ ಹೊಸ ಫೋರ್ಡ್ ಇಕೋಸ್ಪೋರ್ಟ್ ಬಿಡುಗಡೆ; ಹೆಚ್ಚಾಯ್ತು SUV ಪೈಪೋಟಿ!

First Published | Mar 11, 2021, 8:32 PM IST

ಫೋರ್ಡ್ ಇಕೋಸ್ಪೋರ್ಟ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಕಾರಿನ ಹಿಂಭಾಗದಲ್ಲಿ ರೇರ್ ವೀಲ್ ಹೊಸ ಇಕೋಸ್ಪೋರ್ಟ್‌ನಲ್ಲಿ ಇಲ್ಲ. ಹೀಗಾಗಿ ಹಿಂಭಾಗದ ವಿನ್ಯಾಸದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ನೂತನ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್ ಬಿಡುಗಡೆಯಾಗಿದೆ. ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

ಗ್ರಾಹಕರು ಏನನ್ನು ಬಯಸುತ್ತಾರೋ ಅದನ್ನು ಹಾಗೂ ಮೌಲ್ಯವನ್ನು ನೀಡುವ ಉದ್ದೇಶದಿಂದ ಫೋರ್ಡ್ ಇಂಡಿಯಾ ಇಂದು ಇಕೊಸ್ಪೋರ್ಟ್ ಸರಣಿಯ ಹೊಚ್ಚಹೊಸ ವೇರಿಯೆಂಟ್ ಅನ್ನು ಪೆಟ್ರೋಲ್ 10.49 ಲಕ್ಷ ಮತ್ತು ಡೀಸೆಲ್ ವೇರಿಯೆಂಟ್‍ಗಳಿಗೆ 10.99 ಲಕ್ಷ ಬೆಲೆಗಳಲ್ಲಿ(ಎಕ್ಸ್ ಶೋ ರೂಂ) ಬಿಡುಗಡೆ ಮಾಡಿದೆ. ಫೋರ್ಡ್ ಇಕೊಸ್ಪೋರ್ಟ್ SE ರೂಪಿಸಿದ ಹೊಸ ವೇರಿಯೆಂಟ್ ಅದರ ಅಮೆರಿಕನ್ ಮತ್ತು ಯೂರೋಪಿಯನ್ ಸಹವರ್ತಿಗಳಿಂದ ವಿನ್ಯಾಸದ ಸಂಕೇತಗಳನ್ನು ಪಡೆದಿದ್ದು ಅಲ್ಲಿ ರಿಯರ್-ಮೌಂಟೆಡ್ ಸ್ಪೇರ್ ವ್ಹೀಲ್‍ನೊಂದಿಗೆ ಮಾರಾಟವಾಗುತ್ತದೆ.
“ಗ್ರಾಹಕರು ಹೆಚ್ಚಾಗಿ ವಿನ್ಯಾಸದಲ್ಲಿ ಜಾಗತಿಕ ಮೈಲಿಗಲ್ಲುಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಹೊಸ ಫೋರ್ಡ್ ಇಕೊಸ್ಪೋರ್ಟ್ ಎಸ್‍ಇ ರೀತಿಯ ವಿಶಿಷ್ಟ ಹಾಗೂ ಅನನ್ಯವಾದ ಅಂಶಗಳಿಗೆ ಎದುರು ನೋಡುತ್ತಿದ್ದಾರೆ” ಎಂದು ಫೋರ್ಡ್ ಇಂಡಿಯಾದ ಮಾರ್ಕೆಟಿಂಗ್, ಸೇಲ್ಸ್ ಅಂಡ್ ಸರ್ವೀಸ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ವಿನಯ್ ರೈನಾ ಹೇಳಿದರು. “ಎಸ್‍ಇ ಇಕೊಸ್ಪೋರ್ಟ್‍ನ ಫನ್ ಟು ಡ್ರೈವ್ ಅಂಶಗಳನ್ನು ಹಾಗೂ ಅಸಾಧಾರಣ ಸುರಕ್ಷತೆ ಮತ್ತು ಈ ವರ್ಗದ ಅತ್ಯುತ್ತಮ ತಂತ್ರಜ್ಞಾನಗಳಾದ ಸಿಂಕ್ 3ಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ” ಎಂದರು.
Tap to resize

