ಭಾರತದಲ್ಲಿ ವೆಹಿಕಲ್ ಸ್ಟಾಂಡರ್ಡ್ ಬದಲಾಗಿದೆ. ಈ ಹಿಂದೆ ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಇಷ್ಟು ಮಾತ್ರ ಪ್ರಮುಖ ವಿಚಾರವಾಗಿತ್ತು. ಆದರೆ ಈಗ ಕೈಗೆಟುಕುವ ದರ, ಗರಿಷ್ಠ ಮೈಲೇಜ್ ಜೊತೆಗೆ ಸುರಕ್ಷತೆ ಅತೀ ಮುಖ್ಯವಾಗಿದೆ.
ಹೀಗಾಗಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದೆ. ಇದೀಗ ಎಲ್ಲಾ ಕಾರಿಗೂ ಡ್ಯುಯೆಲ್ ಏರ್‌ಬ್ಯಾಗ್ ಕಡ್ಡಾಯ ಮಾಡಿದೆ.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಎಪ್ರಿಲ್ 1, 2021ರಿಂದ ಎಲ್ಲಾ ಹೊಸ ವಾಹನಗಳಿಗೆ ಡ್ಯುಯೆಲ್ ಏರ್ ಬ್ಯಾಗ್ ಕಡ್ಡಾಯ ಮಾಡಿದೆ. ಡ್ರೈವರ್ ಹಾಗೂ ಕೋ ಪ್ಯಾಸೆಂಜರ್ ಸುರಕ್ಷತೆಗೆ ಏರ್‌ಬ್ಯಾಗ್ ಕಡ್ಡಾಯ ಎಂದಿದೆ.
ಇಲ್ಲೀವರಗೆ ಬೇಸ್ ಮಾಡೆಲ್ ಕಾರುಗಳಲ್ಲಿ ಡ್ರೈವರ್ ಏರ್‌ಬ್ಯಾಗ್ ಮಾತ್ರ ಇರುತ್ತಿತ್ತು. ಇನ್ನು ಮುಂದೆ ಬೇಸ್, ಮಿಡಲ್ ವೇರಿಯೆಂಟ್ ಸೇರಿದಂತೆ ಎಲ್ಲಾ ಕಾರುಗಳಲ್ಲಿ ಕನಿಷ್ಠ 2 ಏರ್‌ಬ್ಯಾಗ್ ಕಡ್ಡಾಯವಾಗಿದೆ
ಸಾಮಾನ್ಯವಾಗಿ ಮಿಡ್ ವೇರಿಯೆಂಟ್ ಕಾರುಗಳಲ್ಲಿ 1 ಏರ್ ಬ್ಯಾಗ್, ಟಾಪ್ ಮಾಡೆಲ್‌ಗಳಲ್ಲಿ ಎರಡಕ್ಕಿಂತ ಹೆಚ್ಚು ಏರ್‌ಬ್ಯಾಗ್ ಅಳವಡಿಸಿರುತ್ತಾರೆ. ಆದರೆ ಬೇಸ್ ಮಾಡೆಲ್ ಕಾರುಗಳಲ್ಲಿ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿತ್ತು.
ಡ್ಯುಯೆಲ್ ಏರ್‌ಬ್ಯಾಗ್ ನಿಯಮದಿಂದ ಭಾರತದಲ್ಲಿ ವಾಹನ ಬೆಲೆ ಮತ್ತೆ ಏರಿಕೆಯಾಗಲಿದೆ. ಈಗಾಗಲೇ BS6, ವಾಹನ ಬಿಡಿ ಭಾಗ, ಸರಕುಗಳ ಮೇಲಿನ ಬೆಲೆ ಹೆಚ್ಚಳದಿಂದ ವಾಹನ ಬೆಲೆ ಕೂಡ ಏರಿಕೆಯಾಗಿದೆ. ಇದೀಗ ಏರ್‌ಬ್ಯಾಗ್ ನಿಯಮದಿಂದ ಮತ್ತೆ ಏರಿಕೆಯಾಗಲಿದೆ.
ಭಾರತದಲ್ಲಿ ಕಡಿಮೆ ಬೆಲೆಗೆ ಗರಿಷ್ಠ ಸುರಕ್ಷತೆ ನೀಡುತ್ತಿರುವ ಹೆಗ್ಗಳಿಕೆಗೆ ಟಾಟಾ ಮೋಟಾರ್ಸ್, ಮಹೀಂದ್ರ ಪಾತ್ರವಾಗಿದೆ. ಕ್ರಾಶ್ ಟೆಸ್ಟ್‌ನಲ್ಲಿ ಈ ಎರಡೂ ಕಂಪನಿ ಕಾರುಗಳು 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.