ಕಾರಿನೊಳಗೆ, ಡ್ಯಾಶ್‌ಬೋರ್ಡ್‌ನಲ್ಲಿ ಅಲಂಕಾರಿಕ ವಸ್ತು ಇಡುವಂತಿಲ್ಲ; ಸರ್ಕಾರದ ಮಹತ್ವದ ಆದೇಶ!

First Published Mar 7, 2021, 2:47 PM IST

ಭಾರತದಲ್ಲಿ ವಾಹನ ನಿಯಮಗಳು ಬಿಗಿಗೊಳ್ಳುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಸುರಕ್ಷತೆಗೆ ಹೊಸ ನಿಯಮ ಜಾರಿಗೊಳಿಸಿದೆ. ಇದೀಗ ಕಾರಿನೊಳಗೆ ಅಲಂಕಾರಿಕ ವಸ್ತುಗಳನ್ನಿಡುವುದನ್ನು ಸರ್ಕಾರ ನಿಷೇಧಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ವಾಹನ ತಯಾರಕರು ಹಾಗೂ ವಾಹನ ಮಾಲೀಕರು, ಚಾಲಕರ ನಿಯಮಗಳು ಮತ್ತಷ್ಟು ಕಠಿಣಗೊಳ್ಳುತ್ತಿದೆ. ಸುರಕ್ಷತಾ ದೃಷ್ಟಿಯಿಂದ ಸರ್ಕಾರ ನಿಯಮಗಳನ್ನು ಬಿಗಿಗೊಳಿಸುತ್ತಿದೆ. ಇದೀಗ ಕಾರಿನೊಳಗೆ ಡೆಕೊರೇಶನ್ ಮಾಡುವುದನ್ನು ಕೇರಳ ಸರ್ಕಾರ ಬ್ಯಾನ್ ಮಾಡಿದೆ.
undefined
ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್ಲಾ ಕಾರುಗಳಿಗೆ ಡ್ಯುಯೆಲ್ ಏರ್‌ಬ್ಯಾಗ್ ಕಡ್ಡಾಯ ಮಾಡಿದೆ. ಇದರ ಬೆನ್ನಲ್ಲೇ ಕೇರಳ ಸರ್ಕಾರ ಕಾರಿನೊಳಗೆ, ಡ್ಯಾಶ್‌ಬೋರ್ಡ್, ಹಿಂಭಾಗದಲ್ಲಿ ಅಲಂಕಾರಿಗ ವಸ್ತುಗಳನ್ನು ಇಡುವುದವನ್ನು ನಿಷೇಧಿಸಿದೆ.
undefined
ಕಾರಿನ ಮುಂಭಾಗದಲ್ಲಿ ಹಲವು ಅಲಂಕಾರಿಕ ವಸ್ತುಗಳು, ವಿಂಡ್ ಶೀಲ್ಡ್ ಒಳಗಿರುವ ರೇರ್ ವಿವ್ಯೂ ಮಿರರ್‌ನಲ್ಲಿ ಅಲಂಕಾರಿಕ ವಸ್ತುಗಳನ್ನು ಹಾಕುವುದು ಸಾಮಾನ್ಯವಾಗಿದೆ. ಆದರೆ ಇನ್ನು ಮುಂದೆ ಇದು ಸಾಧ್ಯವಿಲ್ಲ.
undefined
ಡ್ಯಾಶ್‌ಬೋರ್ಡ್, ಮುಂಭಾಗ ಮಾತ್ರವಲ್ಲ, ಹಿಂಭಾಗದಲ್ಲಿ ಡಾಲ್ ಸೇರಿದಂತೆ ಹಲವು ವಸ್ತುಗಳನ್ನಿಡುವುದು ಸಾಮಾನ್ಯವಾಗಿದೆ. ನಾಯಿ, ಹುಲಿ ಗೊಂಬೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಇನ್ನು ಮುಂದೆ ಇದ್ಯಾವುದಕ್ಕೂ ಕೇರಳದಲ್ಲಿ ಅವಕಾಶವಿಲ್ಲ.
undefined
ಕೇರಳ ದಿಢೀರ್ ಈ ನಿರ್ಧಾರಕ್ಕೆ ಬಂದಿಲ್ಲ. ಅಲಂಕಾರಿಕ ವಸ್ತುಳನ್ನಿಡುವುದರಿಂದ ಚಾಲಕನಿಗೆ ಡ್ರೈವಿಂಗ್ ವೇಳೆ ಕಾರಿನ ಮುಂಭಾಗ ಹಾಗೂ ಹಿಂಭಾಗದ ನೋಟ ಸರಿಯಾಗಿರುವುದಿಲ್ಲ. ಅಲಂಕಾರಿಕ ವಸ್ತುಗಳಿಂದ ಕ್ಲೀಯರ್ ವೀವ್ಯೂ ಸಿಗುವುದಿಲ್ಲ
undefined
ಚಾಲಕನಿಗೆ ದೃಷ್ಟಿಗೆ ಈ ವಸ್ತುಗಳು ಅಡ್ಡಿಯಾಗುವ ಕಾರಣ ಅಪಘಾತಗಳಿಗೆ ಎಡೆಮಾಡಿಕೊಡುತ್ತದೆ. ಹೀಗಾಗಿ ಕಾರಿನೊಳಗೆ ಯಾವುದೇ ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ಕೇರಳ ನಿಷೇಧಿಸಿದೆ.
undefined
ಅಪಘಾತದ ವೇಳೆ ಈ ರೀತಿಯ ಅಲಂಕಾರಿಕ ವಸ್ತುಗಳು, ಗೊಂಬೆಗಳು ಪ್ರಯಾಣಿಕರಿಗೆ ತೀವ್ರ ಗಾಯವನ್ನು ಮಾಡಲಿದೆ. ಹೀಗಾಗಿ ಕೇರಳ ಸರ್ಕಾರ ಕಟ್ಟು ನಿಟ್ಟಿನ ಸೂಚನೆಯನ್ನು ಪೊಲೀಸರಿಗೆ ನೀಡಿದೆ.
undefined
click me!