ಅತ್ಯಂತ ಸೊಗಸಾಗಿ ವಿನ್ಯಾಸಗೊಳಿಸಲಾದ ಟೈಲ್‍ಗೇಟ್ ಅಲ್ಲದೆ ಹೊಸ ಡ್ಯುಯಲ್-ಟೋನ್ ರಿಯರ್ ಬಂಪರ್ ಸಿಲ್ವರ್ ಅಪ್ಲಿಕ್ ಹೊಂದಿದ್ದು ಎಸ್‍ಇ ವೇರಿಯೆಂಟ್ ಇಕೊಸ್ಪೋರ್ಟ್‍ನ ಬೋಲ್ಡ್‍ಗ್ರಿಲ್‍ನೊಂದಿಗೆ ದೃಢ, ಶಕ್ತಿಯುತ ನೋಟವನ್ನು 16-ಇಂಚು ಅಲಾಯ್‍ಗಳೊಂದಿಗೆ ಉಳಿಸಿಕೊಂಡಿದೆ ಮತ್ತು ಅದರ ಎಸ್‍ಯುವಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಹೈ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ
ಇಕೊಸ್ಪೋರ್ಟ್ ಎಸ್‍ಇ ಉನ್ನತ ತಂತ್ರಜ್ಞಾನದ ಪರಂಪರೆ ಹಾಗೂ ಫೋರ್ಡ್ ಪ್ರಖ್ಯಾತ ಸಿಂಕ್ 3 ಇನ್ಫೊಟೈನ್‍ಮೆಂಟ್ ಸಿಸ್ಟಂನ ಕನೆಕ್ಟಿವಿಟಿ ಮುಂದಕ್ಕೆ ಕೊಂಡೊಯ್ಯುತ್ತಿದ್ದು ಅದು ಆಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯಿಡ್ ಆಟೊ ಕಂಪ್ಯಾಟಿಬಲ್ ಅಲ್ಲದೆ ಫೋರ್ಡ್ ಪಾಸ್ ಇಂಟಿಗ್ರೇಷನ್ ಹೊಂದಿದೆ.
ಫೋರ್ಡ್ ಇಕೊಸ್ಪೋರ್ಟ್ ಜಾಗತಿಕವಾಗಿ ಖ್ಯಾತಿ ಪಡೆದ ಮೊಬಿಲಿಟಿ ಮತ್ತು ಕನೆಕ್ಟಿವಿಟಿ ಪರಿಹಾರ ಫೋರ್ಡ್‍ಪಾಸ್ ಅನ್ನು ತನ್ನ ಇಡೀ ಸರಣಿಯಲ್ಲಿ ನೀಡುತ್ತಿರುವ ಏಕೈಕ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ.
ಹೊಸ ಇಕೊಸ್ಪೋರ್ಟ್ ಎಸ್‍ಇಯನ್ನು ಫೋರ್ಡ್‍ನ ವಿಶ್ವಾಸಾರ್ಹ 1.5ಲೀ ಥ್ರೀ-ಸಿಲಿಂಡರ್ ಟಿಐವಿಸಿಟಿ ಪೆಟ್ರೋಲ್ ಎಂಜಿನ್‍ನೊಂದಿಗೆ ನೀಡಲಾಗುತ್ತಿದ್ದು ಅದು ಈ ವರ್ಗದ ಅತ್ಯುತ್ತಮ 122ಪಿಎಸ್ ಪವರ್ ಮತ್ತು 149 ಎನ್‍ಎಂ ಟಾರ್ಕ್ ಅಲ್ಲದೆ ಈ ವರ್ಗದ ಮುಂಚೂಣಿಯ ಕಾರ್ಯಕ್ಷಮತೆಯ 1.5ಲೀ ಟಿಡಿಸಿ ಡೀಸೆಲ್ ಎಂಜಿನ್ ಹೊಂದಿದ್ದು 100ಪಿಎಸ್ ಉನ್ನತ ಶಕ್ತಿ ಮತ್ತು 215 ಎನ್‍ಎಂ ಗರಿಷ್ಠ ಟಾರ್ಕ್ ನೀಡುತ್ತದೆ. ಎರಡೂ ಎಂಜಿನ್‍ಗಳು ಫೋರ್ಡ್‍ನ ಪ್ರತಿಕ್ರಿಯಾತ್ಮಕ ಮತ್ತು ಚುರುಕಾದ ಫೈವ್-ಸ್ಪೀಡ್ ಮ್ಯಾನ್ಯುಯಲ್ ಗೇರ್‍ಬಾಕ್ಸ್ ಹೊಂದಿವೆ.
ಅದರ ಸಾಧನೆಗಳ ಪಟ್ಟಿಗೆ ಸೇರ್ಪಡೆ ಮಾಡುತ್ತಾ ಫೋರ್ಡ್ ಇಕೊಸ್ಪೋರ್ಟ್ ತನ್ನ ಕಾಂಪ್ಯಾಕ್ಟ್ ವರ್ಗದಲ್ಲಿ ಆಟೊಕಾರ್ ಇಂಡಿಯಾದ ತನ್ನ 2020 ಮೇಂಟೆನೆನ್ಸ್ ರಿಪೋರ್ಟ್‍ನಲ್ಲಿ ನಿರ್ವಹಣೆಯಲ್ಲಿ ಕಡಿಮೆ ವೆಚ್ಚದ್ದು ಎಂಬ ರೇಟಿಂಗ್ ಪಡೆದಿದೆ. ಈ ವರದಿಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ನಿರ್ವಹಣೆಯ ವೆಚ್ಚವು ಈ ವರ್ಗದಲ್ಲಿ ಅತ್ಯಂತ ಕಡಿಮೆ ಇದ್ದು 60,000 ಕಿ.ಮೀ.ಗೆ ಅಥವಾ ಐದು ವರ್ಷದ ಮಾಲೀಕತ್ವದ ಆವರ್ತಕ್ಕೆ ರೂ.21,754(ಅಥವಾ ಪ್ರತಿ ಕಿಲೋಮೀಟರ್‍ಗೆ 36 ಪೈಸೆ) ಹೊಂದಿದೆ.
ಫೋರ್ಡ್ ಇತ್ತೀಚೆಗೆ ಬಿಡುಗಡೆಯಾದ ಮಾದರಿ 2021 ಇಕೊಸ್ಪೋರ್ಟ್ ಸರಣಿಯು ಸರಿಸಾಟಿ ಇರದ ಸುರಕ್ಷತೆ, ಕನೆಕ್ಟಿವಿಟಿ ಮತ್ತು ಅನುಕೂಲವನ್ನು ಇವುಗಳೊಂದಿಗೆ ನೀಡುತ್ತವೆ: ಹೆಚ್ಚಿಸಲಾದ ರಕ್ಷಣೆಗೆ 6 ಏರ್‌ಬ್ಯಾಗ್, 3 ಇನ್ಫೊಟೈನ್‍ಮೆಂಟ್ ಸಿಸ್ಟಂ ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯಿಡ್ ಆಟೊ ಕಂಪ್ಯಾಟಿಲಿಬಿಟಿ ಇಕೊಸ್ಪೋರ್ಟ್ SEಯಲ್ಲಿ ಮತ್ತು ಟಾಪ್-ಆಫ್-ದಿ ಲೈನ್ ಎಸ್ ವೇರಿಯೆಂಟ್. ಬಹುತೇಕ ವೇರಿಯೆಂಟ್‍ಗಳಲ್ಲಿ 9-ಇಂಚು ಟಚ್‍ಸ್ಕ್ರೀನ್-ಆಧರಿತ, ಇನ್ಫೊಟೈನ್‍ಮೆಂಟ್ ಸಿಸ್ಟಂ ಮತ್ತು ಎಂಬೆಡ್ಡೆಡ್ ನ್ಯಾವಿಗೇಷನ್ ಲಭ್ಯವಿದೆ.
ಇಕೊಸ್ಪೋರ್ಟ್ ಎಸ್‍ಇ ಒಳಗೊಂಡು ಅರ್ಧದಷ್ಟು ವೇರಿಯೆಂಟ್ ಸರಣಿಯಲ್ಲಿ ಸನ್-ರೂಫ್, ಆಟೊಮ್ಯಾಟಿಕ್ ಎಚ್‍ಐಡಿ ಹೆಡ್‍ಲ್ಯಾಂಪ್ಸ್, ಡೇಟೈಮ್ ರನ್ನಿಂಗ್ ಲೈಟ್ಸ್, ಎಲೆಕ್ಟ್ರೊಕ್ರೋಮಿಕ್ ಮಿರರ್, ರೈನ್-ಸೆನ್ಸಿಂಗ್ ವೈಪರ್ಸ್, ಪುಷ್-ಬಟನ್ ಸ್ಟಾರ್ಟ್ ಮತ್ತು ಅಸಂಖ್ಯ ಇತರೆ ಅಂತರ್ಬೋಧೆಯ ವಿಶೇಷತೆಗಳ ಮೂಲಕ ಡ್ರೈವರ್ ಅಸಿಸ್ಟೆನ್ಸ್ ಫೀಚರ್ಸ್ ಮೂಲಕ ಸರಿಸಾಟಿ ಇರದ ಅನುಕೂಲ ಈ ಕಾರಿನಲ್ಲಿದೆ.

Latest Videos

click me!